Home News Chikkamagaluru: ಅಂತರ್‌ ಧರ್ಮೀಯ ವಿವಾಹ ಬೆಂಬಲಿಸಿದ ವ್ಯಕ್ತಿಗೆ ಬೆದರಿಕೆ; ಬಜರಂಗದಳ ನಾಯಕರ ವಿರುದ್ಧ ಕೇಸ್‌!

Chikkamagaluru: ಅಂತರ್‌ ಧರ್ಮೀಯ ವಿವಾಹ ಬೆಂಬಲಿಸಿದ ವ್ಯಕ್ತಿಗೆ ಬೆದರಿಕೆ; ಬಜರಂಗದಳ ನಾಯಕರ ವಿರುದ್ಧ ಕೇಸ್‌!

Hindu neighbor gifts plot of land

Hindu neighbour gifts land to Muslim journalist

Chikkamagaluru: ಅಂತರ್‌ಧರ್ಮೀಯ ವಿವಾಹವನ್ನು ಬೆಂಬಲ ನೀಡಿದ ವ್ಯಕ್ತಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಬಜರಂಗದಳದ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್‌ 353(1)(ಸಿ) ಮತ್ತು 353(2) ಅಡಿಯಲ್ಲಿ ಬಸವನಹಳ್ಳಿ ಪೊಲೀಸರು ಬಜರಂಗದಳ ಜಿಲ್ಲಾ ಮಟ್ಟದ ನಾಯಕರುಗಳಾದ ಶ್ಯಾಮ್‌ ಮತ್ತು ಸಾಗರ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಹೇಶ್‌ ಚಿಕ್ಕಮಗಳೂರು ನಗರದಲ್ಲಿ ಗೋಬಿ ಅಂಗಡಿ ಇಟ್ಟುಕೊಂಡಿದ್ದ. ಮುಸ್ಲಿಂ ಸಮುದಾಯಕ್ಕೆ ಸೇರಿದ ಅವರ ಕೆಲಸಗಾರನೊಬ್ಬ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ. ಇದನ್ನು ತಿಳಿದ ಮಹೇಶ್‌ ನಾಲ್ಕು ದಿನಗಳ ಹಿಂದೆ ಚಿಕ್ಕಮಗಳೂರು ನಗರದ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ವಿವಾಹಕ್ಕೆ ಸಾಕ್ಷಿಯಾಗಿ ಸಹಿ ಹಾಕಿದ್ದರು.

ಇದಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಲವ್‌ ಜಿಹಾದನ್ನು ಮಹೇಶ್‌ ಬೆಂಬಲ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.