Home News Ullala: ರೈಲು ಹಳಿ ಮೇಲೆ ಜಲ್ಲಿಕಲ್ಲು ಇಟ್ಟ ಕಿಡಿಗೇಡಿಗಳು; ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ಜನರು

Ullala: ರೈಲು ಹಳಿ ಮೇಲೆ ಜಲ್ಲಿಕಲ್ಲು ಇಟ್ಟ ಕಿಡಿಗೇಡಿಗಳು; ಭಾರೀ ಶಬ್ದಕ್ಕೆ ಬೆಚ್ಚಿಬಿದ್ದ ಜನರು

Udupi Railway Track

Hindu neighbor gifts plot of land

Hindu neighbour gifts land to Muslim journalist

Ullala: ತೊಕ್ಕೊಟ್ಟು ಓವರ್‌ಬ್ರಿಡ್ಜ್‌ ಗಣೇಶ್‌ ನಗರ ಬಳಿಯ ರೈಲು ಹಳಿಯಲ್ಲಿ ಯಾರೋ ದುಷ್ಕರ್ಮಿಗಳು ಜಲ್ಲಿಕಟ್ಟು ಇಟ್ಟಿರುವ ಘಟನೆಯೊಂದು ನಡೆದಿದ್ದು, ಆದರೆ ಅದರ ಮೇಲೆ ರೈಲು ಸಂಚಾರ ಮಾಡುವಾಗ ಭಾರೀ ದೊಡ್ಡ ಶಬ್ದ ಉಂಟಾಗಿದ್ದು, ಇದರಿಂದ ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ನಡೆದಿದೆ.

ಈ ಘಟನೆ ನಡೆದಿರುವುದು ಗಣೇಶ್‌ ನಗರ ಮತ್ತು ಕಾಪಿಕಾಡು ನಡುವಿನ ಹಳಿಯಲ್ಲಿ. ಕೇರಳದಿಂದ ಮಂಗಳೂರು ಕಡೆಗೆ ಸಂಚರಿಸಿದ ರೈಲಿನಲ್ಲಿ ಭಾರೋ ದೊಡ್ಡ ಪ್ರಮಾಣದ ಸದ್ದು ಉಂಟಾಗಿದೆ. ನಂತರ ಜನರ ಟಾರ್ಚ್‌ಲೈಟ್‌ ಹಿಡಿದು ಹಳಿ ಸಮೀಪದ ಬಂದು ನೋಡಿದಾಗ ಜಲ್ಲಿ ಕಲ್ಲು ಹುಡಿಯಾದ ಸ್ಥಿತಿಯಲ್ಲಿ ಕಂಡಿದೆ.

ಜಲ್ಲಿಕಲ್ಲನ್ನು ಎರಡೂ ಹಳಿಯಲ್ಲಿ ಸಾಲಾಗಿ ಜೋಡಿಸಿ ಇಟ್ಟಿದ್ದರು. ರೈಲ್ವೇ ಸಲಹಾ ಸಮಿತಿ ಸದಸ್ಯರ ದೂರಿನಂತೆ ಉಳ್ಳಾಲ ಪೊಲೀಸರು ಮತ್ತು ರೈಲ್ವೇ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತಪಾಸಣೆ ಮಾಡಿದರು.