Home News Bengaluru : ಸಂಕ್ರಾಂತಿಯಂದು ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಲಿಲ್ಲ ಸೂರ್ಯರಶ್ಮಿ !! 2019ರಂತೆ ಈ ಬಾರಿಯೂ ಕಾದಿದ್ಯಾ ಗಂಡಾಂತರ…?

Bengaluru : ಸಂಕ್ರಾಂತಿಯಂದು ಗವಿಗಂಗಾಧರೇಶ್ವರನನ್ನು ಸ್ಪರ್ಶಿಸಲಿಲ್ಲ ಸೂರ್ಯರಶ್ಮಿ !! 2019ರಂತೆ ಈ ಬಾರಿಯೂ ಕಾದಿದ್ಯಾ ಗಂಡಾಂತರ…?

Hindu neighbor gifts plot of land

Hindu neighbour gifts land to Muslim journalist

Bengaluru : ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯಂದು ನಗರದ ಗವಿಪುರದ ಗವಿಗಂಗಾಧರೇಶ್ವರ ದೇಗುಲದಲ್ಲಿ ದೇವರ ಮೇಲೆ ಸೂರ್ಯ ರಶ್ಮಿ ಬೀಳುವುದು ಒಂದು ಪವಾಡವೇ ಸರಿ. ಆದ್ರೆ ಅಚ್ಚರಿ ಏನಂದ್ರೆ ಈ ಸಲದ ಸಂಕ್ರಾಂತಿಯಂದು ಈ ಪವಾಡ ನಡೆದಿಲ್ಲ.

ಹೌದು, ಗವಿಗಂಗಧಾರೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿ ದಿನ ಲಿಂಗವನ್ನು ಸೂರ್ಯ ರಶ್ಮಿಗಳು ಸ್ಪರ್ಶಿಸುತ್ತದೆ. ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಸಂದರ್ಭದಲ್ಲಿ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗುತ್ತದೆ. ಈ ವಿಸ್ಮಯ ಕ್ಷಣ ಹಾಗೂ ದೇವರ ಆಶೀರ್ವಾದ ಪಡೆಯಲು ಕಿಕ್ಕಿರಿದು ಭಕ್ತರು ಸೇರುತ್ತಾರೆ. ಅಂದಹಾಗೆ ಲಿಂಗ ಸ್ಪರ್ಶಿಸುವ ಸೂರ್ಯನ ಕಿರಣ ಎಷ್ಟು ಹೊತ್ತು ಇರಲಿದೆ ಅನ್ನುವ ಆಧಾರದಲ್ಲಿ ಅರ್ಚಕರು ಭವಿಷ್ಯ ಹೇಳುತ್ತಿದ್ದರು. ಆದರೆ ಈ ಬಾರಿ ಮೋಡದ ಕಾರಣದಿಂದ ಸೂರ್ಯ ರಶ್ಮಿಗಳು ಗವಿಗಂಗಧಾರೇಶ್ವರ ಕ್ಷೇತ್ರದ ಲಿಂಗ ಸ್ಪರ್ಶಿಸಿಲ್ಲ. ಇದರ ಬೆನ್ನಲ್ಲೇ ಭಕ್ತರಲ್ಲಿ ಗಂಡಾಂತರದ ಆತಂಕ ಎದುರಾಗಿದೆ. ಹೀಗಾಗಿ 2019ರಲ್ಲಿ ನಡೆದಂತೆ ಈ ಸಲವೂ ನಡೆಯಲಿದೆ ಎಂದು ಹೇಳಲಾಗುತ್ತಿದೆ.

