Home News Kodugu: ಸಂಚಾರಿ ನಿಯಮ ಉಲ್ಲಂಘನೆ : ಬೈಕ್ ಸವಾರನಿಗೆ ರೂ. 23,500 ದಂಡ

Kodugu: ಸಂಚಾರಿ ನಿಯಮ ಉಲ್ಲಂಘನೆ : ಬೈಕ್ ಸವಾರನಿಗೆ ರೂ. 23,500 ದಂಡ

Traffic Fines

Hindu neighbor gifts plot of land

Hindu neighbour gifts land to Muslim journalist

Kodugu: ಬೈಕ್ ಸವಾರನೊಬ್ಬ ಸಂಚಾರಿ ನಿಯಮ ಉಲ್ಲಂಘನೆಗಾಗಿ ಬರೋಬ್ಬರಿ 23500/- ರೂ. ದಂಡ ಕಟ್ಟಿದ್ದಾನೆ.

ಸೋಮವಾರಪೇಟೆ ಕಲ್ಕಂದೂರು ಗ್ರಾಮದ ನಿವಾಸಿ ಅಬ್ದುಲ್ ಅಜೀಜ್ ರವರ ಮಗನಾದ ಕೆ.ಎ. ಮಹಮ್ಮದ್ ರಮೀಜ್ ಎಂಬಾತ, ಸೋಮವಾರಪೇಟೆ ನಗರದಲ್ಲಿ ಈತ

ಸೈಲೆನ್ಸರ್ ಮಾರ್ಪಡಿಸಿ, ಜೋರಾಗಿ ಶಬ್ದ ಮಾಡುತ್ತಾ ಹೆಲ್ಮೆಟ್ ಧರಿಸದೆ ಅಪಾಯಕಾರಿಯಾಗಿ ಬೈಕ್ ಚಾಲನೆ ಮಾಡುತ್ತಿದ್ದರಿಂದ ಮತ್ತು Defective ನಂಬರ್ ಪ್ಲೇಟ್ ಅಳವಡಿಸಿದ್ದರಿಂದ ಹಾಗೂ

ದಾಖಲಾತಿಗಳನ್ನು ಹಾಜರುಪಡಿಸದಿದ್ದರಿಂದ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಎಂ. ಮುದ್ದು ಮಾದೇವ ಅವರು ಈತನ ವಿರುದ್ದ ಪ್ರಕರಣ ದಾಖಲಿಸಿ ಸೋಮವಾರಪೇಟೆ ಪ್ರಿನ್ಸಿಪಲ್ ಸಿವಿಲ್ ಮತ್ತು JMFC ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ. ಗೋಪಾಲಕೃಷ್ಣ ಅವರು ಈ ಎಲ್ಲ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ರೂ. 23,500/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ.