Home News Drug Peddling: ದುಬೈನಲ್ಲಿರುವ ಶ್ರೀಮಂತ ತಾಯಿ ಮಗಳಿಬ್ಬರು ಬೆಂಗಳೂರಲ್ಲಿ ಮಾಡೋ ಕೆಲಸ ಕೇಳಿ ಪೊಲೀಸರು ಶಾಕ್!...

Drug Peddling: ದುಬೈನಲ್ಲಿರುವ ಶ್ರೀಮಂತ ತಾಯಿ ಮಗಳಿಬ್ಬರು ಬೆಂಗಳೂರಲ್ಲಿ ಮಾಡೋ ಕೆಲಸ ಕೇಳಿ ಪೊಲೀಸರು ಶಾಕ್! ಅಷ್ಟಕ್ಕೂ ಇವರು ಮಾಡೋ ಕೆಲಸ ಏನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Drug Peddling: ತಾಯಿ ಮಗಳಿಬ್ಬರು ವಿದೇಶದಲ್ಲಿ ಹಾಯಾಗಿ ನೆಲೆಸಿದ್ದು, ಇಡೀ ಬೆಂಗಳೂರಲ್ಲಿ ತಮ್ಮ ಹವಾ ಸೃಷ್ಟಿಸಿದ್ದು, ಪೊಲೀಸರನ್ನೇ ಒಂದು ಬಾರಿ ಆಶ್ಚರ್ಯ ಪಡಿಸಿದೆ. ಹೌದು, ತಾಯಿ ಮಗಳಿಬ್ಬರು ಬೆಂಗಳೂರಿನ ಸ್ಥಳೀಯರನ್ನು ಬಳಸಿಕೊಂಡು ಮಾದಕವಸ್ತು ಮಾರಾಟ ದಂಧೆ (Drug Peddling) ನಡೆಸುತ್ತಿರುವ ಆರೋಪದಡಿ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೌದು, ಜಕ್ಕೂರಿನ ಎಂಬೆಸ್ಸಿ ಬುಲೆವಾರ್ಡ್ ನಿವಾಸಿ ಆಯಾಜ್ ಮೆಹಮೂದ್ ಎಂಬುವವರು ನೀಡಿದ ದೂರಿನ ಮೇರೆಗೆ ದುಬೈ ನಿವಾಸಿಗಳಾದ ನತಾಲಿಯಾ ನಿರ್ವಾನಿ, ಅವರ ತಾಯಿ ಲೀನಾ ನಿರ್ವಾನಿ ಹಾಗೂ ರಂಜನ್ ಎಂಬುವವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆ‌ರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ಆಯಾಜ್ ಮೆಹಮೂದ್ ನೀಡಿದ ದೂರಿನಲ್ಲಿ ‘ ನತಾಲಿಯಾ ನಿರ್ವಾನಿ ಅವರು ತಮ್ಮ ತಾಯಿ ಲೀನಾ ನಿರ್ವಾನಿ ಜತೆಗೆ ದುಬೈನಲ್ಲಿ ನೆಲೆಸಿದ್ದಾರೆ. ನತಾಲಿಯಾ ನಗರದ ಸ್ಥಳೀಯ ರಂಜನ್ ಎಂಬಾತನ ಮುಖಾಂತರ ಸ್ಥಳೀಯರಿಂದ ಹಣ ಪಡೆದು ಹೈಡೋ ಗಾಂಜಾ ಮತ್ತು ಎಂಡಿಎಂಎ ಸೇರಿ ಇತರೆ ಮಾದಕಸ್ತುಗಳನ್ನು ಸರಬರಾಜು ಮಾಡುತ್ತಿದ್ದಾರೆ. ಅಂತೆಯೇ ತಮ್ಮ ಮಗ ಆಯಾನ್ ಮೆಹಮೂದ್ಗೂ ಸಹ ಮಾದಕವಸ್ತು ಸರಬರಾಜು ಮಾಡಿ ಒತ್ತಾಯ ಪೂರ್ವಕವಾಗಿ ಸೇವಿಸುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಅಲ್ಲದೇ ‘ನತಾಲಿಯಾ ಖಾಸಗಿ ಬ್ಯಾಂಕ್ ಖಾತೆ ಹೊಂದಿದ್ದು, ಈ ಖಾತೆಗೆ ಯುವಕರಿಂದ ಹಣ ಹಾಕಿಸಿಕೊಂಡು ರಂಜನ್ ಹಾಗೂ ಇತರರ ಮೂಲಕ ಅವರಿಗೆ ಮಾದಕಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ನತಾಲಿಯಾ ದುಬೈ-ಬೆಂಗಳೂರು ನಡುವೆ ಪ್ರಯಾಣ ಮಾಡುತ್ತಾ ಮಾದಕವಸ್ತು ದಂಧೆಯಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದ್ದು, ತಾಯಿ ಮಗಳನ್ನು ಶೀಘ್ರದಲ್ಲಿ ಶಿಕ್ಷೆಗೆ ಗುರಿಪಡಿಸುವ ಭರವಸೆ ನೀಡಲಾಗಿದೆ.