Home News Soujanya Murder Case: ಸೌಜನ್ಯ ಕುರಿತು ವೀಡಿಯೋ; ಸಮೀರ್‌ ಎಂಡಿ ವಿರುದ್ಧದ FIR ಗೆ ಹೈಕೋರ್ಟ್‌...

Soujanya Murder Case: ಸೌಜನ್ಯ ಕುರಿತು ವೀಡಿಯೋ; ಸಮೀರ್‌ ಎಂಡಿ ವಿರುದ್ಧದ FIR ಗೆ ಹೈಕೋರ್ಟ್‌ ತಡೆ!

Hindu neighbor gifts plot of land

Hindu neighbour gifts land to Muslim journalist

Soujanya Murder Case: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ತನಿಖಾ ವಿಡಿಯೋ ಮಾಡಿದ್ದ ಯೂಟ್ಯೂಬರ್‌ ಸಮೀರ್‌ ಎಂಡಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ ನೀಡಿದೆ.

ಬಿಎನ್‌ಎಸ್‌ 2023ರ ಸೆಕ್ಷನ್‌ 299 (ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು) ಅಡಿಯಲ್ಲಿ ಬಳ್ಳಾರಿಯ ಕೌಲ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ಗೆ ತಡೆಯಾಜ್ಞೆ ನೀಡಿದ್ದಾರೆ. ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅರ್ಜಿದಾರರಿಗೆ ಮಧ್ಯಂತರ ರಿಲೀಫ್‌ ನೀಡಿದೆ.

ಧರ್ಮಸ್ಥಳ ಪ್ರದೇಶದಲ್ಲಿ ದಶಕಗಳ ಕಾಲ ನಡೆದ ಹಲವಾರು ಕ್ರಿಮಿನಲ್‌ ಪ್ರಕರಣಗಳ ಕುರಿತು ಈ ವೀಡಿಯೋದಲ್ಲಿ ಹೇಳಲಾಗಿದೆ. ಇದರಲ್ಲಿ ವಿಶೇಷವಾಗಿ 2012 ರ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸವಿವರವಾಗಿ ಹೇಳಲಾಗಿತ್ತು. ಈ ವೀಡಿಯೋ ಮಿಲಿಯನ್‌ಗಟ್ಟಲೆ ವೀವ್ಯೂಸ್‌ ಆಗುತ್ತಿದ್ದಂತೆ ಮಾ.5,2025 ರಂದು ಕೌಲ್‌ ಬಜಾರ್‌ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದರು.

ಸಮೀರ್‌ ಪರ ವಾದ ಮಂಡನೆ ಮಾಡಿದ ವಕೀಲ ಎ ವೇಲನ್‌, ಎಫ್‌ಐಆರ್‌ ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗ ಮಾಡಲಾಗಿದೆ ಹಾಗೂ ಅರ್ಜಿದಾರರ ಅಭಿವ್ಯಕ್ತಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬ ವಾದನವನು ಮಾಡಿದರು.