Home News Bihar: ಪ್ರಮಾಣವಚನವನ್ನೇ ಓದಲು ಬಾರದ ಶಾಸಕಿ !! ಅಸೆಂಬ್ಲಿ ಒಳಗಿನ ವಿಡಿಯೋ ಕಂಡು ಮತದಾರರು ಶಾಕ್

Bihar: ಪ್ರಮಾಣವಚನವನ್ನೇ ಓದಲು ಬಾರದ ಶಾಸಕಿ !! ಅಸೆಂಬ್ಲಿ ಒಳಗಿನ ವಿಡಿಯೋ ಕಂಡು ಮತದಾರರು ಶಾಕ್

Hindu neighbor gifts plot of land

Hindu neighbour gifts land to Muslim journalist

Bihar: ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಮುಗಿದು, NDA ಮೈತ್ರಿಕೂಟವು ಭರ್ಜರಿ ಜಯಭೇರಿ ಗಳಿಸಿ ಇದೀಗ ಸರ್ಕಾರವನ್ನು ಕೂಡ ರಚಿಸಿದೆ. ನಿತೀಶ್ ಕುಮಾರ್ ಅವರು ಹತ್ತನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಕೂಡ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಇದೀಗ ನೂತನ ಸರ್ಕಾರದ ಮೊದಲ ಅಧಿವೇಶನ ಸಭೆ ಕರೆಯಲಾಗಿದ್ದು, ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಪ್ರಮಾಣ ವಚನವನ್ನು ಬೋಧಿಸಲಾಗುತ್ತಿದೆ.

ನೂತನ ಸರ್ಕಾರದ ಶಾಸಕರು ಪ್ರಮಾಣವಚನ ಸ್ವೀಕರಿಸುವ ಕೆಲವೊಂದು ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಸಂದರ್ಭದಲ್ಲಿ ವೈರಲ್ ಆದ ಒಂದು ವಿಡಿಯೋ ಬಿಹಾರದ ಮತದಾರರನ್ನು ಮಾತ್ರವಲ್ಲದೆ ಭಾರತ ದೇಶದ ಜನರನ್ನು ದಿಗ್ಭ್ರಮೆಗೊಳಿಸಿದೆ. ಕಾರಣ ಆಡಳಿತ ಪಕ್ಷದ ಶಾಸಕಿ ಒಬ್ಬರು ಪ್ರಮಾಣವಚನ ಪತ್ರವನ್ನು ಓದಲು ತಡವರಿಸುತ್ತಿರುವ ದೃಶ್ಯ!! ಓದಲು ತಡವರಿಸುವುದಲ್ಲ ಬಿಡಿ, ಅದರಲ್ಲಿರುವ ಅಕ್ಷರಗಳನ್ನು ಕೂಡ ಆಕೆ ಗುರುತಿಸಲಾಗದೆ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸದ್ಯ ವೈರಲ್ ಆದ ವಿಡಿಯೋದಲ್ಲಿ ಶಾಸಕಿ ಯಾವ ಪಕ್ಷದವರು, ಆಕೆಯ ಹೆಸರೇನು ಎಂಬುದು ಎಲ್ಲಿಯೂ ತಿಳಿಸಲಾಗಿಲ್ಲ. ವಿಡಿಯೋವನ್ನು ನೋಡಿದರೆ ಅವರು ಆಡಳಿತ ಪಕ್ಷಕ್ಕೆ ಸೇರಿದ ಶಾಸಕಿ ಎಂಬುದಾಗಿ ತಿಳಿಯುತ್ತದೆ. ತಮ್ಮ ಸ್ಥಾನದಲ್ಲಿ ನಿಂತು ಪ್ರಮಾಣವಚನವನ್ನು ಪಡೆಯುವ ವೇಳೆ ಒಂದು ಅಕ್ಷರವನ್ನು ಕೂಡ ಉಚ್ಚರಿಸಲಾಗದೆ ಮಣ ಮಣ ಮಣ ಮಂತ್ರ ಹೇಳುವ ರೀತಿ ಆಕೆ ಮಾತನಾಡುವುದನ್ನು ಕಾಣಬಹುದು. ಹಿಂದಿಯಲ್ಲಿ ಒಂದೊಂದೇ ಅಕ್ಷರವನ್ನು ಪಕ್ಕದಲ್ಲಿ ಕುಳಿತ ಶಾಸಕಿ ಒಬ್ಬರು ಅವರಿಗೆ ಹೇಳಿಕೊಡುತ್ತಾ, ತಿದ್ದುವುದನ್ನು ಕೂಡ ನಾವು ಅದರಲ್ಲಿ ಕಾಣಬಹುದು. ಅಲ್ಲದೆ ವಿಧಾನಸಭೆಯ ಸ್ಪೀಕರ್ ಮತ್ತು ಮುಂದಿರುವ ವಿಧಾನಸಭೆ ಕಾರ್ಯದರ್ಶಿಗಳು ಹಾಗೂ ಉಳಿದ ಶಾಸಕರು ಕೂಡ ಇದನ್ನು ಕಂಡರೂ ಮೌನವಹಿಸಿ ಏನು ಮಾಡಲಾಗದೆ ಕುಳಿತಿರುವುದು ವಿಡಿಯೋದಲ್ಲಿ ಗೋಚರವಾಗಿದೆ.