Home News ISPRL: ಉಡುಪಿಯ ಪಾದೂರಿನಲ್ಲಿ ನಿರ್ಮಾಣವಾಗಲಿದೆ ಭೂಗತ ತೈಲ ಸಂಗ್ರಹಣ ಘಟಕ!

ISPRL: ಉಡುಪಿಯ ಪಾದೂರಿನಲ್ಲಿ ನಿರ್ಮಾಣವಾಗಲಿದೆ ಭೂಗತ ತೈಲ ಸಂಗ್ರಹಣ ಘಟಕ!

Hindu neighbor gifts plot of land

Hindu neighbour gifts land to Muslim journalist

ISPRL: ಉಡುಪಿಯ ಪಾದೂರಿನಲ್ಲಿ (Paduru) ಮೇಘಾ ಎಂಜಿನಿಯರಿಂಗ್‌ ಕಂಪನಿ (Megha Engineering & Infrastructures Ltd) ಭೂಗತ ತೈಲ ಸಂಗ್ರಹಣ ಘಟಕವನ್ನು ನಿರ್ಮಿಸಲಿದೆ.

ಮೇಘಾ ಎಂಜಿನಿಯರಿಂಗ್‌ ಇನ್ಫಾಸ್ಟ್ರಕ್ಚರ್‌ ಲಿಮಿಟೆಡ್ ಕಂಪನಿ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ಬಿಡ್‌ ಗೆದ್ದುಕೊಂಡಿದೆ. ಸುಮಾರು 5,700 ಕೋಟಿ ರೂ ವೆಚ್ಚದಲ್ಲಿ 2.5 ದಶಲಕ್ಷ ಮೆಟ್ರಿಕ್‌ ಟನ್ ಸಾಮರ್ಥ್ಯದ ಸಂಗ್ರಹಣ ಘಟಕ ನಿರ್ಮಾಣವಾಗಲಿದೆ.

ಇದನ್ನೂ ಓದಿ:Jemini AI: “ಬ್ಲೌಸ್ ಒಳಗಿದ್ದ ಅದು AI ಗೆ ಹೇಗೆ ಗೊತ್ತಾಯ್ತು?” ಜೆಮಿನಿ ಟ್ರೆಂಡ್‌ ಬಗ್ಗೆ ಶಾಕಿಂಗ್ ಅನುಭವ ಬಿಚ್ಚಿಟ್ಟ ಯುವತಿ, ಬೆಚ್ಚಿಬಿದ್ದ ನೆಟ್ಟಿಗರು!!

ಸಂಗ್ರಹಣಾ ಸೌಲಭ್ಯವನ್ನು ನಿರ್ಮಿಸಲು ಪಾದೂರಿನಲ್ಲಿ 214 ಎಕರೆ ಭೂಮಿಯನ್ನು ಐಎಸ್‌ಪಿಆರ್‌ಎಲ್ ಮೇಘಾ ಎಂಜಿನಿಯರಿಂಗ್‌ ಕಂಪನಿಗೆ ಉಚಿತವಾಗಿ ಹಸ್ತಾಂತರಿಸಲಿದೆ. ಪಾದೂರಿನಲ್ಲಿ ಈಗಾಗಲೇ ತೈಲ ಸಂಗ್ರಹಣ ಘಟಕವನ್ನು ISPRL ಸ್ಥಾಪನೆ ಮಾಡಿದೆ. ಎರಡನೇ ಹಂತದ ಘಟಕ ಸ್ಥಾಪನೆ ಮಾಡುವ ಸಂಬಂಧ ದೇಶೀಯ ಮತ್ತು ಜಾಗತಿಕ ಕಂಪನಿಗಳಿಂದ ISPRL ಬಿಡ್‌ ಆಹ್ವಾನಿಸಿತ್ತು. ಆದರೆ ಜಾಗತಿಕ ಕಂಪನಿಗಳು ಬಿಡ್‌ನಲ್ಲಿ ಭಾಗವಹಿಸಿರಲಿಲ್ಲ ಎಂದು ವರದಿಯಾಗಿದೆ.