Home News Chaitra Kundapura : ’50 ಲಕ್ಷ ಡೆಪಾಸಿಟ್ ಮಾಡಿ ನನಗೂ, ನನ್ನ ಹೆಂಡತಿಗೂ ಹಿಂಸೆ ಕೊಡುತ್ತಿದ್ದಾಳೆ’...

Chaitra Kundapura : ’50 ಲಕ್ಷ ಡೆಪಾಸಿಟ್ ಮಾಡಿ ನನಗೂ, ನನ್ನ ಹೆಂಡತಿಗೂ ಹಿಂಸೆ ಕೊಡುತ್ತಿದ್ದಾಳೆ’ – ಚೈತ್ರಾ ಕುಂದಾಪುರ ಮೇಲೆ ಸ್ವಂತ ಬಾವ ಗಂಭೀರ ಆರೋಪ

Hindu neighbor gifts plot of land

Hindu neighbour gifts land to Muslim journalist

Chaitra Kundapura : ಕೆಲವು ದಿನಗಳ ಹಿಂದಷ್ಟೇ ಹಿಂದೂ ಫೈಯರ್ ಬ್ರಾಂಡ್ ಆಗಿರುವ ಚೈತ್ರ ಕುಂದಾಪುರವರ ತಂದೆ ಬಾಲಕೃಷ್ಣ ನಾಯಕ್ ಅವರು ಮಾಧ್ಯಮಗಳ ಮುಂದೆ ಬಂದು ಮಗಳು ಮತ್ತು ಹೆಂಡತಿಯ ಮೇಲೆ ಸಾಕಷ್ಟು ಆರೋಪಗಳ ಸುರಿಮಳೆಯನ್ನು ಮಾಡಿದ್ದರು. ಇದಕ್ಕೆ ಚೈತ್ರ ಅವರ ತಾಯಿ ಹಾಗೂ ಚೈತ್ರ ತಿರುಗೇಟು ಕೂಡ ನೀಡಿದ್ದರು. ಇದೀಗ ಈ ಬೆನ್ನಲ್ಲೇ ಚೈತ್ರ ಕುಂದಾಪುರ ಅವರ ಅಕ್ಕನ ಗಂಡ ಅಂದರೆ ಅವರ ಭಾವ ವಿಡಿಯೋ ಮಾಡಿ ಚೈತ್ರಾ, ನನಗೆ ಮತ್ತು ನನ್ನ ಹೆಂಡತಿಗೆ ಹಿಂಸೆ ಕೊಡುತ್ತಿದ್ದಾಳೆ ಎಂದು ಆರೋಪ ಮಾಡಿದ್ದಾರೆ.

ಹೌದು, ಸ್ವಂತ ಬಾವ ಚಂದ್ರಶೇಖರ್ ಅವರು ಚೈತ್ರಾ ಕುಂದಾಪುರ ಮೇಲೆ ಆರೋಪ ಮಾಡಿದ್ದಾರೆ. ಅಲ್ಲದೇ ಅವರಿಗೆ ಚೈತ್ರಾ ಕುಂದಾಪುರ ಮೋಸ ಮಾಡಿದ್ದು ಹೇಗೆ ಅಂತ ಎಳೆ ಎಳೆಯಾಗಿ ವಿಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ. ಅಲ್ಲದೆ ಈ ವಿಡಿಯೋದಲ್ಲಿ ಚೈತ್ರ ಕುಂದಾಪುರ ಮೇಲೆ ಬಂದಿದ್ದ 5 ಕೋಟಿ ಹಗರಣದ ಅಪವಾದದ ಕುರಿತು ಕೂಡ ಅವರು ಮಾಹಿತಿ ನೀಡಿದ್ದಾರೆ.

ಚೈತ್ರ ಕುಂದಾಪುರ ಬಾವ ಹೇಳಿದ್ದೇನು?

“ಚೈತ್ರಾ ಹಗರಣ ಆಗುವ ಮೊದಲು ನಾನು ಶ್ರೀರಾಮ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಮ್ಯಾನೇಜರ್ ಆಗಿದ್ದೆ. ಒಂದು ಬಾರಿ ಚೈತ್ರಾ ಹಾಗೂ ಶ್ರೀಕಾಂತ್ ಬಂದು 50 ಲಕ್ಷ ಡೆಪಾಸಿಟ್ ಮಾಡಲು ಹೇಳಿದರು. ಕಾರ್ಯದರ್ಶಿಗಳ ಬಳಿ ಕೇಳಿ ನಾನು ಡೆಪಾಸಿಟ್ ಮಾಡಿದ್ದೆ. ಅಪ್ಪ ಅಮ್ಮನ ಹೆಸರಲ್ಲಿ ಡೆಪಾಸಿಟ್ ಮಾಡಲು ಹೇಳಿದಳು. ಇದು ಮಂತ್ರಿಗಳ ದುಡ್ಡು ಕಡಿಮೆ ಅವಧಿಯಲ್ಲಿ ಡೆಪಾಸಿಟ್ ಮಾಡುತ್ತವೆ ನಂತರ ತೆಗೆಯುತ್ತೇವೆ ಅಂದಿದ್ದಳು. ಎಲ್ಲಾ ಪತ್ರಗಳಿಗೂ ಅವಳೇ ಸಹಿ ಮಾಡಿದ್ದಳು. ಸ್ವಲ್ಪ ಸಮಯದ ನಂತರ ಡೆಪಾಸಿಟ್ ಆಧಾರದಲ್ಲಿ ಸಾಲ ಮಾಡಿದಳು. ಸಂತೋಷ್ ಅವರಿಗೆ ಸಾಲ ಮಾಡಿಸಿ ಕೊಟ್ಟಳು. ಎಕ್ಸ್ಟ್ರಾ ಬಡ್ಡಿಯನ್ನು ನಾನು ಕೊಡುತ್ತೇನೆ. ಬಾಂಡ್ ಮೇಲೆ ಲೋನ್ ಮಾಡಿ ಕೊಡಿ ಎಂದು ಹೇಳಿದಳು. ಸತ್ಯ ನಂಬಿ ನಾನು ಸಾಲ ಮಾಡಿ ಕೊಟ್ಟೆ. ಉಪ್ಪುರು ಬ್ರಾಂಚ್​ನಲ್ಲಿ ಇದ್ದಾಗ ಎಲೆಕ್ಷನ್ ಟೈಮ್ನಲ್ಲಿ ಎರಡು ಕೋಟಿ ರೂಪಾಯಿ ತಗೊಂಡು ಬಂದಿದ್ದರು. ಡೆಪಾಸಿಟ್ ತೆಗೆದುಕೊಳ್ಳಲು ಕಾರ್ಯದರ್ಶಿಯವರು ಸೂಚಿಸಿದ್ದರು”

