Home News Smruthi Mandana : ಮುರಿದು ಬಿದ್ದ ಸ್ಮೃತಿ ಮಂಧಾನ ಮದುವೆ – ಟೀಮ್‌ ಇಂಡಿಯಾ ಆಟಗಾರ್ತಿಯರಿಂದ...

Smruthi Mandana : ಮುರಿದು ಬಿದ್ದ ಸ್ಮೃತಿ ಮಂಧಾನ ಮದುವೆ – ಟೀಮ್‌ ಇಂಡಿಯಾ ಆಟಗಾರ್ತಿಯರಿಂದ ಮಹಾ ನಿರ್ಧಾರ!!

Hindu neighbor gifts plot of land

Hindu neighbour gifts land to Muslim journalist

Smruthi Mandana ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನಾ ತಮ್ಮ ವಿವಾಹದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಪಾಲಾಶ್ ಮುಚ್ಚಲ್ ಜೊತೆಗಿನ ಮದುವೆಯನ್ನು ಕ್ಯಾನ್ಸಲ್ ಮಾಡಲಾಗಿದ್ದು, ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಬಳಿಕ ಪಾಲಾಶ್ ಮುಚ್ಚಲ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಇದೀಗ ಇಬ್ಬರು ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಪಲಾಶ್ ಕುರಿತು ಟೀಮ್ ಇಂಡಿಯಾ ಆಟಗಾರ್ತಿಯರು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

ಹೌದು, ಸ್ಮೃತಿ ಮತ್ತು ಪಲಾಶ್ ಮದುವೆ ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಈ ವಿಷಯದ ಬಗ್ಗೆ ತಮ್ಮ ಮೌನವನ್ನು ಮುರಿದ ಮಂಧಾನ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ, ಕುಟುಂಬಗಳು ವಿವಾಹವನ್ನು ರದ್ದುಗೊಳಿಸಿವೆ ಎಂದು ದೃಢಪಡಿಸಿದ್ದಾರೆ. ಇದೀಗ ಸ್ಮೃತಿ ಮಂದಾನ ಹಾಗೂ ಸಂಗೀತ ಸಂಯೋಜಕ ಪಲಾಶ್‌ ಮುಚ್ಛಲ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ‘ಅನ್‌ಫಾಲೋ’ ಮಾಡಿಕೊಂಡಿದ್ದಾರೆ. ಇದೀಗ ಟೀಮ್‌ ಇಂಡಿಯಾದ 10 ಆಟಗಾರ್ತಿಯರು ಪಲಾಶ್‌ ಮಚ್ಚಲ್‌ ವಿರುದ್ಧ ಮಹಾ ನಿರ್ಧಾರ ತೆಗೆದುಕೊಂಡಿದ್ದಾರೆ.

ವರದಿಯ ಪ್ರಕಾರ, ಭಾರತೀಯ ಮಹಿಳಾ ತಂಡದ 10 ಆಟಗಾರ್ತಿಯರು ಪಲಾಶ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಅವರೆಲ್ಲರೂ ಸ್ಮೃತಿ ಮಂಧಾನಾಗೆ ತುಂಬಾ ಆಪ್ತರು ಎಂದು ಪರಿಗಣಿಸಲಾಗಿದೆ. ಈ ಆಟಗಾರ್ತಿಯರಲ್ಲಿ ಸ್ಮೃತಿ ಮಂಧಾನ (ಸ್ವತಃ), ಜೆಮಿಮಾ ರೋಡ್ರಿಗಸ್, ರಾಧಾ ಯಾದವ್, ಶ್ರೇಯಾಂಕ ಪಾಟೀಲ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಶಿಫಾಲಿ ವರ್ಮಾ (ಶಿವಾಲಿ ಶಿಂಧೆ), ಯಸ್ತಿಕಾ ಭಾಟಿಯಾ, ರಿಚಾ ಘೋಷ್, ದೀಪ್ತಿ ಶರ್ಮಾ ಸೇರಿದ್ದಾರೆ.