Home News Belthangady: ವೇಣೂರು: ಪೆರ್ಮುಡ ಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ರಕ್ಷಿತ್ ಶಿವರಾಂ ಆಯ್ಕೆ

Belthangady: ವೇಣೂರು: ಪೆರ್ಮುಡ ಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ರಕ್ಷಿತ್ ಶಿವರಾಂ ಆಯ್ಕೆ

Hindu neighbor gifts plot of land

Hindu neighbour gifts land to Muslim journalist

Belthangady: ಮಾ. 3ರಂದು ಕಂಬಳ ಸಮಿತಿಯ ಅಧ್ಯಕ್ಷ ನಿತೀಶ್ ಹೆಚ್. ಕೋಟ್ಯಾನ್ ರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಸಭೆಯು ನಡೆದಿದ್ದು,

32ನೇ ವರ್ಷದ ವೇಣೂರು ಪೆರ್ಮುಡ (belthangady) ಸೂರ್ಯ ಚಂದ್ರ ಜೋಡುಕರೆ ಕಂಬಳಕೂಟ ಮಾ. 30ರಂದು ನಡೆಸುವುದಾಗಿ ನಿರ್ಧಾರಿಸಲಾಗಿದೆ. ಅಂತೆಯೇ ಸುದೀರ್ಘ 31 ವರ್ಷಗಳಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ದಿ. ಕೆ. ವಸಂತ ಬಂಗೇರ ರವರು ಸೇವೆ ಸಲ್ಲಿಸಿದ್ದು, ಮುಂದಕ್ಕೆ ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರವರನ್ನು ಆಯ್ಕೆ ಮಾಡಲಾಯಿತು.

ಗೌರವ ಮಾರ್ಗದರ್ಶಕರಾಗಿ ಸುಜಿತಾ ವಸಂತ ಬಂಗೇರರವರನ್ನು ಮತ್ತು ಅಧ್ಯಕ್ಷರನ್ನಾಗಿ ನಿತೀಶ್ ಹೆಚ್. ಕೋಟ್ಯಾನ್, ಕಾರ್ಯಾಧ್ಯಕ್ಷರಾಗಿ ಶೇಖ‌ರ್ ಕುಕ್ಕೆಡಿ, ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಭರತರಾಜ್ ಜೈನ್‌ ಪಾಪುದಡ್ಕಗುತ್ತು, ಕೋಶಾಧಿಕಾರಿ ಅಶೋಕ್‌ ಪಾಣೂರು ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.