Home News Shrilanka: ಕೋತಿಯ ಆ ಒಂದು ಕೆಲಸಕ್ಕೆ ಕತ್ತಲಲ್ಲಿ ಮುಳುಗಿದ ಇಡೀ ಶ್ರೀಲಂಕಾ – ಕಾರಣ ಕೇಳಿದರೆ...

Shrilanka: ಕೋತಿಯ ಆ ಒಂದು ಕೆಲಸಕ್ಕೆ ಕತ್ತಲಲ್ಲಿ ಮುಳುಗಿದ ಇಡೀ ಶ್ರೀಲಂಕಾ – ಕಾರಣ ಕೇಳಿದರೆ ಶಾಕ್ ಆಗ್ತೀರಾ!!

Hindu neighbor gifts plot of land

Hindu neighbour gifts land to Muslim journalist

Shrilanka: ಶ್ರೀಲಂಕದಲ್ಲಿ ಕೋತಿ ಒಂದು ಮಾಡಿದ ಅವಾಂತರಕ್ಕೆ ಇಡೀ ದೇಶವೇ ಕತ್ತಲಲ್ಲಿ ಮುಳುಗಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ವಿದ್ಯುತ್‌ ಉಪಕೇಂದ್ರವೊಂದಕ್ಕೆ ಆಗಮಿಸಿದ ಕೋತಿಯೊಂದು ಎಸಗಿರುವ ಕಿತಾಪತಿಯಿಂದಾಗಿ ಇಡೀ ಶ್ರೀಲಂಕಾ ರಾಷ್ಟ್ರವೇ ಹಲವು ಘಂಟೆಗಳ ಕಾಲ ಕತ್ತಲಲ್ಲಿ ಮುಳುಗಬೇಕಾದ ಪರಿಸ್ಥಿತಿ ಭಾನುವಾರ ಘಟಿಸಿದೆ.

ಅಷ್ಟಕ್ಕೂ ಆಗಿದ್ದೇನು?

ಶ್ರೀಲಂಕಾದ ಇಂಧನ ಸಚಿವ ಕುಮಾರ ಜಯಕೋಡಿ ಅದೊಂದು ಕೋತಿ ಮಾಡಿದ ಕಿತಾಪತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಇಡೀ ದೇಶಕ್ಕೆ ವಿದ್ಯುತ್​ ಸರಬರಾಜು ಮಾಡುತ್ತಿದ್ದ ಗ್ರಿಡ್​ ಟ್ರಾನ್ಸ್​ಫಾರ್ಮರ್‌ಗೆ ಒಂದು ಕೋತಿ ತಾಕಿತ್ತು. ಇದೇ ಕಾರಣಕ್ಕೆ ವಿದ್ಯುತ್​ ಸಂಚಾರ ನಿಲ್ಲುವಂತಾಗಿದೆ. ನಮ್ಮ ಎಂಜಿನಿಯರ್​ಗಳು ದುರಸ್ಥಿ ಕೆಲಸ ಮಾಡುತ್ತಿದ್ದು, ಆದಷ್ಟು ಬೇಗ ವಿದ್ಯುತ್​ ಸರಬರಾಜು ಮೊದಲಿನಂತೆ ಸಿಗಲಿದೆ ಎಂದು ಖುದ್ದು ಸಚಿವ ಜಯಕೋಡಿ ಹೇಳಿದ್ದಾರೆ. ಮತ್ತೊಮ್ಮೆ ಇಂಥಾ ಅಡಚಣೆ ಆಗದಂತೆ ನೋಡಿಕೊಳ್ಳೋದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ ಅನ್ನೋ ಸಂಗತಿಯನ್ನೂ ಹಂಚಿಕೊಂಡಿದ್ದಾರೆ. ಅಂದು ಮಾರುತಿ.. ಇಂದು ಮಂಗ ಲಂಕನ್ನರನ್ನ ನಿದ್ದೆಗಡಿಸಿದಂತಾಗಿದೆ.

ಇನ್ನೂ ಸ್ಥಳೀಯ ಕಾಲಮಾನ ಬೆಳಗ್ಗೆ 11:30ರ ವೇಳೆಗೆ ಈ ಘಟನೆ ನಡೆದಿದ್ದು, ಜನತೆಯು ಪರದಾಡುವಂತಾಯಿತು. ತಕ್ಷಣವೇ ವಿದ್ಯುತ್‌ ಇಲಾಖೆಯ ಎಂಜಿನಿಯರ್‌ಗಳು ಮತ್ತು ಸಹಾಯಕರು ವಿದ್ಯುತ್‌ ಮಾರ್ಗಗಳನ್ನು ಸರಿಪಡಿಸುವ ಕಾರ್ಯ ಕೈಗೊಂಡಿದ್ದು, ಆಸ್ಪತ್ರೆಗಳು ಸೇರಿದಂತೆ ತುರ್ತು ಅಗತ್ಯವಿರುವ ಇತರೆ ಕೇಂದ್ರಗಳಿಗೆ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಆದಾಗ್ಯೂ ಕೆಲ ಭಾಗಗಳಿಗೆ ವಿದ್ಯುತ್‌ ಸಂಪರ್ಕ ಇನ್ನೂ ದೊರೆಯಬೇಕಾಗಿದ್ದು, ದುರಸ್ತಿ ಕಾರ್ಯ ಭರದಿಂದ ಸಾಗಿದೆ ಎಂದು ಮೂಲಗಳು ತಿಳಿಸಿವೆ. 2022ರಲ್ಲಿ ಆರ್ಥಿಕ ಸಮಸ್ಯೆಗೆ ತುತ್ತಾಗಿದ್ದ ವೇಳೆಯೂ ತಿಂಗಳುಗಳ ಕಾಲ ಶ್ರೀಲಂಕಾ ವಿದ್ಯುತ್‌ ವ್ಯತ್ಯಯ ಎದುರಿಸಿತ್ತು.