Home News Tamilunadu : ತಮಿಳುನಾಡು ಚುನಾವಣೆ- ದಳಪತಿ ವಿಜಯ್ ಅವರ TVK ಜೊತೆ BJP ಮೈತ್ರಿ? ಅಮಿತ್...

Tamilunadu : ತಮಿಳುನಾಡು ಚುನಾವಣೆ- ದಳಪತಿ ವಿಜಯ್ ಅವರ TVK ಜೊತೆ BJP ಮೈತ್ರಿ? ಅಮಿತ್ ಶಾ ಬಿಗ್ ಅಪ್ಡೇಟ್ 

Hindu neighbor gifts plot of land

Hindu neighbour gifts land to Muslim journalist

Tamilunadu : ತಮಿಳುನಾಡಿನಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಬಾರಿಯಾದರೂ ತಮಿಳುನಾಡಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಖಾತೆಯನ್ನು ತೆರೆಯಲು ಬಿಜೆಪಿ ಸಾಕಷ್ಟು ಸಕಲ ಸಿದ್ಧತೆಗಳನ್ನು ನಡೆಸಿದೆ. ಈ ನಡುವೆ ಬಿಜೆಪಿಯು ದಳಪತಿ ವಿಜಯ್ ಅವರ ಟಿವಿಕೆ ಪಕ್ಷದ ಜೊತೆ ಮೈತ್ರಿ ಮಾಡಿ ಕೊಳ್ಳುವ ವಿಚಾರ ಮುನ್ನಲೆಗೆ ಬಂದಿದೆ.

ಹೌದು, ತಮಿಳುನಾಡಿನಲ್ಲಿ ತನ್ನ ಖಾತೆ ತೆರೆಯಲು ಮುಂದಾಗಿರುವ ಭಾರತೀಯ ಜನತಾ ಪಾರ್ಟಿಯು ಹೊಸದಾಗಿ ರಾಜಕಾರಣಕ್ಕೆ ಧುಮಕಿ ರಾಜ್ಯದಲ್ಲಿ ಹವಾ ಸೃಷ್ಟಿಸಿರುವ ದಳಪತಿ ವಿಜಯ್ ಅವರ ನೇತೃತ್ವದ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಗಂಭೀರವಾಗಿ ಪರಿಶೀಲನೆ ನಡೆಸಿದೆ ಎಂದು ವರದಿ ಒಂದು ತಿಳಿಸಿದೆ. ತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿರುವ ವಿಜಯ್ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ಕೋರ್​​ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ.

ಇನ್ನೂ ರಾಜ್ಯ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಅಮಿತ್ ಶಾ ಮಾತನಾಡಿದ್ದು, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಹೋರಾಟ ನಡೆಸದೆ, ಗೆಲುವಿನತ್ತ ಗಮನವನ್ನು ಕೇಂದ್ರೀಕರಿಸುವಂತೆ ನಾಯಕರಿಗೆ ಸೂಚಿಸಿದ್ದಾರೆ. ಜೊತೆಗೆ ನೆಲದ ಭಾವನೆ ಮತ್ತು ಮೈತ್ರಿ ಸಾಧ್ಯತೆಗಳ ಬಗ್ಗೆ ಪ್ರತಿಯೊಬ್ಬ ನಾಯಕರಿಂದ ವೈಯಕ್ತಿಕ ಪ್ರತಿಕ್ರಿಯೆಯನ್ನು ಪಡೆದಿದ್ದು, ನಿರ್ಧಾರಗಳು ಭಾವನೆಯಿಂದಲ್ಲ, ಚುನಾವಣಾ ಗಣಿತದಿಂದ ನಡೆಸಲ್ಪಡುತ್ತವೆ. ಅದೇ ರೀತಿ ಚುನಾವಣೆಯೂ ವ್ಯಕ್ತಿತ್ವ ಆಧಾರಿತ ಸ್ಪರ್ಧೆಯಾಗಿರದೆ ಎನ್‌ಡಿಎ ಮತ್ತು ಡಿಎಂಕೆ ನಡುವೆ ಆಗಬೇಕು. ಈ ನಿಟ್ಟಿಯಲ್ಲಿ ಮೈತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಹೇಳಿದ್ದಾರೆನ್ನಲಾಗಿದೆ.