

Govt school: ಸರ್ಕಾರಿ ಶಾಲೆಗಳ (Govt school) ವಿದ್ಯಾರ್ಥಿಗಳು ಕೂಡ ಖಾಸಗಿ ಶಾಲೆಯವರ ಮಟ್ಟಕ್ಕೆ ಬೆಳೆಯಬೇಕು ಎನ್ನುವ ಆಶಯದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಯೂನಿಟ್ ಟೆಸ್ಟ್ ಪದ್ಧತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಅಪರೂಪಕ್ಕೆ ಯೂನಿಟ್ ಟೆಸ್ಟ್ ಗಳನ್ನು ಮಾಡಲಾಗುತ್ತಿತ್ತು. ಆದರೆ ಇದೀಗ ಒಂದರಿಂದ ಹತ್ತನೇ ತರಗತಿಯವರೆಗೆ ಪಾಠ ಆಧಾರಿತ ಮೌಲ್ಯಾಂಕನ ಪರೀಕ್ಷೆ ಅನುಷ್ಠಾನಗೊಳಿಸಿದ್ದು, ಇದರ ಮೂಲಕ ಪ್ರತಿ ಅದ್ಯಾಯ ಅದ ಬಳಿಕ ಕಿರು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕಿದೆ. ಆರಂಭದಿಂದಲೇ ವಿದ್ಯಾರ್ಥಿಗಳ ಮೌಲ್ಯಾಂಕನ ಮಾಡಿದಲ್ಲಿ ಮುಂಬರುವ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಬಹುದೆಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಯೋಜನೆ ಜಾರಿಗೊಳಿಸಿದೆ.
ವಿದ್ಯಾರ್ಥಿಗಳಿಗೆ ಪ್ರತಿ ಅಧ್ಯಯನ ಮುಗಿದ ನಂತರ ಪರೀಕ್ಷೆ ಮಾಡುವುದರಿಂದ ಅರ್ಥೈಸಿಕೊಳ್ಳುವುದು, ಕಲಿಕೆಯ ಗುಣಮಟ್ಟದ ಬಗ್ಗೆ ಖಾತ್ರಿಗೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪಾಠ ಆಧಾರಿತ ಮೌಲ್ಯಾಂಕನ ಪರೀಕ್ಷೆಯನ್ನು ಜಾರಿಗೊಳಿಸಲಾಗಿದ್ದು, ಇದು ಪ್ರಸಕ್ತ 2025- 26ನೇ ಶೈಕ್ಷಣಿಕ ಸಾಲಿನಿಂದಲೇ ಇದು ಜಾರಿಗೆ ಬರಲಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಶಾಲೆಗಳಿಗೆ ನೀಡಲಿದೆ. ಬಳಿಕ ಶಾಲೆಗಳು ಇದರ ಆಧಾರದ ಮೇಲೆ ಪರೀಕ್ಷೆ, ಮೌಲ್ಯಾಂಕನ ನಡೆಸಿ ವಿದ್ಯಾರ್ಥಿಗಳು ಪಡೆದನಡೆಸಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಅವರ ಸಾಧನೆಯ ಟ್ಯಾಕಿಂಗ್ ವ್ಯವಸ್ಥೆಯಲ್ಲಿ ಅಪ್ಲೋಡ್ ಮಾಡಬೇಕಿದೆ.
ಪ್ರತಿ ಪರೀಕ್ಷೆ 30 ಅಂಕಗಳಿಗೆ ಮೀಸಲಾಗಿದ್ದು, 25 ಪ್ರಶ್ನೆಗಳು ಇರುತ್ತವೆ. ಇವುಗಳಲ್ಲಿ ಸುಲಭ ಶೇಕಡ 75, ಸಾಮಾನ್ಯ ಶೇಕಡ 25, ಕಠಿಣ ಶೇಕಡ 10 ಎನ್ನುವ ಮಾದರಿಯಲ್ಲಿ ಪ್ರಶ್ನೆಗಳನ್ನು ವಿಭಜಿಸಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗುವುದು. ಬಹುತೇಕ ಪ್ರಶ್ನೆಗಳು ಬಹು ಆಯ್ಕೆ ಮಾದರಿಗಳಿಂದ ಕೂಡಿರುತ್ತದೆ.













