Home News US travel ban countries: ನಮ್ಮ ದೇಶಕ್ಕೆ ನಿಮ್ಮ ಅಗತ್ಯ ಇಲ್ಲ ಅಂದ ಟ್ರಂಪ್, ಭಾರತ...

US travel ban countries: ನಮ್ಮ ದೇಶಕ್ಕೆ ನಿಮ್ಮ ಅಗತ್ಯ ಇಲ್ಲ ಅಂದ ಟ್ರಂಪ್, ಭಾರತ ಸೇರಿ ಹಲವರು ಶಾಕ್!

Hindu neighbor gifts plot of land

Hindu neighbour gifts land to Muslim journalist

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ತಮ್ಮ ಟ್ರಂಪ್‌ ತಮ್ಮ ಪ್ರಥಮ ಅವಧಿಯ ಆಡಳಿತದಲ್ಲಿ ಕೆಲ ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಿದ್ದರು. ಇದೀಗ ಆ ಪಟ್ಟಿಯನ್ನು ಪರಿಷ್ಕರಿಸಿದ್ದು, ಮತ್ತೆ ಹಲವರು ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.

ಇತೀಚೆಗೆ ಅಮೆರಿಕಾದ ಕೊಲರಾಡೊ ವಿಶ್ವವಿದ್ಯಾಲಯದ ಸಮೀಪ ಇಸ್ರೇಲ್ ಪರ ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿಗಳ ಮೇಲೆ ಆಗಂತುಕನೊಬ್ಬ ತೈಲ ಬಾಂಬ್ ಎಸೆದಿದ್ದ. ಅಮೇರಿಕಾದಲ್ಲಿ ದೇಶದಲ್ಲಿ ಅಕ್ರಮವಾಗಿ ನೆಲಸಿದ್ದ ಈ ವ್ಯಕ್ತಿಯ ವಿರುದ್ಧ ಅಮೆರಿಕದ ಅಧಿಕಾರಿಗಳು ಆರೋಪ ಹೊರಿಸಿದ್ದರು. ಇದೀಗ ಅಮೆರಿಕಾ ಪ್ರಯಾಣ ನಿಷೇಧ ಪಟ್ಟಿ ಪರಿಷ್ಕರಿಸಲು ಈ ಘಟನೆಯೇ ಮೂಲ ಕಾರಣ ಎಂದು ಟ್ರಂಪ್ ಹೇಳಿದ್ದಾರೆ.

ಯಾವ್ಯಾವ ದೇಶಗಳಿವೆ?

ಈಗ ನಿಷೇಧ ಹೇರಿರುವ ಪಟ್ಟಿಯಲ್ಲಿ ಅಫ್ಘಾನಿಸ್ತಾನ, ಮ್ಯಾನ್ಮಾರ್, ಎರಿಟ್ರಿಯಾ, ಹೈಟಿ, ಚಾದ್, ಕಾಂಗೊ ಗಣರಾಜ್ಯ, ಈಕ್ವಟೋರಿಯಲ್ ಗಿನಿ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್ ಮತ್ತು ಯೆಮೆನ್ ದೇಶಗಳ ನಾಗರಿಕರು ಅಮೆರಿಕ ಪ್ರವೇಶಿಸುವುದರ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಇತರ ಏಳು ದೇಶಗಳಾದ ಲಾವೋಸ್, ಸಿಯೆರಾ ಲಿಯೋನ್, ಬುರುಂಡಿ, ಕ್ಯೂಬಾ, ಟೋಗೊ, ತುರ್ಕಮೆನಿಸ್ತಾನ್ ಹಾಗೂ ವೆನಿಜುವೆಲದ ನಾಗರಿಕರ ಮೇಲೆ ಭಾಗಶಃ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧವು ಬರುವ ಸೋಮವಾರದಿಂದ ಜಾರಿಗೆ ಬರಲಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ನಮ್ಮ ದೇಶಕ್ಕೆ ಅವರ ಅಗತ್ಯವಿಲ್ಲ

“ನಮ್ಮ ದೇಶಕ್ಕೆ ಅವರ ಅಗತ್ಯವಿಲ್ಲ’ ಎಂದು ಡೋನಾಲ್ಡ್ ಟ್ರಂಪ್ ಬೋಲ್ಡ್ ಆಗಿ ಹೇಳಿದ್ದಾರೆ. ‘ಕೊಲರಾಡೊದ ಬೌಲ್ಡರ್‌ನಲ್ಲಿ ಇತ್ತೀಚೆಗೆ ಭಯೋತ್ಪಾದಕ ದಾಳಿ ನಡೆದಿದೆ. ವಿದೇಶಿ ಪ್ರಜೆಗಳನ್ನು ಸರಿಯಾಗಿ ಪರಿಶೀಲಿಸದೆಯೇ ನಮ್ಮ ದೇಶ ಪ್ರವೇಶಿಸಲು ಅವಕಾಶ ನೀಡಿದರೆ ಆಗುವ ತಪ್ಪು, ಅಪಾಯ ಏನೆಂಬುದನ್ನು ಈ ಘಟನೆ ತೋರಿಸಿದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಾರ್ವಡ್‌ ವಿದೇಶಿ ವಿದ್ಯಾರ್ಥಿಗಳಿಗೆ ಇಲ್ಲ ವೀಸಾ

ಹಾರ್ವಡ್ ವಿಶ್ವವಿದ್ಯಾಲಯದ ಶಿಕ್ಷಣ ಬಯಸುವ ವಿದೇಶಿ ವಿದ್ಯಾರ್ಥಿಗಳಿಗೆ ವೀಸಾ ನಿಷೇಧಿಸುವುದಾಗಿ ಡೊನಾಲ್ಡ್ ಟ್ರಂಪ್‌ ಘೋಷಿಸಿದ್ದಾರೆ. ಈ ಮೂಲಕ ಅಲ್ಲಿನ ಉನ್ನತ ಶಿಕ್ಷಣದ ಮೇಲೆ ತಮ್ಮ ಆಡಳಿತದ ಹಿಡಿತವನ್ನು ಬಿಗಿಗೊಳಿಸಿದ್ದಾರೆ. ಅಲ್ಲಿ ಹೊಸದಾಗಿ ಅಧ್ಯಯನಕ್ಕೆ ಹೊಸದಾಗಿ ಸೇರಲು ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಬರಲು ಬಯಸುವ ವಿದೇಶಿಗರ ಪ್ರವೇಶ ನಿರ್ಬಂಧಿಸಲು ನಿರ್ಧರಿಸಿದ್ದೇನೆ’ ಎಂದು ಬುಧವಾರ ತಡರಾತ್ರಿ ಟ್ರಂಪ್ ಘೋಷಿಸಿದ್ದಾರೆ.