Home News ‘ಥಿಯೇಟರ್ ನಲ್ಲಿ ಮೂವಿ ನೋಡಲು ನನ್ನ ಹೆಂಡತಿ ಅಪೇಕ್ಷೆ ಪಟ್ಟಿದ್ದು, ಅದನ್ನು ನೆರವೇರಿಸಲು ಒಂದು ದಿನ...

‘ಥಿಯೇಟರ್ ನಲ್ಲಿ ಮೂವಿ ನೋಡಲು ನನ್ನ ಹೆಂಡತಿ ಅಪೇಕ್ಷೆ ಪಟ್ಟಿದ್ದು, ಅದನ್ನು ನೆರವೇರಿಸಲು ಒಂದು ದಿನ ವಾರದ ರಜೆ ನೀಡಿ’ ಎಂದು ಪತ್ರ ಬರೆದ ಗಂಡ- ಲೆಟರ್ ವೈರಲ್

Hindu neighbor gifts plot of land

Hindu neighbour gifts land to Muslim journalist

ಮನೆ ಸದಸ್ಯರಿಗೆ ಸಮಯ ನೀಡಲ್ಲ ಎಂಬ ಅಪವಾದ ಯಾವಾಗಲೋ ಪುರುಷರ ಹೆಗಲಮೇಲೇರಿದೆ. ಬಹಳಷ್ಟು ಪುರುಷರು ಕೆಲಸ ಮತ್ತು ಕುಟುಂಬವನ್ನು ಸಮಾನವಾಗಿ ತೆಗೆದುಕೊಂಡು ಹೋಗಲು ಎಲ್ಲರೂ ಪ್ರಯತ್ನಿಸುತ್ತಾರೆ. ಸರ್ಕಾರಿ ಉದ್ಯೋಗಿಯಾದ್ರೆ ಆತನಿಗೆ ರಜೆಗಳು ಸಿಗುತ್ತವೆ. ಆತ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಾನೆ.

ಆದರೆ ಕೆಲ ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿಗೆ ವಾರಕ್ಕೆ ಒಂದು ರಜೆ ಮಾತ್ರ ಸಿಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಪತಿಯ ಜೊತೆ ಸುತ್ತಬೇಕು, ಸಿನಿಮಾ ನೋಡಬೇಕು ಮತ್ತು ಶಾಪಿಂಗ್ ಮಾಡಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಎಲ್ಲ ಪ್ಲಾನ್ ಮಾಡಿದ್ರೂ ಕೊನೆ ಕ್ಷಣದಲ್ಲಿ ಗಂಡ ಕೆಲಸದ ಒತ್ತಡದಿಂದ ರಜೆ ಸಿಗದೇ ಪರದಾಡುತ್ತಾನೆ. ಅಂತೆಯೇ ಇಲ್ಲೋರ್ವ ನೌಕರ ಹೆಂಡತಿಯ ಇಚ್ಛೆಗಳನ್ನು ಈಡೇರಿಸಲು ಕಾರಣ ಹೇಳಿ ರಜೆ ಪತ್ರ ಬರೆದಿದ್ದಾನೆ. ಸದ್ಯ ಈ ರಜೆ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆನಂದ್ ಸಿ. AHC 19061 ಆದ ನಾನು, ಇದೇ ಸಿಸಿಬಿ ಘಟಕದ ANW ವಿಭಾಗದಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ದಿನಾಂಕ 26.04.2022ರಂದು ಒಂದು ದಿನದ ಮಟ್ಟಿಗೆ ವಾಯು ವಿಹಾರ ಹಾಗೂ ಚಲನಚಿತ್ರವನ್ನು ಥಿಯೇಟರ್ ನಲ್ಲಿ ನೋಡಬೇಕೆಂದು ನನ್ನ ಹೆಂಡತಿ ಅಪೇಕ್ಷೆಪಟ್ಟಿದ್ದು, ಅದನ್ನು ನೆರವೇರಿಸಲು ಒಂದು ದಿನ ವಾರದ ರಜೆಯನ್ನು ನೀಡಬೇಕಾಗಿ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಸದ್ಯ ಈ ರಜೆ ಪತ್ರ ನೋಡಿರುವ ನೆಟ್ಟಿಗರು ಉದ್ಯೋಗಿ ತುಂಬಾ ಪ್ರಾಮಾಣಿಕವಾಗಿ ರಜೆ ಕೇಳಿದ್ದಾನೆ. ಹಾಗಾಗಿ ರಜೆ ನೀಡಬೇಕು. ಉದ್ಯೋಗಿಗಳಿಗೆ ಕೆಲಸದ ಹೊರತಾಗಿಯೂ ಒಂದು ಖಾಸಗಿ ಜೀವನ ಇರುತ್ತದೆ. ಅದನ್ನು ಅರಿತು ಮೇಲಾಧಿಕಾರಿಗಳು ರಜೆಗಳನ್ನು ನೀಡಬೇಕು ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.