“ಸ್ವಲ್ಪ ಹಣ ಲಾಕರ್ ನಲ್ಲಿ ಇಟ್ಟು ಹೋಗಿದ್ದರು. ಸ್ವಲ್ಪ ಸಮಯದ ನಂತರ ಮನೆ ಕಟ್ಟಲು ಇದೆ ಡೆಪಾಸಿಟ್ ಮೇಲೆ ಸಾಲ ಮಾಡಿ ಕೊಡಿ ಎಂದರು. ಸಾಲಕ್ಕೆ ಒರಿಜಿನಲ್ ಬಾಂಡ್ ಬೇಕು. ಎರಡು ಬಾರಿಯೂ ನೀವು ವರ್ಜಿನಲ್ ಬಾಂಡ್ ಕೊಟ್ಟಿಲ್ಲ. ಇದರಿಂದ ತೊಂದರೆ ಆಗಬಹುದು ಎಂದು ಹೇಳಿದೆ. ಒರಿಜಿನಲ್ ಬಾಂಡ್ ಮಿಸ್ ಪ್ಲೇಸ್ ಆಗಿದೆ ಎಂದು ಹೇಳಿದಳು. ನಂಬಿಕೆಯಿಂದ ನಾನು ಸಾಲ ಮಾಡಿ ಕೊಟ್ಟೆ. ಚೈತ್ರಾ ನನ್ನ ನಾದಿನಿ ಆದಕಾರಣ ಸಹಾಯ ಮಾಡಿದೆ. ಇದಾಗಿ ಒಂದುವರೆ ತಿಂಗಳಲ್ಲಿ ಇಬ್ಬರು ಅರೆಸ್ಟ್ ಆದರು. ನಾನು ಸಮಸ್ಯೆಯಲ್ಲಿದ್ದೇನೆ ಲಾಕರ್ ನಲ್ಲಿ ಹಣ ಇಟ್ಟದ್ದು ಅಥವಾ ಡೆಪಾಸಿಟ್ ಮಾಡಿದ್ದು ಯಾರಿಗೂ ಹೇಳಬೇಡಿ ಎಂದರು. ಯಾವುದೇ ಮಾಹಿತಿ ಕೊಡಬೇಡಿ ಎಂದರು. ನೀವು ಮಾಹಿತಿ ಕೊಟ್ಟರೆ ನಾನು ಸಮಸ್ಯೆಯಲ್ಲಿ ಸಿಕ್ಕಿ ಬೀಳುತ್ತೇನೆ ಎಂದಳು. ಆಮೇಲೆ ಸಂಬಂಧ ಏನೂ ನೋಡೋದಿಲ್ಲ ನಾನು, ಏನು ಮಾಡಬೇಕು ಅಂತ ನನಗೆ ಗೊತ್ತಿದೆ ಎಂದು ಬೆದರಿಕೆ ಹಾಕಿದ್ದಳು”

ಬಂಧನದ ನಂತರ ಸಿಸಿಬಿ ಅವರು ಶ್ರೀಕಾಂತನನ್ನು ನಮ್ಮಲ್ಲಿ ಕರೆ ತಂದಾಗ ಎಲ್ಲ ವಿಚಾರ ಹೇಳಿದೆ. ಡೆಪಾಸಿಟ್ ಬಾಂಡ್ ಎಲ್ಲ ಅಲ್ಲೇ ಸಿಕ್ಕಿದೆ. ಎಲ್ಲ ಒರಿಜಿನಲ್ ಬಾಂಡ್ ಕೂಡ ಲಾಕರ್ ನಲ್ಲಿ ಇತ್ತು. ಲೋನ್ ಬಗ್ಗೆ ನಾನು ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಮಾಹಿತಿ ನಾನು ನೀಡಿದ್ದೇನೆ ಎಂಬ ಕಾರಣಕ್ಕೆ ಚೈತ್ರಾ ಹಗೆ ಸಾಧಿಸುತ್ತಿದ್ದಾಳೆ. ಜೈಲಿಂದ ಬಿಡುಗಡೆಯಾಗಿ ಬಂದ ನಂತರ ಚೈತ್ರಾ ಮತ್ತು ಶ್ರೀಕಾಂತ್ ನನಗೆ ಉಲ್ಟಾ ಹೊಡೆದಿದ್ದಾರೆ. ನಾವೇ ಸಾಲ ಮಾಡಿದ ಬಗ್ಗೆ ನಿಮ್ಮ ಹತ್ತಿರ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿದಳು. ನನ್ನ ಬಗ್ಗೆ ಮಾಹಿತಿ ಕೊಟ್ಟದ್ದಕ್ಕೆ ಬೇಕಾದರೆ ಕೆಲಸ ಕಳೆದುಕೋ ಎಂದು ಹೇಳಿದಳು. ನಾನು ಸಾಲ ಮಾಡಿದ್ದನ್ನು ಒಪ್ಪಿಕೊಳ್ಳುವುದಿಲ್ಲ ಎಂದಳು. ಇದುವರೆಗೂ ನಮಗೆ ಯಾವುದೇ ಹಣ ಕೊಟ್ಟಿಲ್ಲ. ನನ್ನ ಹೆಂಡತಿಗೂ ನನಗೂ ಚಿತ್ರ ಹಿಂಸೆ ನೀಡುತ್ತಿದ್ದಾಳೆ. ಅವಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಒತ್ತಾಯಿಸಿದ್ದಾರೆ.