Home News Team India : ಟೀಮ್ ಇಂಡಿಯಾದಲ್ಲಿ ಬಿರುಕು? ಸಂಭ್ರಮಾಚರಣೆಗೆ ಕರೆದರೂ ಬಾರದ ಸ್ಟಾರ್ ಆಟಗಾರರು

Team India : ಟೀಮ್ ಇಂಡಿಯಾದಲ್ಲಿ ಬಿರುಕು? ಸಂಭ್ರಮಾಚರಣೆಗೆ ಕರೆದರೂ ಬಾರದ ಸ್ಟಾರ್ ಆಟಗಾರರು

Hindu neighbor gifts plot of land

Hindu neighbour gifts land to Muslim journalist

Team India : ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 17 ರನ್‌ಗಳ ಭರ್ಜರಿ ಜಯಗಳಿಸಿದೆ. ಆದರೆ ಈ ಸಂಭ್ರಮದ ನಡುವೆ ಟೀಮ್ ಇಂಡಿಯದಲ್ಲಿ ಬಿರುಕು ಮೂಡಿದೆಯಾ ಎಂಬ ಗುಮಾನಿಗಳು ಹುಟ್ಟಿಕೊಂಡಿವೆ.

ಹೌದು, ಏಕದಿನ ಪಂದ್ಯದಲ್ಲಿ ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ಮಾಜಿ ನಾಯಕ ವಿರಾಟ್ ಕೊಹ್ಲಿ 135 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದ ಬಳಿಕ ಭಾರತದ ಗೆಲುವಿಗಾಗಿ ಹೋಟೆಲ್ ಕೋಣೆಯಲ್ಲಿ ಸಂಭ್ರಮಾಚರಣೆ ನಡೆಯಿತು. ಹೋಟೆಲ್ ಸಿಬ್ಬಂದಿ ಟೀಂ ಇಂಡಿಯಾದ ವಿಜಯವನ್ನು ಆಚರಿಸಲು ಕೇಕ್ ಕತ್ತರಿಸುವ ಸಮಾರಂಭವನ್ನು ಆಯೋಜಿಸಿದ್ದರು. ಆದರೆ ಈ ಸಂಭ್ರಮದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಹತ್ತಿರಕ್ಕೂ ಸುಳಿಯಲಿಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ, ನಾಯಕ ಕೆಎಲ್ ರಾಹುಲ್ ಕೇಕ್ ಕತ್ತರಿಸಿದರು. ಆದಾಗ್ಯೂ, ಹೋಟೆಲ್ ಸಿಬ್ಬಂದಿ ಪದೇ ಪದೇ ಕರೆದರೂ, ವಿರಾಟ್ ಕೊಹ್ಲಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಿಲ್ಲ. ಕೆಎಲ್ ರಾಹುಲ್ ಕೇಕ್ ಕತ್ತರಿಸುತ್ತಿರುವಾಗ, ಕೋಚ್ ಗೌತಮ್ ಗಂಭೀರ್ ಮತ್ತು ರೋಹಿತ್ ಶರ್ಮಾ ಅವರ ಹಿಂದೆ ನಿಂತಿದ್ದರು. ಇಬ್ಬರು ಮಾತುಕತೆಯಲ್ಲಿ ತೊಡಗಿದ್ದರು. ಇತ್ತ ಕೊಹ್ಲಿ ಕೂಡ ಅಲ್ಲಿಯೇ ಹಾದುಹೋಗುತ್ತಿದ್ದಾಗ ಅಲ್ಲಿದ್ದವರೆಲ್ಲ ಕೊಹ್ಲಿಯನ್ನು ಭಾಗಿಯಾಗುವಂತೆ ಕೇಳಿಕೊಂಡರು. ಆದರೆ ಕೊಹ್ಲಿ ಅವರನ್ನು ನಿರ್ಲಕ್ಷಿಸಿ ಹೋಟೆಲ್​ ರೂಮ್​ಗೆ ತೆರಳಿದರು. ಇದೀಗ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