Home News U T Khadar: ಹಿಂದೂಗಳಿಗೆ ರಕ್ಷಣೆ ಇಲ್ವಾ ಸಾರ್ ಎಂದಿದಕ್ಕೆ ಸ್ಪೀಕರ್ ಖಾದರ್ ಹೇಳಿದ್ದಷ್ಟು!!

U T Khadar: ಹಿಂದೂಗಳಿಗೆ ರಕ್ಷಣೆ ಇಲ್ವಾ ಸಾರ್ ಎಂದಿದಕ್ಕೆ ಸ್ಪೀಕರ್ ಖಾದರ್ ಹೇಳಿದ್ದಷ್ಟು!!

Hindu neighbor gifts plot of land

Hindu neighbour gifts land to Muslim journalist

U T Khadar: ಮಂಗಳೂರಿನ ಬಜ್ಪೆ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತ ಹಾಗೂ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ನಡೆದ ಮೊಹಮ್ಮದ್ ಫಾಜಿಲ್ ಹತ್ಯೆಯ ಆರೋಪಿ ಸುಹಾಸ್ ಶೆಟ್ಟಿಯನ್ನು ನಾಲ್ವರು ಹೊಂಚು ಹಾಕಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಕರಾವಳಿ ಮಾತ್ರವಲ್ಲ ರಾಜ್ಯಾದ್ಯಂತ ಈ ಕೃತ್ಯ ಸಂಚಲನ ಸೃಷ್ಟಿಸುತ್ತಿದೆ. ಇದೀಗ ಈ ವಿಚಾರವನ್ನು ಮುಂದಿಟ್ಟುಕೊಂಡು ಮಾಧ್ಯಮದವರು ಹಿಂದುಗಳಿಗೆ ರಕ್ಷಣೆ ಇಲ್ವಾ ಸಾರ್ ಎಂದು ಸ್ಪೀಕರ್ ಖಾದರ್ ಅವರನ್ನು ಕೇಳಿದ್ದಕ್ಕೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು, ಸುಹಾಸ್ ಕೊಲೆ ಘಟನೆ ಬಗ್ಗೆ ಇಂದು ಸ್ಪೀಕರ್ ಯುಟಿ ಖಾದರ್ ಗೆ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ನಾವು ಅಧಿಕಾರಕ್ಕೆ ಬಂದರೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ ಎಂದಿದ್ದಿರಿ. ಆದರೆ ಈಗ ಕಾಂಗ್ರೆಸ್ ಅವಧಿಯಲ್ಲೂ ಇಂತಹ ಘಟನೆ ನಡೆಯುತ್ತಿದೆಯಲ್ಲಾ ಸಾರ್ ಎಂದು ಮಾಧ್ಯಮಗಳು ಪ್ರಶ್ನೆ ಮಾಡಿವೆ.

ಇದಕ್ಕೆ ಉತ್ತರಿಸಿರುವ ಸ್ಪೀಕರ್ ಖಾದರ್ ‘ನೋಡಿ ನಾನೀಗ ಸ್ಪೀಕರ್ ಸ್ಥಾನದಲ್ಲಿರುವವನು. ರಾಜ್ಯ ಸರ್ಕಾರದ ಸಂಬಂಧಿತ ಸಚಿವರು ಅದನ್ನೆಲ್ಲವನ್ನೂ ನೋಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿರಬೇಕು ಎಂದೇ ನಾನು ಬಯಸುವವನು. ನಮ್ಮ ನಗರ ಪ್ರಾಕೃತಿಕವಾಗಿ ಸುಂದರ ನಗರ. ಅದನ್ನು ಕಾಪಾಡಿಕೊಳ್ಳಬೇಕು. ಇಂತಹ ಗಲಭೆಗಳು ಆಗದಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.