Home News Sandalwood : ವಿಜಯ ರಾಘವೇಂದ್ರ ಜೊತೆ ಎರಡನೇ ಮದುವೆ – ಕೊನೆಗೂ ಮೌನ ಮುರಿದ ಮೇಘನಾ...

Sandalwood : ವಿಜಯ ರಾಘವೇಂದ್ರ ಜೊತೆ ಎರಡನೇ ಮದುವೆ – ಕೊನೆಗೂ ಮೌನ ಮುರಿದ ಮೇಘನಾ ರಾಜ್

Hindu neighbor gifts plot of land

Hindu neighbour gifts land to Muslim journalist

Sandalwood : ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಅಗಲಿದ ಬಳಿಕ ಮೇಘನಾ ರಾಜ್ ನೊಂದು ಹೋಗಿದ್ದಾರೆ. ಒಡಲಲ್ಲಿ ಪುಟ್ಟ ಕಂದಮ್ಮನ್ನು ಇಟ್ಟುಕೊಂಡು ಯಾತನೆ ಅನುಭವಿಸುತ್ತಿದ್ದಾರೆ. ಇತ್ತ ವಿಜಯ ರಾಘವೇಂದ್ರ ಅವರು ಕೂಡ ತಮ್ಮ ಪ್ರೀತಿಯ ಮಡದಿಯನ್ನು ನೋವು ತಿನ್ನುತ್ತಿದ್ದಾರೆ. ಹೀಗಿರುವಾಗ ಈ ಇಬ್ಬರು ನಟ-ನಟಿಯರ ಎರಡನೇ ಮದುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆಯಾಗುತ್ತಿದೆ.

ಹೌದು, ವಿಜಯ್‌ ರಾಘವೇಂದ್ರ ಅವರನ್ನು ಮೇಘನಾ ರಾಜ್‌ ಮತ್ತೆ ಮದುವೆಯಾಗಲಿದ್ದಾರೆ ಎಂಬ ಊಹಾಪೋಹ ಸೋಷಿಯಲ್‌ ಮೀಡಿಯಾದಲ್ಲಿ ಹರಿಡಿತ್ತು. ಅದಕ್ಕೀಗ ಮೇಘನಾ ರಾಜ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಯೂಟ್ಯೂಬ್‌ ವೊಂದಕ್ಕೆ ಪ್ರತಿಕ್ರಿಯಿಸಿರುವ ಮೇಘನಾ ರಾಜ್‌, “ಜನರಿಗೆ ನಾನು ಏನೂ ಉತ್ತರ ಕೊಟ್ಟಿದ್ದೇನೆ ಎನ್ನುವುದು ಅರ್ಥವಾಗಿಲ್ಲ. ಆದರೂ ಕಮೆಂಟ್‌ ಹಾಕಿದ್ದಾರೆ. ಇವತ್ತು ನಾನು ಉತ್ತರ ಕೊಟ್ಟರೆ ಅದಕ್ಕೂ ಕಮೆಂಟ್‌ ಹಾಕುತ್ತಾರೆ. ತುಂಬಾ ಕಮೆಂಟ್‌ ಮಾಡುವುವವರಿಗೆ ನಾನು ಹೇಳಲು ಇಷ್ಟವಿಲ್ಲ. ಅದು ಪ್ರಶ್ನೆಯಾಗಿ ಉಳಿಯಲಿಲ್ಲ. ನಾನನು ಏನೂ ಹೇಳ್ತಿಲ್ಲ. ಜನ ಎಲ್ಲವನ್ನೂ ಹೇಳುತ್ತಿದ್ದಾರೆ. ಅವರಿಗೆ ಎಷ್ಟು ಖುಷಿಯಾಗುತ್ತೋ ಅಷ್ಟು ಹೇಳಲಿ” ಎಂದು ಹೇಳಿದ್ದಾರೆ.

