Home News Viral Video | ಹರಿಯುತ್ತಿರುವ ನದಿಯನ್ನು ಎಚ್ಚರಿಕೆಯಿಂದ ದಾಟಿದ ಆಡಿನ ಹಿಂಡು; ಜೀವನ ಪಠ್ಯ ಕಲಿಸುವ...

Viral Video | ಹರಿಯುತ್ತಿರುವ ನದಿಯನ್ನು ಎಚ್ಚರಿಕೆಯಿಂದ ದಾಟಿದ ಆಡಿನ ಹಿಂಡು; ಜೀವನ ಪಠ್ಯ ಕಲಿಸುವ ಈ ವಿಡಿಯೋ ವೈರಲ್ !    

Hindu neighbor gifts plot of land

Hindu neighbour gifts land to Muslim journalist


ಮತ್ತೆ ಪ್ರಾಣಿಗಳು, ತನಗೆ ಎಲ್ಲಾ ಗೊತ್ತು ಎನ್ನುವ ಮನುಷ್ಯನಿಗೆ ಬದುಕಿನ ಬೇಸಿಕ್ ಪಾಠ ಮಾಡಲು ಬಂದಿವೆ. ಈ ಸಲ ಆಡುಗಳ ಸರದಿ. ಅಲ್ಲೊಂದು ನದಿ. ತುಂಬಿ ಹರಿಯುವ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಾಂಕ್ರೀಟ್ ಬ್ಲಾಕ್‌ಗಳನ್ನು ಆಡುಗಳ ಹಿಂಡು ಬಹಳ ಎಚ್ಚರಿಕೆಯಿಂದ ಜಿಗಿಯುವ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಹಲವರು ಆಡುಗಳಿಂದ ಕಲಿತ ಪಾಠವನ್ನು ಹಂಚಿಕೊಂಡಿದ್ದಾರೆ.

ಪ್ರಕೃತಿ ಮತ್ತು ಪ್ರಾಣಿಗಳಿಂದ ಮಾನವರಾದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ ಎಂದರೆ ತಪ್ಪಾಗುತ್ತದೆ. ನಾವು ಹೆಚ್ಚು ಕಮ್ಮಿ ಕಲಿತೇ ಇಲ್ಲ ಎನ್ನಬಹುದು. ಇದೀಗ ಆಡುಗಳ ಹಿಂಡೊಂದು ನದಿ ದಾಟುವ ಮೂಲಕ ನಾವು ಬಹಳಷ್ಟು ಪಾಠವನ್ನು ಮತ್ತು ಚೂರಾದರೂ ಸ್ಪೂರ್ತಿಯನ್ನು ಪಡೆಯಲು ಕಾರಣವಾಗಿದೆ. ವೀಡಿಯೊದಲ್ಲಿ ಇರುವಂತೆ, ನದಿಯೊಂದರಲ್ಲಿ ವೇಗವಾಗಿ ನೀರು ಹರಿಯುತ್ತಿರುತ್ತದೆ. ಇದಕ್ಕೆ ಅಡ್ಡಲಾಗಿ ಕಟ್ಟಲಾಗಿರುವ ಕಾಂಕ್ರೀಟ್ ಬ್ಲಾಕ್‌ಗಳನ್ನು ಆ ಬಹಳ ಎಚ್ಚರಿಕೆಯಿಂದ ಜಿಗಿಯುವುದನ್ನು ನೋಡಬಹುದು.

ಭಾರತೀಯ ಪೊಲೀಸ್ ಸೇವಾ ಅಧಿಕಾರಿ ದೀಪಾಂಶು ಕಬ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ 15 ಸೆಕೆಂಡುಗಳ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಇತರರಿಗೆ ಜಾಗ ನೀಡುವ ಮೂಲಕ ನೀವು ಮುಂದೆ ಹೋಗಬಹುದು ಎಂದು ಶೀರ್ಷಿಕೆ ನೀಡಿದ್ದಾರೆ. ಕಾಬ್ರಾ ಅವರು ಹಂಚಿಕೊಂಡಿರುವ ಈ ವಿಡಿಯೋ ವೈರಲ್ ಪಡೆದು ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 16,000ಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ.

ಅನೇಕ ಜನರು ತಮ್ಮ ಸ್ವಂತ ಪಾಠಗಳನ್ನು ಮತ್ತು ವಿಡಿಯೋದಿಂದ ಕಂಡುಕೊಂಡ ಪಾಠವನ್ನು ಟ್ವೀಟ್ ಮಾಡಿದ್ದಾರೆ.
ಪಾಠ 1 : ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, “ನೀವು ಬೇರೆಡೆಗೆ ತಲುಪಲು ಬಯಸಿದರೆ ನೀವು ಇದೀಗ ಆಕ್ರಮಿಸಿಕೊಂಡಿರುವ ಜಾಗವನ್ನು ಖಾಲಿ ಮಾಡಬೇಕು. ಭೌತಶಾಸ್ತ್ರದ ನಿಯಮಗಳು ಈ ತತ್ತ್ವಶಾಸ್ತ್ರವನ್ನು ಸತ್ಯವೆಂದು ಅನುಮತಿಸುತ್ತವೆ, ಅದು ಅಕ್ಷರಶಃ, ಒಂದು ವಸ್ತುವು ಒಂದೇ ಸಮಯದಲ್ಲಿ ಎರಡು ವಿಭಿನ್ನ ಸ್ಥಾನಗಳಲ್ಲಿರಲು ಸಾಧ್ಯವಿಲ್ಲ” ಎಂದು ಸೈನ್ಸ್ ಮತ್ತು ತತ್ವ ಸಿದ್ಧಾಂತಗಳನ್ನು ಸಮೀಕರಿಸಿದ್ದಾರೆ.
ಪಾಠ 2 : ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯಿಸಿ, “ವಿಶೇಷವಾಗಿ ಕಾರ್ಪೊರೇಟ್ ಕಂಪನಿಗಳಲ್ಲಿ ಬೆಳೆಯಲು ಈ ವಿಧಾನ ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ನಿಮ್ಮ ತಂಡದ ಸದಸ್ಯರಿಗೆ ತರಬೇತಿ ನೀಡಿ ಮತ್ತು ಅವರು ಪ್ರದರ್ಶನವನ್ನು ನಡೆಸಲು ಅವಕಾಶ ಮಾಡಿಕೊಡಿ ಮತ್ತು ಅದೇ ಸಮಯದಲ್ಲಿ ನಿಮ್ಮ ನಾಯಕತ್ವದ ಗುಣಗಳಿಂದ ನೀವು ಮುಂದೆ ನಡೆಯುತ್ತೀರಿ ” ಎಂದಿದ್ದಾರೆ.
ಪಾಠ 3: ಗುರಿ ಮುಟ್ಟಲು ಸುಮ್ಮನೆ ನುಗ್ಗಬೇಡ, ದಾರಿ ಮಧ್ಯ ಒಂದಷ್ಟು ಸಮಯ ಪ್ಲಾನ್ ಮಾಡಲು ಬಳಸು.
ಪಾಠ 4: ಗುರಿ ತಲುಪುವುದೇ ಮನಸ್ಸಿನಲ್ಲಿ ಇರದೇ ಇರಲಿ, ಸುರಕ್ಷತೆ ಪ್ರತಿಹೆಜ್ಜೆಯಲ್ಲೂ ಗಮನದಲ್ಲಿರಲಿ.
ಪಾಠ 5: ಅಗತ್ಯ ಬಿದ್ದಾಗ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯಬೇಡಿ.