Home News ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ vs ಎಲ್ ಐಸಿ ಕನ್ಯಾದಾನ ಯೋಜನೆ : ಯಾವುದು...

ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ vs ಎಲ್ ಐಸಿ ಕನ್ಯಾದಾನ ಯೋಜನೆ : ಯಾವುದು ದಿ ಬೆಸ್ಟ್‌?

Hindu neighbor gifts plot of land

Hindu neighbour gifts land to Muslim journalist

ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದು ಇದೇ ಕಾರಣಕ್ಕೆ ಹೆಣ್ಣು ಮಕ್ಕಳ ಹೆತ್ತವರು ಅವರ ಶಿಕ್ಷಣಕ್ಕಾಗಿ ಒಂದಿಷ್ಟು ಉಳಿತಾಯ ಮಾಡಲು ಪ್ರಾರಂಭಿಸಿದ್ದಾರೆ. ಆದ್ದರಿಂದ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಎಲ್‌ಐಸಿ ಕನ್ಯಾದಾನ ನೀತಿಗಳು ಹೆಣ್ಣು ಮಕ್ಕಳನ್ನು ಹೆರುವ ಪೋಷಕರಿಗೆ ಪರಿಹಾರ ನೀಡಲು ಪ್ರಾರಂಭಿಸಲಾದ ಯೋಜನೆಗಳಾಗಿವೆ. ಸಣ್ಣ ಉಳಿತಾಯದ ಮೂಲಕ ತಮ್ಮ ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಮದುವೆಗೆ ಹಣವನ್ನು ಉಳಿಸಲು ಬಯಸುವ ಪೋಷಕರ ಆಶಯಗಳನ್ನು ಪೂರೈಸುವುದು ಈ ಯೋಜನೆಗಳ ಉದ್ದೇಶವಾಗಿದೆ.

ಸದ್ಯ ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಎಲ್ ಐಸಿ ಕನ್ಯಾದಾನ ಪಾಲಿಸಿಯ ನಡುವೆ ಇರುವ ವ್ಯತ್ಯಾಸ ನೀವು ತಿಳಿದುಕೊಳ್ಳಲು ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

  • ಸುಕನ್ಯಾ ಸಮೃದ್ಧಿ ಯೋಜನೆ:
    ಸುಕನ್ಯಾ ಸಮೃದ್ಧಿ ಯೋಜನೆಯನ್ನು ಬೇಟಿ ಬಚಾವೋ, ಬೇಟಿ ಪಢಾವೋ ಕಾರ್ಯಕ್ರಮದ ಭಾಗವಾಗಿ 2015ರಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಲಾಗಿದೆ. ಹೆಣ್ಣು ಮಗುವಿಗೆ ಸುರಕ್ಷಿತ ಹಾಗೂ ಸುಭದ್ರ ಆರ್ಥಿಕ ಬುನಾದಿ ಒದಗಿಸುವ ಮೂಲಕ ಆಕೆಯ ಭವಿಷ್ಯವನ್ನು ಕಾಪಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಸುಕನ್ಯಾ ಸಮೃದ್ಧಿ ಯೋಜನೆಯಡಿ ಹೆಣ್ಣು ಮಗು ಹುಟ್ಟಿದಾಗಿನಿಂದ ಆಕೆಗೆ 10 ವರ್ಷವಾಗುವವರೆಗೆ ಯಾವಾಗ ಬೇಕಾದರೂ ಅಕೌಂಟ್ ತೆರೆಯಬಹುದು. ಅಲ್ಲದೇ ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಲ್ಲಿ ಕೇವಲ 250ರೂಗಳನ್ನು ಕಟ್ಟುವ ಮೂಲಕ ಅಕೌಂಟ್ ಓಪನ್ ಮಾಡಬಹುದು.