ಅಲ್ಲದೆ “ನನ್ನ ರಾಯನ್‌ಗೆ ಅಪ್ಪ ಇದ್ದಾರೆ, ರಾಯನ್‌ಗೆ ಚಿರಂಜೀವಿ ಸರ್ಜಾನೇ ಅಪ್ಪ. ನನಗೆ ಎರಡನೇ ಮದುವೆ ಬಗ್ಗೆ ಯೋಚನೆ ಬಂದಿಲ್ಲ ಅಂತ ಹೇಳಿದ್ದರೆ ಅದು ಸುಳ್ಳು ಆಗುವುದು. ನನ್ನ ಮಗನನ್ನು ನೋಡಿದಾಗ, ಅವನು ಪ್ರತೀ ದಿನವೂ ಅಪ್ಪನ ಬಗ್ಗೆ ಮಾತನಾಡುತ್ತಾನೆ. ಅಪ್ಪ ಅಂದ್ರೆ ಚಿರು ಅಂತ ಅವನಿಗೆ ಗೊತ್ತಿದೆ. ಚಿರು ಹಾಡುಗಳನ್ನು ನೋಡುತ್ತಾನೆ. ಆದರೆ ಫಿಸಿಕಲ್‌ ಆಗಿ ಚಿರಂಜೀವಿ ಸರ್ಜಾರನ್ನು, ಮಗ ನೋಡಿಲ್ಲ. ಆದ್ರೆ ಅಪ್ಪ ಎನ್ನೋರು ಇದ್ದಾರೆ ಅನ್ನೋದು ಅವನಿಗೆ ಗೊತ್ತಿದೆ. ಆದರೆ ರಾಯನ್‌ಗೆ ಫಿಸಿಕಲ್‌ ಆಗಿ ತಂದೆ ಫಿಗರ್‌ ಇದ್ದರೆ ಚೆನ್ನ ಅಂತ ಕೆಲ ಬಾರಿ ಅನಿಸುತ್ತದೆ” ಎಂದು ಹೇಳಿದ್ದಾರೆ.

ಅಂದಹಾಗೆ ದಿಢೀರ್ ಈ ರೀತಿಯಾಗಿ ಚರ್ಚೆ ಶುರುವಾಗೋದಕ್ಕೆ ಕಾರಣ ಆಗಿದ್ದು ವಿಜಯ್ ರಾಘವೇಂದ್ರ ಅವರ ಒಂದು ರೀಲ್ಸ್, ಸೋಷಿಯಲ್ ಮೀಡಿಯಾ ಅಕೌಂಟ್‌ನ ಮೂಲಕ ಆಕ್ಟಿವ್ ಆಗಿರುವ ವಿಜಯ್ ರಾಘವೇಂದ್ರ ಅವರು ಹಾಡು ಒಂದನ್ನ ಹಾಡಿದ್ದರು. ಇನ್ಸ್‌ಟಾಗ್ರಾಂ ಅಕೌಂಟ್ ಮೂಲಕ ವಿಜಯ್ ರಾಘವೇಂದ್ರ ಅವರು ಈ ಹಾಡು ಪೋಸ್ಟ್ ಮಾಡಿದ್ರು. ಮೇಘ ಬಂತು ಮೇಘ, ಮೇಘ ಬಂತು ಮೇಘ, ಮೇಘ ನೀಲಿಯ ಮೇಘ, ಮೇಘ ಮಲ್ಹಾರ ಮೇಘ… ಅಂತಾ ಹಾಡು ಹಾಡಿದ್ದರು. ಇದೀಗ ಇದೇ ವಿಡಿಯೋ ಇಟ್ಟುಕೊಂಡು ಮತ್ತೊಮ್ಮೆ ಕೆಲವರು ಗಾಳಿ ಸುದ್ದಿ ಹರಡುವ ಮೂಲಕ ಚರ್ಚೆ ಶುರು ಮಾಡಿದ್ದಾರೆ

ಖಾಸಗಿ ಮಾದ್ಯಮವೊಂದು ಮೇಘನರಾಜ್ ಜೊತೆಗೆ ಎರಡನೇ ಅಲ್ಲದೆ ಮದುವೆ ಬಗ್ಗೆ ಕೇಳಿದಾಗ ವಿಜಯರಾಘವೇಂದ್ರ ಸ್ಪಷ್ಟನೆ ನೀಡಿದ್ದಾರೆ. ‘ನಾನು ಮೇಘನಾರಾಜ್ ಅವರಿಗೆ ಸ್ನೇಹಿತ ಅಷ್ಟೇ. ಮದುವೆ ಆಗುವುದು ಸುಳ್ಳು ಸುದ್ದಿ. ನಾನು ಆ ರೀತಿ ಯೋಚನೆ ಮಾಡಲು ಸಾಧ್ಯವಿಲ್ಲ’ ಎಂದು ವಿಜಯರಾಘವೇಂದ್ರ ಕಡ್ಡಿಮುರಿದಂತೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Chinnaswamy Stampede: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಲಿತ ಪ್ರಕರಣ: ಐಪಿಎಸ್‌ ವಿಕಾಸ್‌ ಕುಮಾರ್‌ ಅಮಾನತು ರದ್ದು, ಹೈಕೋರ್ಟ್‌ ಮೊರೆಹೋದ ಸರಕಾರ