Home News ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸದ್ಭಾವನ ದಿನಾಚರಣೆ- ಪ್ರತಿಜ್ಞಾ ಸ್ವೀಕಾರ

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸದ್ಭಾವನ ದಿನಾಚರಣೆ- ಪ್ರತಿಜ್ಞಾ ಸ್ವೀಕಾರ

Hindu neighbor gifts plot of land

Hindu neighbour gifts land to Muslim journalist

ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ 2021ರ ಆಗಸ್ಟ್ 18ರಂದು ರಾಷ್ಟ್ರೀಯ ಸದ್ಭಾವನ ದಿನಾಚರಣೆ- ಪ್ರತಿಜ್ಞಾ ಸ್ವೀಕಾರ ಸರ್ಕಾರದ ಆದೇಶದಂತೆ ಸರಳವಾಗಿ ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸರವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ರಾಜ್ಯದ ಎಲ್ಲಾ ಧರ್ಮ, ಭಾಷೆಗಳ ಜನರಲ್ಲಿ ರಾಷ್ಟ್ರೀಯ ಏಕೀಕರಣ, ಕೋಮು ಸೌಹಾರ್ದತೆಯನ್ನು ಉತ್ತೇಜಿಸಿ, ಎಲ್ಲರಲ್ಲೂ ಸದ್ಭಾವನೆಯನ್ನು ಮೂಡಿಸಿ ಹಿಂಸಾಚಾರವನ್ನು ತ್ಯಜಿಸುವಂತೆ ಮಾಡಲು ಪ್ರತಿವರ್ಷ
ಆಗಸ್ಟ್ 20ರಂದು ಸದ್ಭಾವನಾ ದಿನವನ್ನು ಆಚರಿಸಲಾಗುತ್ತದೆ. ಆದರೆ ಈ ವರ್ಷ ಆಗಸ್ಟ್ 20ರಂದು ಮೊಹರಂ ಹಬ್ಬದ ಪ್ರಯುಕ್ತ ಎಲ್ಲ ಸರ್ಕಾರಿ ಕಚೇರಿಗಳ ರಜೆಯ ಕಾರಣ ಈ ಕಾರ್ಯಕ್ರಮವನ್ನು ಇಂದು ಆಚರಿಸಲಾಯಿತು ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಮಾಭಿವೃದ್ಧಿ ನಿರ್ದೇಶಕಿ ಕು. ಯಶೋದ,ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಶ್ರೀ ಕೆ.ಪ್ರವೀಣ್‌ಕುಮಾರ್‌,ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀ ಪ್ರೇಮನಾಥ್, ಕು.ರಕ್ಷಾ, ರೋವರ್ಸ್ ಮತ್ತು ರೇಂಜರ್ಸ್ ಸ್ಕೌಟ್ ಲೀಡರ್ ಗಳಾದ ಶ್ರೀ ಪ್ರಕಾಶ್, ಶ್ರೀಮತಿ ಸಂಗೀತ ಪೂಜಾರಿ,
ಕಾಲೇಜಿನ ವಿದ್ಯಾರ್ಥಿಗಳು, ಎಲ್ಲಾ ಭೋಧಕ ಹಾಗೂ ಭೋಧಕೆತರ ವೃಂದದವರು ಉಪಸ್ಥಿತರಿದ್ದರು.