Home News Viral News: ಮಗುವಿನ ಮೇಲೆ ಬೀದಿನಾಯಿ ದಾಳಿ: ಹೀರೋ ಆಗಿ ಎಂಟ್ರಿ ಕೊಟ್ಟು ರಕ್ಷಿಸಿದ ಸಾಕು...

Viral News: ಮಗುವಿನ ಮೇಲೆ ಬೀದಿನಾಯಿ ದಾಳಿ: ಹೀರೋ ಆಗಿ ಎಂಟ್ರಿ ಕೊಟ್ಟು ರಕ್ಷಿಸಿದ ಸಾಕು ನಾಯಿ, Full loyalty in 5 rupees biscuit ಎಂದ ಸೋಷಿಯಲ್ ಮೀಡಿಯಾ !

Hindu neighbor gifts plot of land

Hindu neighbour gifts land to Muslim journalist

 

News: ನಾಯಿ ಅಂದ್ರೆ ನಿಯತ್ತು ಅಂತ ಎಲ್ಲರಿಗೂ ಗೊತ್ತು. ಅದನ್ನು ಮತ್ತೊಮ್ಮೆ ನಿರೂಪಿಸುವಂತಹ ಘಟನೆ ಇದು. ಇದೀಗ ಈ ನಾಯಿ ನಿಯತ್ತಿಗೆ ಉತ್ತಮ ಉದಾಹರಣೆ ಕೊಡುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Full loyalty in 5 rupees biscuit ಅನ್ನುವ ಸುಂದರ ಹೆಡಿಂಗ್ ಕೊಡಲಾಗಿದೆ ಈ ವಿಡಿಯೋಗೆ.

https://x.com/introvert_hu_ji/status/1817200444017672213

ಎಲ್ಲಿಂದಲೋ ಬಂದ ಬೀದಿ ನಾಯಿಯೊಂದು ಬೀದಿಯಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಅಲ್ಲೇ ಮನೆಯ ಪಕ್ಕದಲ್ಲಿ ಮಲಗಿದ್ದ ಪಕ್ಕದ ಮನೆಯ ಸಾಕು ನಾಯಿ ಬೀದಿ ನಾಯಿಯ ಮೇಲೆ ತಕ್ಷಣ ದಾಳಿ ಮಾಡಿ ಮಗುವನ್ನು ಕಾಪಾಡಿದೆ. ಹೃದಯವನ್ನು ತಟ್ಟಿ ನಾಯಿಗಳ ಮೇಲೆ ಪ್ರೀತಿ ಅಭಿಮಾನ ಹುಟ್ಟಿಸಬಲ್ಲ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯದಲ್ಲಿ ಇಬ್ಬರು ಮಹಿಳೆಯರು ತಮ್ಮ ಮೂವರು ಮಕ್ಕಳ ಜೊತೆ ಮಾತನಾಡುತ್ತಾ ಬೀದಿಯ ಬದಿಯಲ್ಲಿ ಕುಳಿತಿರುವಾಗ ಬೀದಿ ನಾಯಿ ಮಗುವಿನ ಮೇಲೆ ದಾಳಿ ಮಾಡಿದೆ. ಆಯಾ ಸಂದರ್ಭದಲ್ಲಿ ಪಕ್ಕದಲ್ಲಿ ಅವರ ಸಾಕು ನಾಯಿ ಕೂಡ ಕುಳಿತಿತ್ತು. ಆಗ ಅದರಲ್ಲಿ ಒಂದು ಮಗು ರಸ್ತೆಯ ಕಡೆ ಹೋಗಿದೆ.

ಆಗ ಬೀದಿ ನಾಯಿಯೊಂದು ಬಂದು ಮಗುವಿನ ಮೇಲೆ ಎರಗಿದೆ. ದಾಳಿ ನಡೆಸಿ ಮಗುವನ್ನು ಕೆಳಗೆ ಬೀಳಿಸಿದೆ. ಆಗ ಅಲ್ಲಿದ್ದವರೆಲ್ಲಾ ಭಯಗೊಂಡು ಮಗುವನ್ನು ಕಾಪಾಡಲು ಓಡಿ ಬಂದಿದ್ದಾರೆ. ಆದರೆ ಅದಕ್ಕೆ ಅವಕಾಶವೇ ಕೊಡದಂತೆ ಅಲ್ಲಿ ಕುಳಿತಿದ್ದ ಸಾಕು ನಾಯಿ ಬೀದಿ ನಾಯಿಯ ಮೇಲೆ ಪ್ರತಿದಾಳಿ ನಡೆಸಿ ಮಗುವನ್ನು ರಕ್ಷಿಸಿದೆ. ಈ ದೃಶ್ಯ ಅಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ನಡೆದ ಸ್ಥಳ ಮತ್ತು ಸಮಯದ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಅದ್ಬುತ ಕಾಮೆಂಟ್ ಮಾಡಿದ್ದಾರೆ ಈ ವಿಡಿಯೋಗೆ. ಈ ವೀಡಿಯೊ ವೀಕ್ಷಿಸಲು ಈ ಕೆಳಗಿನ ಲಿಂಕ್ ನೋಡಿ.