Home News Landslide: ಶಿರಸಿ: ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ: ವಾಹನ ಸಂಚಾರ ಸಂಪೂರ್ಣ ಬಂದ್‌

Landslide: ಶಿರಸಿ: ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ: ವಾಹನ ಸಂಚಾರ ಸಂಪೂರ್ಣ ಬಂದ್‌

Hindu neighbor gifts plot of land

Hindu neighbour gifts land to Muslim journalist

Sirsi: ಶಿರಸಿ ಕುಮಟಾ ಸಂಪರ್ಕ ರಸ್ತೆಯ ದೇವಿಮನೆ ಘಟ್ಟ ಪ್ರದೇಶದಲ್ಲಿ ಇಂದು (ಭಾನುವಾರ) ಬೆಳಿಗ್ಗೆ ಭೂಕುಸಿತ ಉಂಟಾಗಿದೆ. ಎರಡು ದಿನಗಳ ಅವಧಿಯಲ್ಲಿ ಇದು ಎರಡನೇ ಭೂಕುಸಿತ ಪ್ರಕರಣವಾಗಿದೆ. ಇಲ್ಲಿ ವಾಹನ ಸಂಚಾರವನ್ನು ಕಡಿತಗೊಳಿಸಲಾಗಿದೆ.

ಶನಿವಾರದಿಂದ ಮಳೆ ಬಿರುಸಾಗಿ ಸುರಿಯುತ್ತಿದ್ದು, ಪ್ರಸ್ತುತ ರಸ್ತೆ ನಿರ್ಮಾಣ ಕಂಪನಿಯಿಂದ ತೆರವು ಕಾರ್ಯ ನಡೆಯುತ್ತಿದೆ ಎಂದು ತಾಲ್ಲೂಕು ಆಡಳಿತ ಮಾಹಿತಿ ನೀಡಿದೆ.

ಶಿರಸಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766 (ಇ) ನಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಬಿದ್ದು, ಜೊತೆಗೆ ಹೆದ್ದಾರಿ ಮೇಲೆ ಕಲ್ಲು, ಮರಗಳು ಬದಿದಿದೆ. ಈ ಕಾರಣದಿಂದ ಇಂದು ಬೆಳಗ್ಗಿನಿಂದ ಕುಮಟಾ-ಶಿರಸಿಯ ಹೆದ್ದಾರಿ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.