Home News Ameer Khan : ‘ಭಯೋತ್ಪಾದಕರು, ಉಗ್ರರು ಯಾರೂ ಮುಸ್ಲಿಮರಲ್ಲ’ – ಅಮೀರ್ ಖಾನ್ ಅಚ್ಚರಿಯ ಹೇಳಿಕೆ

Ameer Khan : ‘ಭಯೋತ್ಪಾದಕರು, ಉಗ್ರರು ಯಾರೂ ಮುಸ್ಲಿಮರಲ್ಲ’ – ಅಮೀರ್ ಖಾನ್ ಅಚ್ಚರಿಯ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

Ameer Khan: ಸೀತಾರೆ ಜಮೀನ್ ಪರ್’ ಸಿನಿಮಾದ ಪ್ರಚಾರದಲ್ಲಿ ನಿರತರಾಗಿರುವ ಅಮೀರ್ ಖಾನ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರದ ಹೊರತಾಗಿ ಹಲವಾರು ವಿಚಾರಗಳನ್ನು ಮಾತನಾಡಿದ್ದಾರೆ. ಈ ವೇಳೆ ಅವರು ಭಯೋತ್ಪಾದಕರು ಮುಸ್ಲಿಮರಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಹೌದು, ಸಂದರ್ಶನದಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆಯೂ ಆಮಿರ್ ಖಾನ್ ಮುಕ್ತವಾಗಿ ಮಾತನಾಡಿದ್ದಾರೆ. ‘ನಾನು ಮುಸ್ಲಿಂ, ನಾನು ಮುಸ್ಲಿಂ ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನಾನು ಭಾರತೀಯ, ಇದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಈ ಎರಡೂ ವಿಷಯಗಳು ಅವುಗಳ ಸ್ಥಾನದಲ್ಲಿ ಸರಿಯಾಗಿವೆ’ ಎಂದಿದ್ದಾರೆ.

ಅಲ್ಲದೆ ನಾನು ಭಯೋತ್ಪಾದಕರನ್ನು, ಉಗ್ರರನ್ನು ಮುಸ್ಲಿಂ ಎಂದು ಕೂಡ ಪರಿಗಣಿಸುವುದಿಲ್ಲ. ನೀವು ಯಾವುದೇ ಮುಗ್ಧ ವ್ಯಕ್ತಿಗೆ ಹಾನಿ ಮಾಡಬಾರದು ಎಂದು ಇಸ್ಲಾಂ ಸ್ಪಷ್ಟವಾಗಿ ಹೇಳುತ್ತದೆ. ನೀವು ಮಹಿಳೆಯರು ಅಥವಾ ಮಕ್ಕಳ ವಿರುದ್ಧ ನಿಮ್ಮ ಕೈ ಎತ್ತುವಂತಿಲ್ಲ. ಈ ಎಲ್ಲಾ ತತ್ವಗಳು ನಮ್ಮ ಧರ್ಮದ ಭಾಗವಾಗಿದೆ. ಈ ಭಯೋತ್ಪಾದಕರು ಮಾಡುತ್ತಿರುವುದು ಧರ್ಮದ ವಿರುದ್ಧ, ಅವರು ತಪ್ಪು ಮಾಡುತ್ತಿದ್ದಾರೆ ಎಂದು ಆಮಿರ್‌ ಖಾನ್‌ ಹೇಳಿದ್ದಾರೆ.

ಆಮಿರ್ ಖಾನ್ ಅವರ ‘ಸೀತಾರೆ ಜಮೀನ್ ಪರ್’ ಚಿತ್ರ ಜೂನ್ 20 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಆಮಿರ್ ಖಾನ್ ವಿಶೇಷ ಮಕ್ಕಳ ಬಾಸ್ಕೆಟ್‌ಬಾಲ್ ತಂಡಕ್ಕೆ ತರಬೇತಿ ನೀಡುವ ತರಬೇತುದಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.