Home News Gold Theft: ಎರಡೂವರೆ ಕೆಜಿ ಚಿನ್ನದ ಬಿಸ್ಕೆಟ್ ಕಳವು – ಸಿಸಿ ಕ್ಯಾಮೆರಾ ಕೊಡ್ತು ಆರೋಪಿ...

Gold Theft: ಎರಡೂವರೆ ಕೆಜಿ ಚಿನ್ನದ ಬಿಸ್ಕೆಟ್ ಕಳವು – ಸಿಸಿ ಕ್ಯಾಮೆರಾ ಕೊಡ್ತು ಆರೋಪಿ ಸುಳಿವು

Hindu neighbor gifts plot of land

Hindu neighbour gifts land to Muslim journalist

Gold Theft: ಮನೆಯಲ್ಲೇ ಇದ್ದುಕೊಂಡು ಖದೀಮನೊಬ್ಬ ಉಂಡ ಮನೆಗೆ ದ್ರೋಹ ಬಗೆದವನು ಬಂಧನವಾದ ಘಟನೆ ನಡೆದಿದೆ. ಬೆಂಗಳೂರು ಜಯನಗರ ಪೊಲೀಸರು ಖತರ್ನಾಕ್ ಖದೀಮ ಕಾರ್ತಿಕ್ ನನ್ನು ಬಂಧಿಸಿದ್ದು, ಬರೋಬ್ಬರಿ ಎರಡೂವರೆ ಕೆಜಿ ಚಿನ್ನದ ಬಿಸ್ಕೆಟ್ ಕಳವು ಮಾಡಿದ ಬಗ್ಗೆ ಸ್ಪೈ ಕ್ಯಾಮೆರಾ ಆರೋಪಿ ಸುಳಿವು ಕೊಡ್ತು.

ಜಯನಗರದ ಟೈಲ್ಸ್ ಉದ್ಯಮಿ ಅಗರವಾಲ್ ಎಂಬುವವರ ಮನೆಯಲ್ಲಿ ಈತ ತನ್ನ ಕೈಚಳಕ ತೋರಿದ್ದು, ಆರೋಪಿ ಕಾರ್ತಿಕ್ ಸುಮಾರು 10 ವರ್ಷಗಳಿಂದ ಅಗರ್ ವಾಲ್ ಎಂಬುವ ಉದ್ಯಮಿ ಮನೆಯಲ್ಲಿ ಕೆಲಸ ಮಾಡ್ತಿದ್ದ. ಆರೋಪಿ ಉದ್ಯಮಿಗೆ ಮ್ಯಾನೇಜರ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದ. ಉದ್ಯಮಿ ಅಗರವಾಲ್ ಗೆ ಚಿನ್ನದ ಬಿಸ್ಕೆಟ್ ಸೇರಿಸಿಡುವ ಹವ್ಯಾಸ ಇತ್ತು. ಖತರ್ನಾಕ್‌ ಕಾರ್ತಿಕ್‌, ಚಿನ್ನದ ಬಿಸ್ಕೆಟ್ ಇರುವ ಲಾಕರ್ ಬೀಗವನ್ನ ಕದ್ದು ನಕಲಿ ಕೀ ಮಾಡಿಸಿ, ಸಮಯ ಸಿಕ್ಕಾಗೆಲ್ಲ ಒಂದೊಂದು ಚಿನ್ನದ ಬಿಸ್ಕೆಟ್ ಎಗರಿಸುತ್ತಿದ್ದ.

ಮಾಲೀಕರಿಗೆ ಡೌಟು ಬಂದು ಆರೋಪಿ ಕಾರ್ತಿಕ್ ಪ್ರಶ್ನೆ ಮಾಡಿದ್ದರು. ಈ ವೇಳೆ ಮನೆಯಲ್ಲಿ ಯಾರೋ ಕಳ್ಳರಿದ್ದಾರೆ ಎಂದು ಮಾಲೀಕರಿಗೆ ಪುಂಗಿದ್ದ ಈ ಆರೋಪಿ ಕಾರ್ತಿಕ್. ಹೀಗಾಗಿ ಮಾಲೀಕ ಅಗರ್ ವಾಲ್ ಇದನ್ನು ಕಂಡು ಹಿಡಿಯಲು ಮಾಸ್ಟರ್ ಪ್ಲಾನ್ ಮಾಡಿದ್ರು. ಲಾಕರ್ ಬಳಿ ಸೀಕ್ರೆಟ್ ಕ್ಯಾಮೆರಾ ಅಳವಡಿಸಿದ್ದರು. ಈ ಮೂಲಕ ಚಿನ್ನದ ಬಿಸ್ಕೆಟ್ ಕದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಆರೋಪಿ ಕಾರ್ತಿಕ್.

ಕಾರ್ತಿಕ್‌ ಕದ್ದ ಚಿನ್ನ ಮಾರಿ ಗೋವಾ ಟ್ರಿಪ್ ಮಾಡಿ ಕೇಸಿನೋದಲ್ಲಿ ಹಣ ಕಳೆದಿದ್ದ. ಸದ್ಯ ಆರೋಪಿಯಿಂದ ಸುಮಾರು ಒಂದು ಕೆಜಿಯಷ್ಟು ಚಿನ್ನ ರಿಕವರಿ ಮಾಡಿಕೊಂಡಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಯ್ತು.

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣ – ಸೆ.09 ಕ್ಕೆ ವಿಚಾರಣೆ ಮುಂದೂಡಿಕೆ