Home News Dandeli: ಸಾರಿಗೆ ಡಿಪೋದಲ್ಲಿ ಚಾಲಕನಿಂದ ಆತ್ಮಹತ್ಯೆಗೆ ಯತ್ನ

Dandeli: ಸಾರಿಗೆ ಡಿಪೋದಲ್ಲಿ ಚಾಲಕನಿಂದ ಆತ್ಮಹತ್ಯೆಗೆ ಯತ್ನ

Hindu neighbor gifts plot of land

Hindu neighbour gifts land to Muslim journalist

Dandeli: ಬಸ್ಸಿನ ಚಾಲಕನೋರ್ವ ನಗರದ ಹಳೆ ದಾಂಡೇಲಿಯ ಸಾರಿಗೆ ಡಿಪೋದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು (ಫೆ.24) ನಡೆದಿದೆ.

ಚಾಲಕ ಆರ್.ಬಿ.ಗಿಡಜಾಡರ ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಸಾರಿಗೆ ಡಿಪೋದಲ್ಲಿ ಫಿನಾಯಿಲ್‌ ಸೇವಿಸಿದ್ದಾರೆ. ವಿಷಯ ತಿಳಿದ ಸಾರಿಗೆ ಘಟಕದ ಸಿಬ್ಬಂದಿಗಳು ಕೂಡಲೇ ಸಾರಿಗೆ ಬಸ್ಸಿನಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಮುಂದುವರಿದಿದೆ. ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಆತ್ಮಹತ್ಯೆಗೆ ಕಾರಣವೇನು? ಎನ್ನುವುದು ಇನ್ನೂ ತಿಳಿದು ಬಂದಿಲ್ಲ.