Home News Savanuru : ವಿದ್ಯಾರಶ್ಮಿಯಲ್ಲಿ ಯು.ಕೆ.ಜಿ ವಿದ್ಯಾರ್ಥಿಗಳ ಘಟಿಕೋತ್ಸವ

Savanuru : ವಿದ್ಯಾರಶ್ಮಿಯಲ್ಲಿ ಯು.ಕೆ.ಜಿ ವಿದ್ಯಾರ್ಥಿಗಳ ಘಟಿಕೋತ್ಸವ

Hindu neighbor gifts plot of land

Hindu neighbour gifts land to Muslim journalist

Savanuru : ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ೨೦೨೪-೨೫ನೇ ಸಾಲಿನ ಯು.ಕೆ.ಜಿ ತರಗತಿಯ ವಿದ್ಯಾರ್ಥಿಗಳ ಘಟಿಕೋತ್ಸವ ದಿನ ( ಗ್ರಾಜ್ಯುಯೇಶನ್ ಡೇ) ನಡೆಯಿತು.

ಸಮಾರಂಭವನ್ನು ಕಸ್ತೂರಿ ಕಲಾ ಎಸ್.ರೈ ಉದ್ಘಾಟಿಸಿದರು. ಅತಿಥಿಯಾಗಿ ಭಾಗವಹಿಸಿದ್ದ ಸರ್ವೆ ಅಂಗನವಾಡಿ ಶಿಕ್ಷಕಿ ಮೋಹಿನಿ ಎನ್. ಆರ್ ಮಾತನಾಡಿ ,ಮಕ್ಕಳು ದೇಶದ ಮುಂದಿನ ಉತ್ತಮ ಪ್ರಜೆಗಳಾಗಿ ಬೆಳೆಯಲಿ ಎಂದು ಹಾರೈಸಿದರು.

ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ.ಸೀತಾರಾಮ ರೈ , ವಿಜ್ಞಾನ ಬೆಳೆದಂತೆಲ್ಲಾ ಮಕ್ಕಳು ಬೆಳೆದಿದ್ದಾರೆ, ಮಕ್ಕಳನ್ನು ರೂಪಿಸುವ ಕೆಲಸ ಕೇವಲ ಶಿಕ್ಷಕರದ್ದು ಮಾತ್ರವಲ್ಲ.ಪೋಷಕರು ಮತ್ತು ಶಿಕ್ಷಕರು ಸೇರಿದಾಗ ಮಕ್ಕಳ ಭವಿಷ್ಯವನ್ನು ರೂಪಿಸಲು ಸಾಧ್ಯ ಎಂದರು.

ಶಾಲಾ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಡಿ ಮಾತನಾಡಿ ಪೋಷಕರು ಮತ್ತು ಶಿಕ್ಷಕರು ಒಟ್ಟು ಸೇರಿದರೆ ಮಗುವಿನ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎಂದರು. ಪೋಷಕರಾದ ಸಚಿನ್ ಕುಮಾರ್ ಇವರು ಶಾಲೆಯ ಬಗ್ಗೆ ಅಭಿಪ್ರಾಯವನ್ನುತಿಳಿಸಿದರು.

ಎಸ್.ಎನ್.ಆರ್.ರೂರಲ್ ಎಜುಕೇಶನ್ ಟ್ರಸ್ಟ್ ‌ನ ಟ್ರಸ್ಟಿ ರಶ್ಮಿ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರಾಜಲಕ್ಷ್ಮಿ ಎಸ್.ರೈ, ವಿದ್ಯಾರಶ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ
ಶಶಿಕಲಾ ಎಸ್. ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಒಂದನೇ ತರಗತಿಯ ಅವಿ ಅಶ್ವಿನ್ ಶೆಟ್ಟಿ ಸಂವಿಧಾನದ ಪೀಠಿಕೆ ವಾಚಿಸಿ, ಎಲ್.ಕೆ.ಜಿ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು ,ಯು.ಕೆ.ಜಿ ಯ ಕ್ಷಿತಿ ಎಸ್.ಕೆ ಸ್ವಾಗತಿಸಿ, ಮೂರನೆ ತರಗತಿಯ ಹಸ್ಮಿತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ.ಯು.ಕೆ.ಜಿ ಯ ಹವನ್ ಶೆಟ್ಟಿ ವಂದಿಸಿದರು. ಶಿಕ್ಷಕಿಯರಾದ ಸುನೀತ ಜೆ.ಕೆ, ತಿರುಮಲೇಶ್ವರಿ ಕೆ. ಮತ್ತು ಸ್ಮಿತ ಕೆ . ಕಾರ್ಯಕ್ರಮ ನಿರೂಪಿಸಿದರು.