Home News Bengaluru : ಕನ್ನಡಿಗ ಭೂಷಣ್ ಸಾವಿನ ಸುದ್ದಿ ಬಚ್ಚಿಟ್ಟಿದ್ದ ಕುಟುಂಬ – ಪತ್ರಿಕೆ ಓದಿ ಮಗನ...

Bengaluru : ಕನ್ನಡಿಗ ಭೂಷಣ್ ಸಾವಿನ ಸುದ್ದಿ ಬಚ್ಚಿಟ್ಟಿದ್ದ ಕುಟುಂಬ – ಪತ್ರಿಕೆ ಓದಿ ಮಗನ ಸಾವಿನ ಸುದ್ದಿ ತಿಳಿದ ತಂದೆ!!

Hindu neighbor gifts plot of land

Hindu neighbour gifts land to Muslim journalist

Bengaluru : ಪುಲ್ವಾಮಾ ಅಟ್ಯಾಕ್ ಮಾತು ಮುನ್ನವೇ ಕಾಶ್ಮೀರದಲ್ಲಿ ಪಹಲ್ಗಾಮ್‌ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಮನಬಂದಂತೆ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರವಾಸಕ್ಕೆಂದು ಆಗಮಿಸಿದ್ದ ಜನರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ದಾಳಿಗೆ ರಾಜ್ಯದ ಮೂವರು ಸೇರಿ ಒಟ್ಟು 28 ಮಂದಿ ಬಲಿಯಾಗಿದ್ದಾರೆ. ಗುಂಡಿಗೆ ಬಲಿಯಾದ ಕನ್ನಡಿಗರು ಭರತ್ ಭೂಷಣ್ ಮತ್ತು ಶಿವಮೊಗ್ಗದ ಮಂಜುನಾಥ್.

ಪಹಲ್ಗಾಮ್ನಲ್ಲಿ ಪ್ರವಾಸದಲ್ಲಿದ್ದ ವೇಳೆ ಮಂಗಳವಾರ ಮಧ್ಯಾಹ್ನ ಏಕಾಏಕಿ ಉಗ್ರರ ದಾಳಿ ನಡೆದಿದೆ. ಈ ವೇಳೆ ದಾಳಿಯಾದ ಸ್ಥಳದಲ್ಲೇ ಇದ್ದ ಭೂಷಣ್ ಕುಟುಂಬ, ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿಹೋಗಿದ್ದಾರೆ. ಅಲ್ಲೇ ಇದ್ದ ಮರವೊಂದರ ಬಳಿ ಮಗು ಜೊತೆ ಅವಿತುಕುಳಿತಿದ್ದ ಭರತ್ ಭೂಷಣ್ ತಲೆಗೆ ಉಗ್ರರು ಶೂಟ್ ಮಾಡಿದ್ದು, ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಭೂಷಣ್ ಸಾವಿನ ಸುದ್ದಿಯನ್ನು ಅವರ ತಂದೆಯಿಂದ ಕುಟುಂಬ ಬಚ್ಚಿಟ್ಟಿತ್ತು. ಆದರೆ ಅವರು ಪೇಪರ್ ಓದುವ ನನ್ನ ಮಗನ ಸಾವಿನ ಸುದ್ದಿಯನ್ನು ತಿಳಿದಿದ್ದಾರೆ.

ಹೌದು, ಭರತ್ ಅವರ ತಂದೆ ತಾಯಿ ವಯೋವೃದ್ದರಾಗಿದ್ದು, ಅಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಮಗನ ಸಾವಿನ ಸುದ್ದಿ ತಂದೆಗೆ ಗೊತ್ತೇ ಇರಲಿಲ್ಲ. ಭೂಷಣ್ ಕುಟುಂಬಸ್ಥರು ಭೂಷಣ್ ಸಾವಿನ ಬಗ್ಗೆ ಮೊದಲು ತಿಳಿಸಿರಲಿಲ್ಲ. ಬುಧವಾರ ಪತ್ರಿಕೆ ಓದಿದ ಭೂಷಣ್ ತಂದೆ ಮಗನ ಸಾವಿನ ಸುದ್ದಿ ತಿಳಿದು ಗೋಳಾಡಿದ್ದಾರೆ.

ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಕರ್ನಾಟಕದ ಮಂಜುನಾಥ್ ಮತ್ತು ಭರತ್ ಭೂಷಣ್ ಅವರ ಮೃತದೇಹಗಳನ್ನು ದೆಹಲಿಯಿಂದ ಬೆಂಗಳೂರಿಗೆ ವಿಮಾನದ ಮೂಲಕ ತರಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೃತದೇಹಗಳನ್ನ ತಂದು ಅಲ್ಲಿಂದ ಆಂಬುಲೆನ್ಸ್ ನಲ್ಲಿ ಸ್ವಗೃಹಕ್ಕೆ ಕೊಂಡೊಯ್ಯಲಾಗಿದೆ.