Home News Marriage: ಕೊನೆ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ಮಾಡಿದ ವಧು ; ಕಾರಣ ಏನು ಗೊತ್ತಾ?

Marriage: ಕೊನೆ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ಮಾಡಿದ ವಧು ; ಕಾರಣ ಏನು ಗೊತ್ತಾ?

Marriage
Image source: vakil search

Hindu neighbor gifts plot of land

Hindu neighbour gifts land to Muslim journalist

Marriage: ವಿವಾಹ ಸಂದರ್ಭದಲ್ಲಿ ಹಲವು ಕಾರಣಗಳಿಗೆ ಮದುವೆ (marriage) ಮುರಿದು ಬೀಳುತ್ತದೆ. ಇತ್ತೀಚೆಗೆ ಇಂತಹ ಹಲವು ಪ್ರಸಂಗಗಳು ಬೆಳಕಿಗೆ ಬರುತ್ತಿದೆ. ಅಂತೆಯೇ ಉತ್ತರ ಪ್ರದೇಶದಲ್ಲೂ (uttar pradesh) ಇಂತಹ ಘಟನೆ ನಡೆದಿದೆ. ಮದುವೆಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಇವೆ ಎನ್ನುವಾಗ ವಧು ಮದುವೆ ಕ್ಯಾನ್ಸಲ್ ಮಾಡಿದ್ದಾಳೆ. ಅಷ್ಟಕ್ಕೂ ಕಾರಣ ಏನಿತ್ತು?

ಇಲ್ಲಿನ ಮನ್‌ಪುರ ಗ್ರಾಮದ ವರನ ಮದುವೆಯನ್ನು ಬನ್ವಾರಿಪುರ ಗ್ರಾಮದ ಹುಡುಗಿಯೊಂದಿಗೆ ಏಪ್ರಿಲ್ 30 ರಂದು ನಿಶ್ಚಯಿಸಲಾಗಿತ್ತು. ವರನ ಕುಟುಂಬಸ್ಥರು ವಧುವಿನ ಮನೆಗೆ ಮದುವೆಗೆ ಅದ್ಧೂರಿಯಾಗಿ ತೆರಳಿದರು. ಮದುವೆಯ ಎಲ್ಲಾ ವಿಧಿ-ವಿಧಾನಗಳು ನಡೆದವು. ವರನ ಕುಟುಂಬಸ್ಥರು ಆಭರಣಗಳು, ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ವಧುವಿಗೆ ನೀಡಲು ಆಕೆಯ ಕುಟುಂಬದವರಿಗೆ ನೀಡಿದರು.

ಇಲ್ಲಿವರೆಗೂ ಎಲ್ಲಾ ಸಾಂಗವಾಗಿ ನೆರವೇರಿತ್ತು. ಆದರೆ, ವರನ ಮನೆಯವರು ನೀಡಿದ ಚಿನ್ನಾಭರಣ (gold) ಕಂಡು ವಧುವಿನ ಮನೆಯವರ ಮುಖದ ಛಾಯೆ ಬದಲಾಯಿತು. ಯಾಕೆಂದರೆ ಅವರಿಗೆ ಆಭರಣ ಸಾಕಾಗಲಿಲ್ಲ. ವಧು ಮತ್ತು ಆಕೆಯ ಕುಟುಂಬದವರು, ವರನ ಮನೆಯವರು ಕಡಿಮೆ ಚಿನ್ನ ನೀಡಿದ್ದಕ್ಕಾಗಿ ಕೋಪಗೊಂಡು, ಜಗಳ ಶುರು ಮಾಡಿದರು. ದೊಡ್ಡ ಕಾಳಗದ ನಂತರ ವಧು ತನಗೆ ಈ ಮದುವೆ ಬೇಡ ಎಂದು ಕ್ಯಾನ್ಸಲ್ ಮಾಡಿ ಬಿಟ್ಟಳು.

ಇಷ್ಟಕ್ಕೇ ಮುಗಿಯಿತು ಎಂದುಕೊಳ್ಳಬೇಡಿ, ನಂತರ ಎರಡೂ ಮನೆಯವರು ಪೊಲೀಸ್ ಠಾಣೆಗೆ ಮೆಟ್ಟಿಲು ಹತ್ತಿದ್ದಾರೆ. ವಧುವಿನ ಮನೆಯವರು ವರದಕ್ಷಿಣೆ (dowry) ದೂರು ನೀಡಿದ್ದು, ಇದಕ್ಕೆ ಪ್ರತಿಯಾಗಿ ವರನ ತಂದೆ ವಧುವಿನ ಮನೆಯವರು ತಾವು ಕೊಂಡೊಯ್ದ ಚಿನ್ನಾಭರಣ ಮತ್ತು ಉಡುಗೊರೆಗಳನ್ನು ಹಿಂತಿರುಗಿಸುತ್ತಿಲ್ಲ, ಈಗ ನಮ್ಮ ಮೇಲೆ ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಲವು ಸಮಯದ ವಾಗ್ವಾದಗಳ ಬಳಿಕ, ವಿಷಯ ತಣ್ಣಗಾಗಿ ಎರಡೂ ಕಡೆಯವರು ತಮ್ಮ ಮನೆಗೆ ಹಿಂತಿರುಗಿದ್ದಾರೆ.

ಇದನ್ನೂ ಓದಿ:  ಮತದಾರೇ ನನಗೆ ವೋಟ್ ಮಾಡದಿದ್ರೆ ನಾನು, ನನ್ನ ಹೆಂಡತಿ ವಿಷ ಕುಡಿಯುತ್ತೇವೆ: ಬಾಬುರಾವ್‌ ಚಿಂಚನಸೂರ್‌