Home News Mangaluru: ಮಂಗಳೂರು: ತಲವಾರು ಝಳಪಿಸಿದ ಪ್ರಕರಣ: ಇಬ್ಬರು ಅರೆಸ್ಟ್!

Mangaluru: ಮಂಗಳೂರು: ತಲವಾರು ಝಳಪಿಸಿದ ಪ್ರಕರಣ: ಇಬ್ಬರು ಅರೆಸ್ಟ್!

Hindu neighbor gifts plot of land

Hindu neighbour gifts land to Muslim journalist

Mangaluru: ಕಾವೂರು ಠಾಣಾ ವ್ಯಾಪ್ತಿಯ ಪಂಜಿಮೊಗರು ಮತ್ತು ಶಾಂತಿನಗರ ಪ್ರದೇಶದಲ್ಲಿ ತಲವಾರು ಝಳಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೈ ನಿವಾಸಿ ವಿಷ್ಣು (18) ಮತ್ತು ಕಾಪಿಕಾಡ್‌ ಆಕಾಶಭವನ ನಿವಾಸಿ ವೇಣುಗೋಪಾಲ್‌ (19) ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಹಾಸ್‌ ಹತ್ಯೆಯ ಮರುದಿನ ಮೇ 2ರಂದು ಸಂಜೆ ವೇಳೆ ಆರೋಪಿಗಳು ತಲವಾರು ಝಳಪಿಸಿ ಸಾರ್ವಜನಿಕರಲ್ಲಿ ಭಯ ಮತ್ತು ಗಾಬರಿ ಹುಟ್ಟಿಸಿದ್ದಾರೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿ ಕೆಮರಾ ಮತ್ತು ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ವಯ ಆರೋಪಿಗಳನ್ನು ಬಂಧಿಸಲಾಗಿದೆ.