Home News KSRTC ಪ್ರಯಾಣಿಕರಿಗೆ ಊಹಿಸದ ಅಘಾತ, ಬಸ್ ಟಿಕೆಟ್ ದರ 20% ಹೆಚ್ಚಳ !!

KSRTC ಪ್ರಯಾಣಿಕರಿಗೆ ಊಹಿಸದ ಅಘಾತ, ಬಸ್ ಟಿಕೆಟ್ ದರ 20% ಹೆಚ್ಚಳ !!

KSRTC

Hindu neighbor gifts plot of land

Hindu neighbour gifts land to Muslim journalist

KSRTC: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಕಂಗೆಟ್ಟಿರುವ ಸರ್ಕಾರ ಇದೀಗ KSRTC ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ್ದು ಟಿಕೆಟ್ ದರವನ್ನು ಬರೋಬ್ಬರಿ 20 % ಏರಿಸಲು ನಿರ್ಧರಿಸಿ ಪ್ರಸ್ತಾವನೆಯನ್ನು ಸಲ್ಲಿಸಿದೆಯಂತೆ!!

ಹೌದು, ಕೆಎಸ್​ಆರ್​ಟಿಸಿ ಬಸ್​ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಆದಷ್ಟು ಬೇಗ ಟಿಕೆಟ್ ದರ ಹೆಚ್ಚಾಗಲಿದೆ. 2019ರಲ್ಲಿ ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಆಗಿತ್ತು. ಇಲ್ಲಿ ತನಕ ಟಿಕಟ್ ದರ ಹೆಚ್ಚಳ ಮಾಡದೆ 5 ವರ್ಷ ಆಗಿದೆ. ತೈಲ ಬೆಲೆ ಏರಿಕೆ ಆಗಿರುವುದರಿಂದ ದರ ಏರಿಕೆ ಅನಿವಾರ್ಯ ಎಂದು ಕೆಎಸ್ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ಬೋರ್ಡ್ ಮೀಟಿಂಗ್ ಮಾಡಿ, ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ವಿಚಾರದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ನಿರ್ಣಯ ಕೈಗೊಂಡಿದ್ದೇವೆ. ಈ ಹಿಂದೆ 2019ರಲ್ಲಿ ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಆಗಿತ್ತು. ಆ ಸಂದರ್ಭದಲ್ಲಿ ಡೀಸೆಲ್​ ಬೆಲೆ 60 ರೂ ಇತ್ತು. ಈಗ 93 ರೂ ಆಗಿದೆ. ವಾಹನ ಬಿಡಿ ಭಾಗಗಳ ಬೆಲೆ ಏರಿಕೆಯಾಗಿದೆ. ನೌಕರರಿಗೆ ಸಂಬಳ ಹೆಚ್ಚಳ ಮತ್ತು ಸವಲತ್ತು ಕೊಡುವುದನ್ನ ಮಾಡಬೇಕಾದರೆ ಟಿಕೆಟ್ ದರ ಹೆಚ್ಚಳ ಆಗಲೇಬೇಕು ಎಂದು ಹೇಳಿದ್ದಾರೆ.

ಅಲ್ಲದೆ ಕೆಎಸ್‌ಆರ್‌ಟಿಸಿ ನೌಕರರ ವೇತನ ಪರಿಷ್ಕರಣೆ 2020ರಲ್ಲಿ ಮಾಡಬೇಕಿತ್ತು. ಇಲ್ಲಿ ತನಕ ಮಾಡಿಲ್ಲ. ಈ ಬಾರಿ 2024ರಲ್ಲಿ ವೇತನ ಪರಿಷ್ಕರಣೆ ಮಾಡ್ತೀವಿ. ಹಾಗಾಗಿ ಟಿಕೆಟ್ ದರ ಹೆಚ್ಚಳ ಆಗುತ್ತೆ. ಕಾಲಕಾಲಕ್ಕೆ ಹೆಚ್ಚಳ ಮಾಡಿದ್ರೆ ಹೀಗೆಲ್ಲ ಆಗ್ತಿರಲಿಲ್ಲ. ಕಳೆದ ತ್ರೈ ಮಾಸಿಕದಲ್ಲಿ ಕೆಎಸ್‌ಆರ್​ಟಿಸಿಗೆ 295 ಕೋಟಿ ನಷ್ಟ ಆಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದು, ಇದರ ನಡುವೆಯೇ ಇತ್ತೀಚೆಗಷ್ಟೇ ಹಾಲು, ಪೆಟ್ರೋಲ್‌, ಡೀಸೆಲ್ ದರವನ್ನು ಏರಿಕೆ ಮಾಡಿದ್ದರು. ಇದಕ್ಕೆ ವ್ಯಾಪಕ ಆಕ್ರೋಶಗಳು ಕೂಡ ವ್ಯಕ್ತವಾಗಿದ್ದವು. ಇದೀಗ ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ ದರ ಹೆಚ್ಚಳ ಮಾಡಲು ನಿಗಮ ಮುಂದಾಗಿರುವುದು ಜನಕ್ಕೆ ಶಾಕ್ ನೀಡಿದೆ.

ಪುರುಷರು-ಮಹಿಳೆಯರಿಗೆ ಹೊರೆ:
ಸಾಮಾನ್ಯವಾಗಿ ಪುರುಷರು ದುಡ್ಡು ಕೊಟ್ಟೇ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಉಚಿತವಾಗಿ ಓಡಾಡುವ ಕಾರಣ ಮನೆಯ ಪುರುಷರೂ ಅವರೊಂದಿಗೆ ಹೋಗುವುದು ಅನಿವಾರ್ಯ. ಹೀಗಾಗಿ ಟಿಕೆಟ್ ದರ ಏರಿಕೆ ಅವರ ಜೇಬಿಗೆ ಕತ್ತರಿ ಹಾಕುವುದು ಪಕ್ಕಾ. ಇನ್ನು ಮಹಿಳೆಯರಿಗೆ ಉಚಿತ ಪ್ರಯಾಣ ಅಲ್ಲವೇ? ಅವರಿಗೇನು ಸಮಸ್ಯೆ ಇಲ್ಲ ಬಿಡಿ ಎಂದು ನೀವು ಹೇಳಬಹುದು. ಆದರೆ ಎಲ್ಲಾ ಬಸ್ಸಿನಲ್ಲಿ ಅವರಿಗೆ ಫ್ರಿ ಇಲ್ಲ. ಐರಾವತ, ರಾಜಹಂಸದಂತ ಬಸ್ಸಿನಲ್ಲಿ ಅವರು ಹಣ ನೀಡಿ ಟಿಕೆಟ್ ಪಡೆಯಬೇಕು. ಜೊತೆಗೆ ಅಂತರಾಜ್ಯ ಬಸ್ಸಿನಲ್ಲಿ ಉಚಿತವಿಲ್ಲ. ಹೀಗಾಗಿ ಅವರಿಗೂ ಟಿಕೆಟ್ ದರ ಏರಿಕೆ ಬಿಸಿ ತಟ್ಟಿಲಿದೆ.

Dairymilk Chocolates: ಚಪ್ಪರಿಸಿ ಡೈರಿ ಮಿಲ್ಕ್​ ಚಾಕೋಲೇಟ್​ ತಿನ್ನೋರು ಇಲ್ನೋಡಿ!