Home News Viral Video: ಹುಡುಗರೇ.. ‘ಅದಕ್ಕೆ’ ಗಡ್ಡ ಅಡ್ಡಿಯಾಗುತ್ತೆ.. ಪ್ಲೀಸ್ ಕ್ಲೀನ್‌ ಶೇವ್‌ ಮಾಡಿ..! ಯುವತಿಯರಿಂದ ಬೀದಿಗಿಳಿದು...

Viral Video: ಹುಡುಗರೇ.. ‘ಅದಕ್ಕೆ’ ಗಡ್ಡ ಅಡ್ಡಿಯಾಗುತ್ತೆ.. ಪ್ಲೀಸ್ ಕ್ಲೀನ್‌ ಶೇವ್‌ ಮಾಡಿ..! ಯುವತಿಯರಿಂದ ಬೀದಿಗಿಳಿದು ಅಚ್ಚರಿ ಪ್ರತಿಭಟನೆ !!

Hindu neighbor gifts plot of land

Hindu neighbour gifts land to Muslim journalist

Viral Video: ಮಹಿಳೆಯರಿಗೆ, ಯುವತಿಯರಿಗೆ ಅನ್ಯಾಯ-ಮೋಸ ಆದಾಗ ರೋಡಿಗಿಳಿದು ಪ್ರತಿಭಟಿಸುವುದು ಕಾಮನ್. ಅಂತೆಯೇ ಇಲ್ಲೊಂದೆಡೆ ಯುವತಿಯರ ಗುಂಪೊಂದು ತಮಗೆ ಅನ್ಯಾಯ ಆಗಿದೆ ಎಂದು ಪ್ರತಿಭಟನೆ ನಡೆಸಿದೆ. ಆದರೆ ಅವರಿಗಾಗಿರೋ ಅನ್ಯಾಯ, ಪ್ರತಿಭಟನೆಯ ಕಾರಣ ನಿಮಗೆ ಶಾಕ್ ಉಂಟುಮಾಡುತ್ತದೆ. ಯಾಕೆಂದರೆ ಅವರು ಪ್ರತಿಭಟಿಸಿದ್ದು ಪುರುಷರ ಗಡ್ಡದ(Beard) ವಿರುದ್ಧ!!

ಹೌದು, ಕೆಲ ಹುಡುಗಿಯರು ಪುರುಷರ ಗಡ್ಡವನ್ನು ವಿರೋಧಿಸಿ ಪ್ರತಿಭಟನೆ ಮಾಡಿರುವ ವಿಡಿಯೋ ವೈರಲ್(Viral Video)ಆಗಿದೆ. ಹೆಚ್ಚಿನ ಹುಡುಗಿಯರು ನಮಗೆ ಗಡ್ಡ ಬಿಟ್ಟ ಹುಡುಗಿ ಬೇಕು ಅಂತ ಆಸೆ ವ್ಯಕ್ತಪಡಿಸಿದರೆ ಈ ಹುಡುಗಿಯರು ಮಾತ್ರ ಗಡ್ಡ ಬೇಡ ಅನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಹುಡುಗಿಯರು ಕ್ಲೀನ್ ಶೇವ್ ಬಾಯ್‌ಫ್ರೆಂಡ್‌ಗಾಗಿ ರ್ಯಾಲಿ ಮಾಡುತ್ತಿದ್ದಾರೆ. ಅದೇ ಬರಹವಿರುವ ಫಲಕಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ.. ವ್ಯಕ್ತಿಯೊಬ್ಬರು ಹುಡುಗಿಯರ ಈ ಪ್ರತಿಭಟನೆಯ ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವೈರಲ್‌ ವೀಡಿಯೊದಲ್ಲಿ ಹುಡುಗಿಯರು ಹುಡುಗರಂತೆ ಕೃತಕ ಗಡ್ಡವನ್ನು ಧರಿಸಿ ನಗರದ ಬೀದಿಗಳಲ್ಲಿ ಗಡ್ಡಕ್ಕೆ ವಿರೋಧ ವ್ಯಕ್ತಪಡಿಸುತ್ತಾ ರ್ಯಾಲಿ ನಡೆಸುವ ದೃಶ್ಯವಿದೆ. ವಿಡಿಯೋದಲ್ಲಿ ಕೆಲ ಹುಡುಗಿಯರು ಕೈಯಲ್ಲಿ ವಿಚಿತ್ರ ಬರಹವುಳ್ಳ ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿರುವುದನ್ನು ಕಾಣಬಹುದು. ಇನ್ನೂ ವಿಶೇಷ ಅಂದ್ರೆ ಈ ಘಟನೆ ನಡೆದದ್ದು ನಮ್ಮ ದೇಶದಲ್ಲೇ !! ವಿಡಿಯೋ ಮಾತ್ರ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೇಂಡ್‌ ಆಗುತ್ತಿದೆ..

 

View this post on Instagram

 

A post shared by ghantaa (@ghantaa)