Home News Viral News: ಕರ್ನಾಟಕದಲ್ಲಿರುವೆ, ಕನ್ನಡ ಕಲಿ.. ನೀನು ಇಲ್ಲಿಗೆ ಭಿಕ್ಷೆ ಬೇಡಲು ಬಂದಿದ್ದೀಯಾ – ಆಟೋ...

Viral News: ಕರ್ನಾಟಕದಲ್ಲಿರುವೆ, ಕನ್ನಡ ಕಲಿ.. ನೀನು ಇಲ್ಲಿಗೆ ಭಿಕ್ಷೆ ಬೇಡಲು ಬಂದಿದ್ದೀಯಾ – ಆಟೋ ಸಾಹಿತ್ಯ ವೈರಲ್ !

Viral News

Hindu neighbor gifts plot of land

Hindu neighbour gifts land to Muslim journalist

Viral News: ರಾಜ್ಯಕ್ಕೆ ಸಾಕಷ್ಟು ಜನರು ಅಂತರಾಜ್ಯದಿಂದ ಬರುತ್ತಾರೆ. ಅವರೆಲ್ಲಾ ತಮ್ಮ ರಾಜ್ಯದ ಭಾಷೆಯನ್ನೇ ಕರ್ನಾಟಕದಲ್ಲೂ ಮಾತನಾಡುತ್ತಾರೆ. ಆದರೆ, ಅವರೆಲ್ಲಾ ಹಲವು ದಿನ ರಾಜ್ಯದಲ್ಲೇ ಇದ್ದರೂ ಕೂಡ ಕನ್ನಡ ಕಲಿಯೋದಿಲ್ಲ, ಕನ್ನಡ ಮಾತಾಡಲ್ಲ ಅಂತವರಿಗಾಗಿ ಇದೀಗ ಆಟೋ ಹಿಂದೆ ಬರೆದ ಸಾಹಿತ್ಯ ವೈರಲ್ ಆಗಿದೆ. ಹೌದು, ಕರ್ನಾಟಕದಲ್ಲಿರುವೆ, ಕನ್ನಡ ಕಲಿ. ನೀನು ಇಲ್ಲಿಗೆ ಭಿಕ್ಷೆ ಬೇಡಲು ಬಂದಿದ್ದೀಯಾ ಎಂದು ಬರೆದಿರುವ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್​ (Viral News) ಆಗುತ್ತಿದೆ.

“You are in Karnataka, learn Kannada. Don’t show your attitude, you f***. You have come to beg here.” ನೀನು ಕರ್ನಾಟಕದಲ್ಲಿರುವೆ. ಕನ್ನಡ ಕಲಿ. ಅಹಂಕಾರ ತೋರಿಸಬೇಕಡ. ನೀನು ಇಲ್ಲಿಗೆ ಭಿಕ್ಷೆ ಬೇಡಲು ಬಂದಿದ್ದೀಯಾ ಎಂದು ಆಟೋದ ಹಿಂದೆ ಬರೆಯಲಾಗಿದೆ.

ಇದನ್ನು ರೋಷನ್​ ರೈ ಎಂಬುವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೊರಗಿನಿಂದ ಬಂದವರನ್ನು ಇಷ್ಟೊಂದು ತುಚ್ಚವಾಗಿ ಕಾಣುವುದು ಸರಿಯಲ್ಲ. ಈ ರೀತಿ ಅತಿ ಕೆಟ್ಟ ಭಾಷೆಯನ್ನು ಬಳಸುವುದು ಸರಿಯಲ್ಲ ಎಂದು ರೋಷನ್​ ರೈ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಟ್ವಿಟರ್ ಬಳಕೆದಾರರು ವಿವಿಧ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Kichha Sudeep Controversy: ತಾಕತ್ ಇದ್ರೆ ಸೂರಪ್ಪ ಬಾಬು ಮನೆ ಅಡ್ರೆಸ್ ಕೊಡ್ಲಿ- ಕಿಚ್ಚನ ಸಪೋರ್ಟ್ ಗೆ ಚಂದ್ರ ಚೂಡ್ !