Home News Kodi Shri: ದೇಶಕ್ಕೆ ಊಹಿಸಲಾಗದ ದುಃಖ, ಜನವರಿ ಒಳಗೆ ಬಹುದೊಡ್ಡ ಗಂಡಾಂತರ – ಕೊಡಿಶ್ರೀ ಸ್ಫೋಟಕ...

Kodi Shri: ದೇಶಕ್ಕೆ ಊಹಿಸಲಾಗದ ದುಃಖ, ಜನವರಿ ಒಳಗೆ ಬಹುದೊಡ್ಡ ಗಂಡಾಂತರ – ಕೊಡಿಶ್ರೀ ಸ್ಫೋಟಕ ಭವಿಷ್ಯ

Hindu neighbor gifts plot of land

Hindu neighbour gifts land to Muslim journalist

Kodi Shri: ರಾಜಕೀಯ ವಿಚಾರ, ನೈಸರ್ಗಿಕ ವಿಚಾರ ಹಾಗೂ ಸಾವು ನೋವು, ಮಳೆ ಮತ್ತು ಪ್ರಕೃತಿ ವಿಕೋಪಗಳ ಆದಿಯಾಗಿ ಅನೇಕ ಸಂಗತಿಗಳ ಕುರಿತು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿಯುತ್ತಾರೆ. ಅವರ ಎಲ್ಲ ಭವಿಷ್ಯಗಳು ಕೂಡ ನಿಜವಾಗಿವೆ. ಇದೀಗ ಶ್ರೀಗಳು ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದು, ದೇಶಕ್ಕೆ ಊಹಿಸಲಾಗದ ದುಃಖ ಬರಲಿದೆ, ಜನವರಿ ಒಳಗೆ ಬಹುದೊಡ್ಡ ಗಂಡಾಂತರ ಎದುರಾಗಲಿದೆ ಎಂದು ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು ಮೇಘಸ್ಫೋಟ, ಜಲಪ್ರಳಯ ಹಾಗೂ ವಾಯುವಿನಿಂದ ಆಪತ್ತು ಬರುವ ಬಗ್ಗೆ ಮೊದಲೇ ಹೇಳಿದ್ದೆ. ವಿಮಾನ ಅಪಘಾತ ಸೇರಿದಂತೆ ಕೆಲವು ಆಪತ್ತುಗಳು ಸಂಭವಿಸಿವೆ. ಮುಂದೆ ಇನ್ನೊಂದು ದೊಡ್ಡ ಮೇಘಸ್ಫೋಟ ಸಂಭವಿಸಲಿದೆ. ನಿರೀಕ್ಷೆಗೂ ಮೀರಿದ ದುಃಖ ಬರಲಿದೆ ಎಂದು ಮುನ್ಸೂಚನೆ ನೀಡಿದರು.

ಅಲ್ಲದೆ ಮನುಷ್ಯ ಓಡಾಡುತ್ತಲೇ ಸಾಯುತ್ತಾನೆ. ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿವೆ. ಜನ ಜೀವನ ಅಸ್ಥಿರಗೊಳ್ಳಲಿದೆ ಎಂದಿದ್ದಾರೆ. ಅವರ ಈ ಭವಿಷ್ಯವಾಣಿ ನಿಜಕ್ಕೂ ಆತಂಕ ಮೂಡಿಸುವಂತಿದೆ. ಜೊತೆಗೆ ‘ಸೂಳೆಯ ಮಗನುಟ್ಟಿ ಆಳುವನು ಮುನಿಪುರವ ಯುದ್ಧವಿಲ್ಲದ ಮಡಿಯೇ ಪುರವೆಲ್ಲ ಕೂಳಾದೀತು’ ಎಂದು ಮಾರ್ಮಿಕವಾಗಿ ಸ್ವಾಮೀಜಿ ಹೇಳಿದ್ದಾರೆ. ಇದನ್ನು ಬರೆದಿಟ್ಟುಕೊಳ್ಳಿ. ಇದಕ್ಕೆ ಪರಿಹಾರ ಆಮೇಲೆ ಸೂಚಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:Bagalakote: ಬಾಗಲಕೋಟೆ ಪ್ರವೇಶಕ್ಕೆ ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿಗೆ ನಿರ್ಬಂಧ