Home News Sonu Nigam: ಕನ್ನಡಿಗರ ಮೇಲೆ ಗಂಭೀರ ಆರೋಪ ಮಾಡಿ ಮತ್ತೊಂದು ವಿಡಿಯೋ ಹರಿಬಿಟ್ಟ ಸೋನು ನಿಗಮ್!!

Sonu Nigam: ಕನ್ನಡಿಗರ ಮೇಲೆ ಗಂಭೀರ ಆರೋಪ ಮಾಡಿ ಮತ್ತೊಂದು ವಿಡಿಯೋ ಹರಿಬಿಟ್ಟ ಸೋನು ನಿಗಮ್!!

Hindu neighbor gifts plot of land

Hindu neighbour gifts land to Muslim journalist

Sonu Nigam: ಭಾರತದ ಖ್ಯಾತ ಗಾಯಕ ಸೋನು ನಿಗಮ್ ಅವರಿಗೆ ಕನ್ನಡವೆಂದರೆ ಬಲು ಪ್ರೀತಿ. ಸಾವಿರಾರು ಕನ್ನಡ ಹಾಡುಗಳನ್ನು ಹಾಡಿ ಕನ್ನಡಿಗರ ಮನ ಗೆದ್ದ ಗಾಯಕ ಇವರು. ಆದರೆ ಇದೀಗ ಕಾರ್ಯಕ್ರಮ ಒಂದರಲ್ಲಿ ಕನ್ನಡ ಹಾಡು ಹಾಡಲು ಬಂದ ಬೇಡಿಕೆಯನ್ನು ಪಹಲ್ಗಾಮ್ ದಾಳಿಗೆ ಹೋಲಿಸಿ ವಿವಾದಕ್ಕೆ ಗುರಿಯಾಗಿದ್ದರು. ಈ ಬೆನ್ನಲ್ಲೇ ರಾಜ್ಯಾದ್ಯಂತ ಬಾರಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಸೋನು ನಿಗಮ್ ಅವರು ಕನ್ನಡಿಗರ ಬಗ್ಗೆ ಮತ್ತೊಂದು.

ಹೌದು, ಕನ್ನಡಿಗರ ಮೇಲೆ ಸೋನು ನಿಗಮ್ ಮತ್ತೊಂದು ಗಂಭೀರ ಆರೋಪವನ್ನು ಮಾಡಿ ವಿಡಿಯೋ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಆ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡಿ ಅಂತ ರಿಕ್ವೆಸ್ಟ್‌ ಮಾಡಲಿಲ್ಲ. ದಬಾಯಿಸಿದರು, ನನಗೆ ಬೆದರಿಕೆ ಹಾಕಿದರು ಅಂತ ಅವರು ಹೇಳಿದ್ದಾರೆ. ಕೆಲವೇ ಕೆಲವರ ತಪ್ಪು ನಡವಳಿಕೆಯಿಂದಾಗಿ ಎಲ್ಲಾ ಕನ್ನಡಿಗರನ್ನೂ ಕೆಟ್ಟವರೆಂದು ಭಾವಿಸಬಾರದು ಅಂತ ಅವರು ಹೇಳಿದ್ದಾರೆ. ಆಗ ನಾನು ಕನ್ನಡದ ಹಾಡು ಹಾಡುವುದಕ್ಕೆ ಸಿದ್ಧನಿದ್ದೆ. ಆದರೆ, ಬಲವಂತ & ಒತ್ತಾಯ ಮಾಡುವುದು ಸರಿಯಲ್ಲ ಅಂತ ಹೇಳಿದ್ದಾರೆ.

ಅಲ್ಲದೆ ಕನ್ನಡ.. ಕನ್ನಡ ಅಂತ ಪ್ರೀತಿಯಿಂದ ಹೇಳುವುದಕ್ಕೂ ಕನ್ನಡ.. ಕನ್ನಡ ಅಂತ ಧಮ್ಕಿ ಹಾಕುವುದರ ನಡುವೆ ಸಾಕಷ್ಟು ವ್ಯತ್ಯಾಸಗಳು ಇವೆ. ಆ ಕಾರ್ಯಕ್ರಮದಲ್ಲಿ ವೇದಿಕೆ ಕೆಳಗಿದ್ದ ಕೆಲವು ಗೂಂಡಾಗಳು ಕೂಗಾಡುತ್ತಿದ್ದರು. ಅವರು ತುಂಬಾನೇ ತೊಂದರೆ ಕೊಡುತ್ತಿದ್ದರು. ನಾನು ಅವರಿಗೆ ಪಹಲ್ಗಾಮ್ನಲ್ಲಿ ಉಗ್ರರು ಪ್ಯಾಂಟ್ ಕಳಚುವಾಗ ಭಾಷೆಯನ್ನು ಕೇಳಿಲ್ಲ ಅಂತ ಹೇಳುವುದು ತೀರ ಅನಿವಾರ್ಯವಾಗಿತ್ತು ಎಂದಿದ್ದಾರೆ. ನಾನು ಸುಂದರ ಕ್ಷಣಗಳನ್ನು ಹಾಳು ಮಾಡಬೇಡಿ ಅಂತ ಹೇಳಿದ್ದೆ ಅವರು ಕೇಳಲಿಲ್ಲ.

ಕನ್ನಡಿಗರು ತುಂಬಾ ಪ್ರೀತಿಯ ಜನ ಎಲ್ಲರೂ ಆ ರೀತಿ ಇಲ್ಲ. ಕೆಲವರು ಎಲ್ಲಾ ಕಡೆಯೂ ಇದ್ದಾರೆ. ಅವರಿಗೆ ಅಲ್ಲಿಯೇ ಉತ್ತರಿಸುವುದು ಅನಿವಾರ್ಯ ಅಂತ ಅವರು ಹೇಳಿದ್ದಾರೆ. ಎಲ್ಲರೂ ಒಂದೇ ಅಲ್ಲ.. ನಾನು ಮೊದಲ ಹಾಡು ಪ್ರಾರಂಭಿಸಿದಾಗಲೇ ಅವರು ಒತ್ತಾಯಿಸಿದ್ದರು. ಹೀಗಾಗಿ ನಾನು ರಿಯಾಕ್ಟ್‌ ಮಾಡಬೇಕಾಯಿತು. ಕಮೆಂಟ್‌ಗಳನ್ನು ನೋಡಿ ನೀವು ಅಲ್ಲಿ ಎಲ್ಲಾ ಕನ್ನಡಿಗರು ಸಹ ಈ ರೀತಿ ಇಲ್ಲ ಅಂತ ಹೇಳಬೇಕಾಯ್ತು ಅಂತ ಹೇಳಿದ್ದಾರೆ.