Home News ಸನ್ನಡತೆ ಆಧಾರದಲ್ಲಿ 161 ಕೈದಿಗಳ ಬಿಡುಗಡೆಗೆ ಮುಂದಾದ ಸರ್ಕಾರ!! ಶೀಘ್ರವೇ ವರದಿ ಸಲ್ಲಿಸಲು ಜೈಲು ಅಧಿಕಾರಿಗಳಿಗೆ...

ಸನ್ನಡತೆ ಆಧಾರದಲ್ಲಿ 161 ಕೈದಿಗಳ ಬಿಡುಗಡೆಗೆ ಮುಂದಾದ ಸರ್ಕಾರ!! ಶೀಘ್ರವೇ ವರದಿ ಸಲ್ಲಿಸಲು ಜೈಲು ಅಧಿಕಾರಿಗಳಿಗೆ ಆದೇಶ

Hindu neighbor gifts plot of land

Hindu neighbour gifts land to Muslim journalist

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸುಮಾರು 161 ಮಂದಿ ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಕಾರಾಗೃಹ ಇಲಾಖೆ ಆದೇಶ ಹೊರಡಿಸಿದೆ.

ಈ ಬಗ್ಗೆ ಮಾಹಿತಿಯ ಜೊತೆಗೆ ತಕ್ಷಣ ವರದಿ ಸಲ್ಲಿಸುವಂತೆ ಉಪ ಮಹಾನಿರೀಕ್ಷಕರಿಗೆ ಸೂಚಿಸಲಾಗಿದ್ದು, ರಾಜ್ಯಪಾಲರು ಮರು ಪರಿಶೀಲಿಸಲು ನಿರ್ದೇಶನ ನೀಡಿದ್ದ ಪ್ರಕರಣಗಳ ಪೈಕಿ ಬೆಂಗಳೂರು, ಬಳ್ಳಾರಿ, ಧಾರವಾಡ ಕಾರಾಗೃಹದ ಸುಮಾರು 24 ಮಂದಿ, ಉಳಿದಂತೆ ಶಿವಮೊಗ್ಗ, ಬೆಳಗಾವಿ, ವಿಜಯಪುರ, ಕಲಬುರಗಿ, ಮೈಸೂರು ಜೈಲಿನಿಂದ ಒಟ್ಟು 161 ಮಂದಿ ಕೈದಿಗಳು ಬಿಡುಗಡೆ ಹೊಂದಲಿದ್ದಾರೆ ಎಂದು ತಿಳಿದುಬಂದಿದೆ.