2019ರಲ್ಲಿ ಏನಾಗಿತ್ತು?
2019ರಲ್ಲಿ ಕೆಲವೆ ಕ್ಷಣ ಸೂರ್ಯನ ಕಿರಣಗಳು ಲಿಂಗವನ್ನು ಸ್ಪರ್ಶಿಸಿತ್ತು. ಕೆಲ ಹೊತ್ತಲ್ಲೇ ಸೂರ್ಯನ ಕಿರಣಗಳು ಮಾಯವಾಗಿತ್ತು. ಅತ್ಯಲ್ಪ ಸಮಯ ಮಾತ್ರ ಸೂರ್ಯನ ಕಿರಣಗಳ ಸ್ಪರ್ಶದ ಬೆನ್ನಲ್ಲೇ ದೀಕ್ಷಿತರು ಅಪಾರ ಸಾವು ನೋವಿನ ಎಚ್ಚರಿಕೆ ನೀಡಿದ್ದರು. 2019ರ ಜನವರಿಯಲ್ಲಿ ನೀಡಿದ ಭವಿಷ್ಯ ಅದೇ ವರ್ಷದ ಅಂತ್ಯದಲ್ಲಿ ನಿಜವಾಗಿತ್ತು. 2019ರ ಅಂತ್ಯದ ವೇಳೆ ಕೋವಿಡ್ ಮಹಾಮಾರಿ ಭಾರತಕ್ಕೆ ಕಾಲಿಟ್ಟಿತ್ತು. ಬಳಿಕ 2 ವರ್ಷಗಳ ಕಾಲ ಹಲವರ ಬದುಕನ್ನು ಕಸಿದುಕೊಂಡಿತ್ತು.

ಅರ್ಚಕರಿಂದ ಸ್ಪಷ್ಟನೆ :
ಈ ವಿಚಾರವಾಗಿ ಗವಿಗಂಗಧಾರೇಶ್ವರ ಕ್ಷೇತ್ರದ ಸೋಮಶೇಖರ ದೀಕ್ಷಿತ್ ಪ್ರತಿಕ್ರಿಯೆ ನೀಡಿ ಭಕ್ತರು ಆತಂಕ ಪಡುವು ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲಿ ಶಿವನ ಅನುಮತಿ ಪಡೆದು ಸೂರ್ಯ ಮುಂದುವರೆಯುತ್ತಾನೆ. ಉತ್ತರಾಯಣ ಪ್ರವೇಶ ಮಾಡುವ ಸೂರ್ಯಚಂದ್ರಾಗ್ನಿ ನೇತ್ರ ಶಿವನ ದರ್ಶನ ಮಾಡಲಿದೆ. ಆದರೆ ಈ ಬಾರಿ ಪ್ರಕೃತಿ ವಿಕೋಪದಿಂದ ಭಕ್ತರಿಗೆ ದರ್ಶನ ಸಿಗಲಿಲ್ಲ.ಉತ್ತರಾಯಣದ ದಿನ ಸೂರ್ಯ ಎಲ್ಲರಿಗೂ ದಕ್ಷಿಣಾಯನದ ಫಲ ಕೊಡುತ್ತಾನೆ. ಈ ಪುಣ್ಯ ಹಾಗೂ ಆಶೀರ್ವಾದ ಎಲ್ಲಾ ಭಕ್ತವೃಂದಕ್ಕೆ ದೊರಕಲಿ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ಪ್ರತಿ ನಿತ್ಯ ಅಭಿಷೇಖ ಮಾಡುವ ನಮಗೆ ಬದಲಾವಣೆಗಳು ಗೋಚರವಾಗುತ್ತದೆ. ಈ ಬಾರಿ ಸೂರ್ಯನ ಕಿರಣಗಳು ಅಗೋಚರವಾಗಿತ್ತು ಎಂದಿದ್ದಾರೆ. ಪ್ರಕೃತಿ ವಿಕೋಪ ಆಗುವುದು ಬೇಡ. ಸೂರ್ಯ ಕಿರಣಗಳು ಈಶ್ವನ ಪೂಜೆ ಮಾಡಿದೆ. ಲಿಂಗದ ಮೇಲೆ ಎಷ್ಟು ಹೊತ್ತು ಸೂರ್ಯ ಇರ್ತಾನೋ ಅದರ ಮೇಲೆ ನಾವು ಭವಿಷ್ಯ ಹೇಳುತ್ತೇವೆ. ಆದರೆ ಈ ಬಾರಿ ನಮಗೆ ಕಂಡಿಲ್ಲ. ಜಲದ ಸಂಕಟಗಳು ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.