Home News School bag: ಸ್ಕೂಲ್‌ ಬ್ಯಾಗ್‌‌ ನೆಪದಲ್ಲಿ ಬಾಲಕನಿಗೆ ಕರೆಂಟ್‌ ಶಾಕ್‌ ನೀಡಿದ ಶಿಕ್ಷಕಿ!

School bag: ಸ್ಕೂಲ್‌ ಬ್ಯಾಗ್‌‌ ನೆಪದಲ್ಲಿ ಬಾಲಕನಿಗೆ ಕರೆಂಟ್‌ ಶಾಕ್‌ ನೀಡಿದ ಶಿಕ್ಷಕಿ!

Hindu neighbor gifts plot of land

Hindu neighbour gifts land to Muslim journalist

School bag: ಶಿಕ್ಷಕಿಯೊಬ್ಬರು ಏಳು ವರ್ಷದ ಬಾಲಕನ ಜತೆ ಮೃಘದಂತೆ ವರ್ತಿಸಿದ್ದು ಇದೀಗ ಈ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ ಶಿಕ್ಷಕಿ ಒಬ್ಬರು ಮಾನವೀಯತೆ ಮರೆತು ಪುಟ್ಟ ಬಾಲಕನಿಗೆ ಶಿಕ್ಷೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹೌದು, ಮಗು ಶಾಲಾ ಬ್ಯಾಗ್ (School Bag) ಮರೆತಿದ್ದಕ್ಕೆ ಮನಬಂದಂತೆ ಥಳಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ಇನ್ನಷ್ಟು ಮಗುವಿಗೆ ಹಿಂಸೆ ನೀಡಿರುವುದಾಗಿ ವರದಿಯಾಗಿದ್ದು, ಇದೀಗ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಾಗಿದೆ (Case File).

ಉತ್ತರ ಪ್ರದೇಶದ ಅಲಿಘರ್‌ನಲ್ಲಿರುವ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಏಳು ವರ್ಷದ ಬಾಲಕ ತನ್ನ ಶಾಲಾ ಬ್ಯಾಗ್ ತರಲು ಮರೆತಿದ್ದಾನೆ. ಅದನ್ನು ತಿಳಿದ ಟೀಚರ್ ಕೋಪಗೊಂಡು ಮಗುವನ್ನು ಮನಬಂದಂತೆ ಥಳಿಸಿ ಬಳಿಕ ಮಗುವಿನ ಬಟ್ಟೆ ಬಿಚ್ಚಿಸಿ ವಿದ್ಯುತ್ ಶಾಕ್ ನೀಡಿದ್ದಾರೆ ಎಂದು ವರದಿಯಾಗಿದೆ. ವಿಷಯ ತಿಳಿದ ಬಾಲಕನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮನೆಯವರು ನೀಡಿದ ಮಾಹಿತಿ ಪ್ರಕಾರ ಬಾಲಕನ ತಂದೆ ದಿಲೀಪ್ ಕುಮಾರ್ ಮನೆಯಲ್ಲಿ ಇರಲಿಲ್ಲ, ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ತಾತ ಮಗುವನ್ನು ಶಾಲೆಗೆ ಕರೆದುಕೊಂಡು ಹೋಗಿದ್ದರು. ಹೀಗಾಗಿ ಮಗು ಬ್ಯಾಗ್‌ ತಂದಿರಲಿಲ್ಲ ಎಂದಿದ್ದಾರೆ.