Home News Suicide: NEET ಪರೀಕ್ಷೆಯಲ್ಲಿ ಬಂತು ಶೇ.99.99 ಅಂಕ – ಡಾಕ್ಟರ್ ಆಗೋಕೆ ಇಷ್ಟ ಇಲ್ಲ ಎಂದು...

Suicide: NEET ಪರೀಕ್ಷೆಯಲ್ಲಿ ಬಂತು ಶೇ.99.99 ಅಂಕ – ಡಾಕ್ಟರ್ ಆಗೋಕೆ ಇಷ್ಟ ಇಲ್ಲ ಎಂದು ಸಾವಿಗೆ ಶರಣಾದ ವಿದ್ಯಾರ್ಥಿ

Hindu neighbor gifts plot of land

Hindu neighbour gifts land to Muslim journalist

Suicide : ವಿದ್ಯಾರ್ಥಿಗಳು ನೀಟ್ ಯುಜಿ ಪರೀಕ್ಷೆಗೆ ಎಷ್ಟೇ ತಯಾರಿ ನಡೆಸಿದರೂ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗುವುದು ಸುಲಭದ ಮಾತಲ್ಲ. ಇದಕ್ಕಾಗಿ ವಿದ್ಯಾ ರ್ಥಿಗಳು ಸಾಕಷ್ಟು ಎಫ಼ರ್ಟ್ ಹಾಕುತ್ತಾರೆ. ಆದರೂ ಹೆಚ್ಚು ಅಂಕ ಗಳಿಸಲು ಆಗಲ್ಲ. ಆದರೆ ನೀಟ್ ಯುಜಿ ಪರೀಕ್ಷೆಯಲ್ಲಿ 99.99 ಶೇಕಡಾ ಅಂಕಗಳನ್ನು ಪಡೆದ ವಿದ್ಯಾರ್ಥಿಯೋರ್ವ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ದಿನವೇ ಜೀವ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಹೌದು, ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುವ ದಿನವೇ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ. ಅನುರಾಗ್ ಅನಿಲ್ ಬೋರ್ಕರ್ ಎಂಬ ವಿದ್ಯಾರ್ಥಿ ವೈದ್ಯಕೀಯ ನನಗೆ  ವೈದ್ಯ(Doctor)ನಾಗಲು ಇಷ್ಟವಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ.

ಅನುರಾಗ್ ಅನಿಲ್ ಬೋರ್ಕರ್‌ಗೆ 2025ರ ಯುಜಿ ನೀಟ್ ಪರೀಕ್ಷೆಯಲ್ಲಿ 99.99 ಅಂಕ ಬಂದಿತ್ತು. ಒಬಿಸಿ ವಿಭಾಗದಲ್ಲಿ ಅಖಿಲ ಭಾರತ ಮಟ್ಟದಲ್ಲಿ 1475ನೇ ರಾಂಕ್ ಗಳಿಸಿದ್ದ. 19 ವರ್ಷದ ಈ ಹುಡುಗ ಓದಿನಲ್ಲಿ ಪ್ರತಿಭಾವಂತನಾಗಿದ್ದರು ಒತ್ತಡಕ್ಕೆ ಸಿಲುಕಿ ಸಾವಿನ ಮನೆ ಸೇರಿದ್ದಾನೆ. ಸಾವಿಗೂ ಮೊದಲು ಆತ ಡೆತ್‌ನೋಟ್ ಬರೆದಿದ್ದಾನೆ ಎನ್ನಲಾಗಿದ್ದು, ಅದರಲ್ಲಿ ನನಗೆ ವೈದ್ಯನಾಗುವುದಕ್ಕೆ ಇಷ್ಟವಿಲ್ಲ ಎಂದು ಬರೆದಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:KSRTC: ರಾಜ್ಯದ ಜನತೆಗೆ ಶಾಕ್ – ಇನ್ಮುಂದೆ ಪ್ರತೀ ವರ್ಷವೂ ಹೆಚ್ಚಾಗುತ್ತೆ ಬಸ್ ಟಿಕೆಟ್ ದರ !!

ವಿದ್ಯಾರ್ಥಿ ಜೀವ ಕಳೆದುಕೊಂಡ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದ ವೇಳೆ ಡೆತ್ ನೋಟ್ ಒಂದು ಪತ್ತೆಯಾಗಿದ್ದು ಇದರಲ್ಲಿ ಆತ ತನಗೆ ವೈದ್ಯನಾಗಲು ಇಷ್ಟವಿಲ್ಲ ಎಂದು ಬರೆದುಕೊಂಡಿದ್ದ ಎನ್ನಲಾಗಿದೆ, ಆದರೆ ಈ ಕುರಿತು ಪೊಲೀಸರು ಅಧಿಕೃತ ಹೇಳಿಕೆ ನೀಡಿಲ್ಲವಾಗಿದ್ದರೂ ಪತ್ರದಲ್ಲಿ ಈ ವಿಚಾರ ಇರುವುದು ದೃಢ ಎನ್ನಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ವಿದ್ಯಾರ್ಥಿ ಮೇಲೆ ಪೋಷಕರ ಒತ್ತಡ ಇತ್ತೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.