Home News ಪ್ರೇಮಿಗಳ ದಿನಾಚರಣೆಗೆ ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್ !! | ಕಬ್ಬನ್ ಪಾರ್ಕ್ ಬಳಿ...

ಪ್ರೇಮಿಗಳ ದಿನಾಚರಣೆಗೆ ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್ !! | ಕಬ್ಬನ್ ಪಾರ್ಕ್ ಬಳಿ ಕೆಂಪ ಹಾಗೂ ರಂಗಿ ಕತ್ತೆಯ ವಿವಾಹಕ್ಕೆ ಮೊಳಗಿತು ಮಂಗಳವಾದ್ಯ

Hindu neighbor gifts plot of land

Hindu neighbour gifts land to Muslim journalist

ನಿನ್ನೆ ಪ್ರೇಮಿಗಳ ದಿನ. ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಕತ್ತೆಗಳಿಗೆ ಮದುವೆ ಮಾಡಿಸುವ ಮೂಲಕ ಪ್ರೇಮಿಗಳ ದಿನಾಚರಣೆ ಆಚರಿಸಿದ್ದಾರೆ.

ಪ್ರತಿಬಾರಿಯಂತೆ, ಕತ್ತೆಗಳನ್ನು ಕಬ್ಬನ್ ಪಾರ್ಕ್ ಬಳಿ ಕರೆತಂದು ಕೆಂಪ ಕತ್ತೆಗೆ ಹಳದಿ, ರಂಗಿ ಕತ್ತೆಗೆ ಬಿಳಿ ವಸ್ತ್ರವನ್ನು ಹಾಕಿ ಮಂಗಳ ವಾದ್ಯಗಳೊಂದಿಗೆ ತಾಳಿ ಕಟ್ಟಿಸಿ, ಮೆರವಣಿಗೆ ನಡೆಸಿದರು. ನಂತರ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಅಲ್ಲಿ ಪಾಲ್ಗೊಂಡಿದ್ದ ಪ್ರೇಮಿಗಳಿಗೆ ಗುಲಾಬಿ ಹೂ ಕೊಟ್ಟು ಶುಭ ಹಾರೈಸಿದರು.

ಪ್ರೇಮಿಗಳಿಗೆ ರಕ್ಷಣೆ ದೊರೆಯಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಂತಹ ಒಂದು ಕಾನೂನನ್ನು ರಚಿಸಬೇಕು ಎಂದು ವಾಟಾಳ್ ನಾಗರಾಜ್ ಇದೇ ವೇಳೆ ಒತ್ತಾಯಿಸಿದರು.