Home News Darshan: ಒಂದೇ ಸಲಕ್ಕೆ ನಟ ದರ್ಶನ್ ಗೆ ಎರಡೆರಡು ಶಾಕ್ ಕೊಟ್ಟ ಕೋರ್ಟ್ !!

Darshan: ಒಂದೇ ಸಲಕ್ಕೆ ನಟ ದರ್ಶನ್ ಗೆ ಎರಡೆರಡು ಶಾಕ್ ಕೊಟ್ಟ ಕೋರ್ಟ್ !!

Darshan

Hindu neighbor gifts plot of land

Hindu neighbour gifts land to Muslim journalist

Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಮತ್ತು ಗ್ಯಾಂಗ್ ಗೆ ಜುಲೈ 18ರ ವರೆಗಿನ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳ ಕಾಲ ವಿಸ್ತರಣೆ ಮಾಡಿ ಕೋರ್ಟ್ ಆದೇಶ ನೀಡಿದೆ.

ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ಆರೋಪಿಗಳ ನ್ಯಾಯಾಂಗ ಬಂಧನದ(Judicial custody) ಅವಧಿ ಮುಕ್ತಾಯವಾದ ಹಿನ್ನೆಲೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್(Darshn), ಪವಿತ್ರಾ ಗೌಡ (Pavithra Gowda)ಹಾಗೂ ಇನ್ನುಳಿದ ಆರೋಪಿಗಳು ಹಾಜರಾಗಿದ್ದರು. ಈ ವೇಳೆ ಎಲ್ಲರಿಗೂ ಆಗಸ್ಟ್ 1ರ ತನಕ ನ್ಯಾಯಾಂಗ ಬಂಧನ ಮುಂದುವರಿಸಲು ಕೋರ್ಟ್ ತಿಳಿಸಿದೆ.

ಈ ಮೂಲಕ ಇನ್ನೂ 14 ದಿನಗಳ ಕಾಲ ಅವರು ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯ ಆಗಿದೆ. ದರ್ಶನ್‌ಗೆ ಮತ್ತೆ ಜೈಲೂಟವೇ ಫಿಕ್ಸಾಗಿದೆ. ಇದು ಅವರ ಅಭಿಮಾನಿಗಳಿಗೂ ನುಂಗಲಾರದ ತುತ್ತಾಗಿದೆ. ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಗೂ ಮುನ್ನವೇ ಹೈಕೋರ್ಟ್‌ನಲ್ಲಿ ದರ್ಶನ್ ಅವರಿಗೆ ನಿರಾಸೆಯಾಗಿದೆ. ಹೀಗಾಗಿ ದರ್ಶನ್ ಗೆ ಜೈಲಲ್ಲಿ ಇರುವ ಶಾಕ್ ಜೊತೆಗೆ ಹಿಡಿಸದಿರುವ ಜೈಲೂಟವನ್ನು ಮಾಡುವಂತ ಅನಿವಾರ್ಯ ಕೂಡ ಎದುರಾಗಿದೆ. ಇದರಿಂದ ನಟನಿಗೆ ಒಮ್ಮೆಗೆ ಎರಡೆರಡು ಶಾಕ್ ಬಂದೊಂದಗಿದೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನನ್ನು ಪವಿತ್ರಗೌಡಾಗೆ ಅಶ್ಲೀಲ ಮೆಸೇಜ್ ಕಳುಹಿಡಿದ ಎಂಬ ಕಾರಣಕ್ಕೆ ಬೆಂಗಳೂರಿಗೆ ಕರೆದುಕೊಂಡು ಬಂದು, ಕೊಲೆ ಮಾಡಿದ ಆರೋಪದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ 17 ಜನರು ಜೈಲು ಪಾಲಾಗಿದ್ದಾರೆ. ಆದಷ್ಟು ಬೇಗ ಜಾಮೀನು ಪಡೆಯಬೇಕು ಎಂದು ದರ್ಶನ್ ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಕೊಲೆ ಪ್ರಕರಣ ಆದ್ದರಿಂದ ಅವರಿಗೆ ಜಾಮೀನು ಪಡೆಯುವುದು ಕಷ್ಟವಾಗಿದೆ.

Fastag New Rules: ನೀವು ಈ ತಪ್ಪನ್ನು ಮಾಡಿದರೆ, ಫಾಸ್ಟ್ಯಾಗ್ ಹೊಂದಿದ್ದರೂ ದುಪ್ಪಟ್ಟು ಟೋಲ್ ಫಿಕ್ಸ್‌; ಹೊಸ ರೂಲ್ಸ್‌ ಇಲ್ಲಿದೆ