ಇನ್ನು ಎರಡು ಹೆಣ್ಣು ಮಕ್ಕಳಿದ್ರೆ ಅವರಿಬ್ಬರ ಹೆಸರಿನಲ್ಲೂ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. ಒಂದು ವೇಳೆ ಮೊದಲನೇ ಮಗು ಹೆಣ್ಣಾಗಿದ್ದು, ಎರಡನೇ ಹೆರಿಗೆಯಲ್ಲಿ ಅವಳಿ ಹೆಣ್ಣು ಮಕ್ಕಳಾದ್ರೆ ಅವರಿಬ್ಬರ ಹೆಸರಿನಲ್ಲೂ ಪ್ರತ್ಯೇಕ ಖಾತೆ ತೆರೆಯಬಹುದು. ಖಾತೆ ಹೊಂದಿರೋ ಹೆಣ್ಣು ಮಗು 21 ವರ್ಷಕ್ಕೆ ಕಾಲಿಟ್ಟ ನಂತರ ಠೇವಣಿ ಹಿಂಪಡೆಯಲು ಅಧಿಕಾರ ಹೊಂದಿರುತ್ತಾಳೆ. ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಕಾರ ವರ್ಷಕ್ಕೆ 1 ಲಕ್ಷದ 50 ಸಾವಿರಗಳನ್ನು ಒಂದು ವರ್ಷದಲ್ಲಿ ಕಟ್ಟಬಹುದು. ಈ ಖಾತೆ ತೆರೆದ 21 ವರ್ಷಗಳ ತನಕ ಅಥವಾ ಹೆಣ್ಣು ಮಗುವಿಗೆ 18 ವರ್ಷ ದಾಟಿ ಆಕೆ ವೈವಾಹಿಕ ಬದುಕಿಗೆ ಕಾಲಿಡುವ ತನಕ ಚಾಲ್ತಿಯಲ್ಲಿರುತ್ತದೆ.

  • ಎಲ್ಐಸಿ ಕನ್ಯಾದಾನ ಪಾಲಿಸಿ:

ಎಲ್ಐಸಿ ಕನ್ಯಾದಾನ ಪಾಲಿಸಿ ಎಲ್ ಐಸಿ ಜೀವನ್ ಲಕ್ಷ್ಯ ಯೋಜನೆಯ ಇನ್ನೊಂದು ರೂಪವಾಗಿದೆ. ಮಗಳ ಭವಿಷ್ಯದ ಸುರಕ್ಷತೆಗೆ ಹೂಡಿಕೆ ಮಾಡಲು ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

ಎಲ್ಐಸಿ ಕನ್ಯಾದಾನ ಪಾಲಿಸಿಯಲ್ಲಿ ಉಳಿತಾಯ ಹಾಗೂ ಸುರಕ್ಷತೆ ಎರಡೂ ಜೊತೆಯಾಗಿದೆ. ಎಲ್ಐಸಿ ಕನ್ಯಾದಾನ ಪಾಲಿಸಿ ಕಡಿಮೆ ಪ್ರೀಮಿಯಂ ಪಾವತಿಗೆ ಆರ್ಥಿಕ ಸುರಕ್ಷತೆಯನ್ನು ಒದಗಿಸುತ್ತದೆ. ಈ ಪಾಲಿಸಿ ಮೆಚ್ಯೂರಿಟಿ ಬಳಿಕ ಪಾಲಿಸಿದಾರರಿಗೆ ದೊಡ್ಡ ಮೊತ್ತದ ಹಣವನ್ನು ಪಾವತಿಸುತ್ತದೆ. ಒಂದು ವೇಳೆ ಪಾಲಿಸಿದಾರರು ಮರಣ ಹೊಂದಿದರೆ ಪ್ರೀಮಿಯಂ ರದ್ದುಗೊಳಿಸಲಾಗುತ್ತದೆ. ಅಕಸ್ಮಾತ್ ಅಪಘಾತದಲ್ಲಿ ಸಾವನ್ನಪ್ಪಿದರೆ 10ಲಕ್ಷ ರೂ. ನೀಡಲಾಗುತ್ತದೆ. ಮೆಚ್ಯೂರಿಟಿ ದಿನಾಂಕದ ತನಕ ವಾರ್ಷಿಕ 50,000ರೂ. ಪಾವತಿಸಲಾಗುತ್ತದೆ. ಮೆಚ್ಯೂರಿಟಿಗೂ ಮುನ್ನ ಮೂರು ವರ್ಷಗಳ ತನಕ ನಿರ್ದಿಷ್ಟ ಮೊತ್ತಕ್ಕೆ ಲೈಪ್ ರಿಸ್ಕ್ ಪ್ರೊಟೆಕ್ಷನ್ ಕೂಡ ಸಿಗಲಿದೆ. ಭಾರತೀಯ ನಾಗರಿಕರು ಹಾಗೂ ಅನಿವಾಸಿ ಭಾರತೀಯರು ಈ ಸೇವೆ ಬಳಸಿಕೊಳ್ಳಬಹುದು.

ಈ ಮೇಲಿನಂತೆ ನೀವು ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಎಲ್ ಐಸಿ ಕನ್ಯಾದಾನ ಪಾಲಿಸಿಯ ನಡುವೆ ಇರುವ ವ್ಯತ್ಯಾಸ ನೀವು ತಿಳಿದುಕೊಳ್ಳಬಹುದಾಗಿದೆ.