Home News Akhila Pajimannu: ಗಾಯಕಿ ಅಖಿಲಾ ಪಜಿಮಣ್ಣು ಸಂಸಾರದಲ್ಲಿ ಬಿರುಕು- ಬರಿ 3 ವರ್ಷಕ್ಕೆ ಪತಿ...

Akhila Pajimannu: ಗಾಯಕಿ ಅಖಿಲಾ ಪಜಿಮಣ್ಣು ಸಂಸಾರದಲ್ಲಿ ಬಿರುಕು- ಬರಿ 3 ವರ್ಷಕ್ಕೆ ಪತಿ ಧನಂಜಯ್‌ ಶರ್ಮಗೆ ಡಿವೋರ್ಸ್‌!

Hindu neighbor gifts plot of land

Hindu neighbour gifts land to Muslim journalist

Akhila Pajimannu : ಅಖಿಲ ಪಜಿಮನ್ನು ಅವರು ಕರ್ನಾಟಕದಾದ್ಯಂತ ಫೇಮಸ್ ಆದ ಗಾಯಕಿ. ಅವರ ಹಾಡಿಗೆ ಅನೇಕ ಮಂದಿ ಫ್ಯಾನ್ಸಿದ್ದಾರೆ. ಮೂರು ವರ್ಷಗಳ ಹಿಂದೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈಗ ಈ ದಾಂಪತ್ಯ ಬರಿ ಮೂರು ವರ್ಷಕ್ಕೆ ಮುರಿದುಬಿತ್ತಿದೆ. ಅಖಿಲ ಅವರು ಪತಿ ಧನಂಜಯ್‌ ಶರ್ಮಗೆ ಡಿವೋರ್ಸ್‌.

 

ಹೌದು, ಕನ್ನಡ ಕೋಗಿಲೆ (Kannada Kogile) ಸೀಸನ್ 1 ಹಾಗೂ ಸೀಸನ್ 2 ರನ್ನರ್ ಅಪ್ ಆಗಿದ್ದ ಅಖಿಲಾ ತಮ್ಮ ಸುಮಧುರ ಕಂಠದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್‌ ಶರ್ಮ (Dhananjai Sharma) ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಇದೀಗ ಅವರ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು ಅಖಿಲಾ ಮತ್ತು ಧನಂಜಯ್ ಶರ್ಮ ಪುತ್ತೂರು ಕೋರ್ಟ್‌ನಲ್ಲಿ (Puttur Court) ತಮ್ಮ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

 

ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಕೋರ್ಟ್‌ನ ದಾಖಲೆಗಳೂ ಸಿಕ್ಕಿದ್ದು, ಜೂನ್‌ 12 ರಂದು ಇವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ವಿಚ್ಛೇದನಕ್ಕೆ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿದ್ದ ಅಖಿಲಾ ಪಜಿಮಣ್ಣು ತಮ್ಮ ಖಾತೆಯಿಂದ ಗಂಡ ಧನಂಜಯ ಶರ್ಮ ಅವರಿದ್ದ ಎಲ್ಲಾ ಫೋಟೋ ವಿಡಿಯೋಗಳನ್ನು ಡಿಲೀಟ್‌ ಮಾಡಿದ್ದಾರೆ.