Home News Train Ticket Booking: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್- ಇನ್ಮುಂದೆ ಇರೋಲ್ಲ ವೈಟಿಂಗ್ ಲಿಸ್ಟ್,...

Train Ticket Booking: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್- ಇನ್ಮುಂದೆ ಇರೋಲ್ಲ ವೈಟಿಂಗ್ ಲಿಸ್ಟ್, ಬುಕ್ ಮಾಡಿದ ಕೂಡಲೇ ಸಿಗುತ್ತೆ ಟಿಕೆಟ್ !! ಹೇಗೆ ಅಂತೀರಾ?!

Train Ticket Booking

Hindu neighbor gifts plot of land

Hindu neighbour gifts land to Muslim journalist

Train Ticket Booking: ಭಾರತೀಯ ರೈಲ್ವೆ (Indian Railway ) ವಿಭಾಗದಲ್ಲಿ ಈಗಾಗಲೇ ಹೆಚ್ಚಿನ ಬೆಳವಣಿಗೆ, ಅಭಿವೃದ್ಧಿಯನ್ನು ಕಾಣುವುದರ ಜೊತೆ ಜೊತೆಗೆ ಜನರ ಕ್ಷೇಮ ಮತ್ತು ರಕ್ಷಣೆಯ ದೃಷ್ಟಿಯಿಂದ ಹಲವಾರು ಹೊಸ ಯೋಜನೆ ಜಾರಿ ತಂದಿದೆ. ಅಲ್ಲದೇ ದೇಶದಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಹಿನ್ನೆಲೆ ಇದೀಗ ರೈಲುಗಳಲ್ಲಿ ಜನಸಂದಣಿ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ದೊಡ್ಡ ಯೋಜನೆ ಸಿದ್ಧಪಡಿಸಿದೆ. ಈ ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ 3 ಸಾವಿರ ಹೊಸ ರೈಲುಗಳನ್ನು ಆರಂಭಿಸುವ ಕೆಲಸ ನಡೆಯುತ್ತಿದೆ.

ಹೌದು, ರೈಲ್ವೇಯ ಪ್ರಸ್ತುತ ಪ್ರಯಾಣಿಕರ ಸಾಮರ್ಥ್ಯವನ್ನು 800 ಕೋಟಿಗಳಿಂದ 1000 ಕೋಟಿಗಳಿಗೆ ಹೆಚ್ಚಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದಕ್ಕಾಗಿ ಮುಂದಿನ 5 ವರ್ಷಗಳಲ್ಲಿ 3 ಸಾವಿರ ಹೊಸ ರೈಲುಗಳನ್ನು ಆರಂಭಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

ರೈಲು ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು ಸಚಿವಾಲಯದ ಮತ್ತೊಂದು ಪ್ರಮುಖ ಗುರಿಯಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ. ದೆಹಲಿಯ ರೈಲು ಭವನದಲ್ಲಿ ಮಾತನಾಡಿದ ರೈಲ್ವೆ ಸಚಿವರು, ‘ಸದ್ಯ ಪ್ರತಿ ವರ್ಷ ಸುಮಾರು 800 ಕೋಟಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ದೇಶದ ಜನಸಂಖ್ಯೆ ಹೆಚ್ಚುತ್ತಿರುವ ಕಾರಣ ಮುಂದಿನ 4-5 ವರ್ಷಗಳಲ್ಲಿ ಪ್ರಯಾಣಿಕರ ಸಾಮರ್ಥ್ಯವನ್ನು ಒಂದು ಸಾವಿರ ಕೋಟಿಗೆ ಹೆಚ್ಚಿಸಬೇಕಾಗಿದೆ. ಇದಕ್ಕಾಗಿ, 3 ಸಾವಿರ ಹೆಚ್ಚುವರಿ ರೈಲುಗಳ ಅಗತ್ಯವಿದೆ ಎಂದಿದ್ದಾರೆ.

ರೈಲ್ವೆ ಮೂಲಗಳ ಪ್ರಕಾರ, ಇಲಾಖೆಯು ಪ್ರಸ್ತುತ 69 ಸಾವಿರ ಹೊಸ ಕೋಚ್‌ಗಳನ್ನು ಹೊಂದಿದ್ದು, ಪ್ರತಿ ವರ್ಷ ರೈಲ್ವೇ ಸುಮಾರು ಐದು ಸಾವಿರ ಹೊಸ ಬೋಗಿಗಳನ್ನು ತಯಾರಿಸುತ್ತಿದೆ. ಈ ಎಲ್ಲಾ ಪ್ರಯತ್ನಗಳಿಂದ, ರೈಲ್ವೆಯು ಪ್ರತಿ ವರ್ಷ 200 ರಿಂದ 250 ಹೊಸ ರೈಲುಗಳನ್ನು ತರಬಹುದು.

ಪ್ರಯಾಣದ ಸಮಯವನ್ನು ಕಡಿತಗೊಳಿಸುವುದು ರೈಲ್ವೆಯ ಮತ್ತೊಂದು ಗುರಿಯಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ. ಇದಕ್ಕಾಗಿ ಸಚಿವಾಲಯವು ರೈಲುಗಳ ವೇಗವನ್ನು ಸುಧಾರಿಸಲು ಮತ್ತು ರೈಲು ನೆಟ್ವರ್ಕ್ ವಿಸ್ತರಿಸುವ ಕೆಲಸ ಮಾಡುತ್ತಿದೆ. ರೈಲ್ವೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು, ಪ್ರತಿ ವರ್ಷ ಸುಮಾರು ಐದು ಸಾವಿರ ಕಿಲೋಮೀಟರ್ ಹಳಿಗಳನ್ನು ನಿರ್ಮಿಸಲಾಗುತ್ತಿದೆ. ಇನ್ನು, ಒಂದು ಸಾವಿರಕ್ಕೂ ಹೆಚ್ಚು ಫ್ಲೈಓವರ್‌ಗಳು ಮತ್ತು ಕೆಳಸೇತುವೆಗಳಿಗೆ ಅನುಮೋದನೆ ನೀಡಲಾಗಿದ್ದು, ಹಲವೆಡೆ ಕಾಮಗಾರಿ ಆರಂಭಿಸಲಾಗಿದೆ. ಕಳೆದ ವರ್ಷ, 1,002 ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ನಿರ್ಮಿಸಿದ್ದೇವೆ ಮತ್ತು ಈ ವರ್ಷ ಈ ಸಂಖ್ಯೆಯನ್ನು 1,200 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ

 

ಇದನ್ನು ಓದಿ: Gadag Crime News: ಕುಡಿದು ಟೈಟ್ ಆಗಿ ಹೆಂಡತಿ ಮಡಿಲಲ್ಲಿದ್ದ ಎಳೆಯ ಕಂದಮ್ಮನನ್ನೇ ಹೊತ್ತೊಯ್ದ ತಂದೆ !! ಮುಂದಾಗಿದ್ದೇ ವಿಚಿತ್ರ