Home News Indian Army: ಪಾಕ್ ವಿರುದ್ಧದ ಯುದ್ಧದ ವೇಳೆ ಸಾವಿರಾರು ಕಾಂಡೋಮ್‌ ಖರೀದಿ ಮಾಡಿತ್ತು ಭಾರತೀಯ ಸೇನೆ...

Indian Army: ಪಾಕ್ ವಿರುದ್ಧದ ಯುದ್ಧದ ವೇಳೆ ಸಾವಿರಾರು ಕಾಂಡೋಮ್‌ ಖರೀದಿ ಮಾಡಿತ್ತು ಭಾರತೀಯ ಸೇನೆ !! ಯಾಕಾಗಿ?

Hindu neighbor gifts plot of land

Hindu neighbour gifts land to Muslim journalist

Indian Army : ದೇಶದ ರಕ್ಷಣೆ ಎಂದು ಬಂದಾಗ ಸಾವಿಗೂ ಅಂಜದೆ ದೇಶದ ರಕ್ಷಣೆಗಾಗಿ ಮೊದಲು ಮುನ್ನುಗ್ಗುವವರೇ ದೇಶ ಕಾಯುವ ಯೋಧರು. ಅಂತೆಯೇ ಭಾರತೀಯ ಸೇನೆ ಕೂಡ ತನ್ನ ಶೌರ್ಯ ಮತ್ತು ಯುದ್ಧದ ಕೌಶಲ್ಯತೆಯಿಂದಲೇ ಗುರುತಿಸಿಕೊಂಡಿದೆ. ಭಾರತದತ್ತ ಕಣ್ಣೆತ್ತಿ ನೋಡಿದ ವೈರಿ ರಾಷ್ಟ್ರಕ್ಕೆ ನಮ್ಮ ಸೈನಿಕರು ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. ಇಂದಿಗೂ ಗಡಿಯಲ್ಲಿ ಮೊಂಡಾಟ ಮಾಡುವ ಪಾಕಿಸ್ತಾನ ತಕ್ಕ ಉತ್ತರವನ್ನು ನೀಡುತ್ತಲೇ ಬಂದಿದೆ. ಆದರೆ ಅಂದು ಪಾಕಿಸ್ತಾನದ ಜೊತೆಗೆ ನಡೆದ ಯುದ್ಧದ ಸಮಯದಲ್ಲಿ ಭಾರತೀಯ ಸೇನೆ ಅಪಾರ ಪ್ರಮಾಣದಲ್ಲಿ ಕಾಂಡೋಮ್‌ಗಳನ್ನು ಆರ್ಡರ್ ಮಾಡಿಕೊಂಡಿತ್ತು. ಹಾಗಾದ್ರೆ ಅಂದು ಅಷ್ಟೊಂದು ಕಾಂಡೋಮ್ ಆರ್ಡರ್ ಮಾಡಿದ್ದು ಯಾಕೆ? ಇದರ ಹಿಂದಿನ ಕಾರಣಗಳೇನು? ಇಲ್ಲಿದೆ ನೋಡಿ ಡೀಟೇಲ್ಸ್

1971ರ ಡಿಸೆಂಬರ್ 3ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭವಾಯಿತು. ಈ ಯದ್ಧ ಡಿಸೆಂಬರ್ 16ರವರೆಗೆ ನಡೆದಿತ್ತು. ಈ ಯುದ್ಧದಲ್ಲಿ ಪಾಕಸ್ತಾನದ ಸೇನೆ ಭಾರತದ ವಾಯುನೆಲೆಯನ್ನು (ಏರ್‌ಬೇಸ್) ಟಾರ್ಗೆಟ್ ಮಾಡಿಕೊಂಡಿತ್ತು. ಇತ್ತ ಭಾರತೀಯ ಸೇನೆಯು ತನ್ನ ಯುದ್ಧ ತಂತ್ರಗಾರಿಕೆಯಂತೆ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಲೇ ಇತ್ತು. ಅದಲ್ಲದೇ, ಭಾರತೀಯ ಸೇನೆ ಚಿತ್ತಗಾಂಗ್ ಬಂದರಿನ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಸಂದರ್ಭದಲ್ಲಿ ಭಾರತೀಯ ಸೇನೆಯು ಹೆಚ್ಚಿನ ಸಂಖ್ಯೆಯ ಕಾಂಡೋಮ್‌ಗಳನ್ನು ಖರೀದಿಸಿತ್ತು.

ಯಾಕೆಂದ್ರೆ ಭಾರತೀಯ ಸೇನೆಯು ಪಾಕಿಸ್ತಾನದ ದೋಣಿಗಳನ್ನು ಹಾಳುಮಾಡಲು ಯೋಜನೆಯನ್ನು ರೂಪಿಸಿತ್ತು. ಆದರೆ ಈ ಹಡಗುಗಳನ್ನು ಹಾಳು ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಈ ಯುದ್ಧದ ವೇಳೆ ಪಾಕ್ ಹಡಗುಗಳನ್ನು ಸ್ಪೋಟಿಸಲು ಕೆಳಗೆ ಲಿಂಪೆಟ್ ಮೈನ್ ಎಂಬ ವಸ್ತುವನ್ನು ಇರಿಸಬೇಕಾಗುತ್ತಿತ್ತು. ಈ ಲಿಂಪೆಟ್ ಮೈನ್ ವಸ್ತುವು ಕೇವಲ 30 ನಿಮಿಷದಲ್ಲಿಯೇ ತುಂಡಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಕಾಂಡೋಮ್ ಗಳನ್ನು ಖರೀದಿ ಮಾಡಲಾಗಿತ್ತು. ಲಿಂಪೆಟ್ ಮೈನ್ ಬದಲಾಗಿ ಕಾಂಡೋಮ್ ಇರಿಸಿ ಸ್ಪೋಟಿಸಲು ಮುಂದಾಯಿತು ಈ ಮೂಲಕ ಪಾಕಿಸ್ತಾನದ ಯುದ್ಧನೌಕೆಗಳ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಯಶಸ್ವಿಯಾಗಿತ್ತು.