Home News Award: ಹಿರಿಯ ವಾಣಿಜ್ಯೋದ್ಯಮಿ, ಬಿ ಆರ್ ನಾಗೇಂದ್ರ ಪ್ರಸಾದ್ರವರಿಗೆ ಪ್ರತಿಷ್ಠಿತ ಆತಿಥ್ಯ ರತ್ನ ಪ್ರಶಸ್ತಿ

Award: ಹಿರಿಯ ವಾಣಿಜ್ಯೋದ್ಯಮಿ, ಬಿ ಆರ್ ನಾಗೇಂದ್ರ ಪ್ರಸಾದ್ರವರಿಗೆ ಪ್ರತಿಷ್ಠಿತ ಆತಿಥ್ಯ ರತ್ನ ಪ್ರಶಸ್ತಿ

Hindu neighbor gifts plot of land

Hindu neighbour gifts land to Muslim journalist

Award: ಕರ್ನಾಟಕ ರಾಜ್ಯ ಹೋಟೆಲ್ ಗಳ(Hotel) ಸಂಘದ ವತಿಯಿಂದ ಕುಶಾಲನಗರದ ಕನ್ನಕಾ ಇಂಟರ್ನ್ಯಾಷನಲ್ ಹೋಟೆಲ್‌ನ ವ್ಯವಸ್ತಾಪಕ ನಿರ್ದೇಶಕರಾದ ಬಿ ಆರ್ ನಾಗೇಂದ್ರ ಪ್ರಸಾದ್ರವರಿಗೆ ಪ್ರತಿಷ್ಠಿತ ಆತಿಥ್ಯ ರತ್ನ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಮೇ 29ರಂದು ಬೆಂಗಳೂರಿನ ಎಫ್ ಕೆಸಿಸಿ ಭವನದಲ್ಲಿ ಇರುವ ಸರ್ ಎಂವಿ ಆಡಿಟೋರಿಯಂನಲ್ಲಿ ನಡೆಲಿರುವ ಕಾರ್ಯಕ್ರಮದಲ್ಲಿ ಗೌರವಿಸಲಾಗುತ್ತದೆ.

ಆದಿಚುಂಚನ ಗಿರಿ ಮಠಾಧಿಪತಿಗಳಾದ ನಿರ್ಮಲಾನಂದನಾಥ ಸ್ವಾಮೀಜಿ, ರಾಜ್ಯಪಾಲರಾದ ಥಾವರ್ ಚಂದ್ ಗೆಹಲಾಟ್ ಸೇರಿ ಗಣ್ಯರಿಂದ ಪ್ರಶಸ್ತಿ ಪ್ರಧಾನ ನಡೆಯಲಿದೆ. ಕುಶಾಲನಗರದ ಕನ್ನಿಕಾ ಇಂಟರ್ ನ್ಯಾಷನಲ್ ಹೋಟೆಲ್ ಮಾಲೀಕರಾಗಿರುವ ನಾಗೇಂದ್ರ ಪ್ರಸಾದ್ ಅವರು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೊಡಗು ಹೋಟೆಲ್ ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸಂಘದ ಅಧ್ಯಕ್ಷರಾಗಿದ್ದರಾಗಿ, ಕೊಡಗಿನ ಮೊಟ್ಟ ಮೊದಲ ದೃಶ್ಯ ವಾಹಿನಿ ಚಾನೆಲ್ ಕೂರ್ಗ್ ನ ಸ್ಥಾಪಕ ನಿರ್ದೇಶಕರಾಗಿ, ಆರ್ಯವೈಶ್ಯ ಸಂಘಟನೆಯಲ್ಲಿ ಕೂಡ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ಸೇವೆಸಲಿಸಿದ್ದರು. ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ದುಡಿದಂತ ಇವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್ ಸಂಘ ಇವರ ಆಯ್ಕೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.