Home News Rajya Sabha: ರಾಜ್ಯಸಭೆಯಲ್ಲಿ ಅಚ್ಚರಿ ಘಟನೆ, ಕಾಂಗ್ರೆಸ್ ಸಂಸದನ ಆಸನದಡಿ 500 ನೋಟುಗಳ ಕಂತೆ ಪತ್ತೆ...

Rajya Sabha: ರಾಜ್ಯಸಭೆಯಲ್ಲಿ ಅಚ್ಚರಿ ಘಟನೆ, ಕಾಂಗ್ರೆಸ್ ಸಂಸದನ ಆಸನದಡಿ 500 ನೋಟುಗಳ ಕಂತೆ ಪತ್ತೆ !! ಸದನದಲ್ಲಿ ಕೋಲಾಹಲ, ತನಿಖೆಗೆ ಆದೇಶ

Hindu neighbor gifts plot of land

Hindu neighbour gifts land to Muslim journalist

Rajya Sabha: ದೆಹಲಿಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನದ ವೇಳೆ ಕಾಂಗ್ರೆಸ್ ಸಂಸದ (Congress MP) ಅಭಿಷೇಕ್ ಮನು ಸಿಂಘ್ವಿ (Abhishek Manu Singhvi) ಅವರಿಗೆ ನಿಗದಿಪಡಿಸಲಾದ ಸೀಟ್ ಸಂಖ್ಯೆ 222 ಅಡಿಯಲ್ಲಿ 500ರ ನೋಟುಗಳ ಪತ್ತೆಯಾ(Cash found from Parliament Seat) ಗಿದ್ದು ಕೋಲಾಹಾಲಕ್ಕೆ ಕಾರಣವಾಗಿದೆ.

ಹೌದು, ತೆಲಂಗಾಣದಿಂದ ಚುನಾಯಿತರಾಗಿರುವ ಕಾಂಗ್ರೆಸ್ ಸಂಸದ (Congress MP) ಅಭಿಷೇಕ್ ಮನು ಸಿಂಘ್ವಿ (Abhishek Manu Singhvi) ಅವರಿಗೆ ನಿಗದಿಪಡಿಸಲಾದ ಸೀಟ್ ಸಂಖ್ಯೆ 222 ಅಡಿಯಲ್ಲಿ 500ರ ನೋಟುಗಳ ಪತ್ತೆಯಾದ (Cash found from Parliament Seat) ಅಚ್ಚರಿಯ ಘಟನೆ ಸಂಸತ್‌ನಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಯಿತು. ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದರೆ, ಇದು ಬಿಜೆಪಿಯ ಪಿತೂರಿ ಎಂದು ಪ್ರತಿಪಕ್ಷಗಳು ಹೇಳಿವೆ.

ಈ ಬಗ್ಗೆ ಪ್ರತಿಕ್ರೀಯಿಸಿದ ಅಭಿಷೇಕ್ ಮನು ಸಿಂಘ್ವಿ ಅವರು, ‘ಹಣ ಪತ್ತೆಯಾದ ಬಗ್ಗೆ ತಿಳಿದಾಗ ಸ್ವತಃ ನಾನೇ ಆಶ್ಚರ್ಯಚಕಿತನಾಗಿದ್ದೇನೆ. ನನಗೆ ಇದರ ಬಗ್ಗೆ ಏನೂ ಗೊತ್ತಿಲ್ಲ’ ಎಂದು ಹೇಳಿ ತನ್ನ ದಿನಚರಿಯನ್ನು ಅವರ ವಿವರಿಸಿದ್ದಾರೆ.

ಇನ್ನು ಈ ವಿಚಾರವನ್ನು ಇಟ್ಟುಕೊಂಡು ಆಡಳಿತ ಪಕ್ಷಗಳು ಪ್ರತಿಪಕ್ಷದ ವಿರುದ್ಧ ಹರಿಹಾಯ್ದಿವೆ. ಅಲ್ಲದೆ ರಾಜ್ಯಸಭೆಯ ಸಭಾಪತಿ ಜಗದೀಪ್ ಧಂಖರ್ ಅವರು ಶುಕ್ರವಾರ ಸದನಕ್ಕೆ ಮಾಹಿತಿ ನೀಡಿದ್ದು, ಸಾಮಾನ್ಯ ವಿಧ್ವಂಸಕ-ವಿರೋಧಿ ಪರಿಶೀಲನೆಯ ಸಂದರ್ಭದಲ್ಲಿ, ಕಾಂಗ್ರೆಸ್ ಸಂಸದ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಹಂಚಿಕೆ ಮಾಡಲಾದ ಸೀಟ್ ಸಂಖ್ಯೆ 222 ರಿಂದ ಕರೆನ್ಸಿ ನೋಟುಗಳ ಬಂಡಲ್ ಪತ್ತೆಯಾಗಿದೆ. ಸದ್ಯ ಈ ಪ್ರಕರಣವನ್ನು ತನಿಖೆಗೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.