Home News Puttur: ಅನುಮತಿ ರಹಿತ ಪ್ರತಿಭಟನೆ ಮಾಡಿದ SDPI: 30 ಜನರ ವಿರುದ್ಧ ಪ್ರಕರಣ ದಾಖಲು

Puttur: ಅನುಮತಿ ರಹಿತ ಪ್ರತಿಭಟನೆ ಮಾಡಿದ SDPI: 30 ಜನರ ವಿರುದ್ಧ ಪ್ರಕರಣ ದಾಖಲು

Hindu neighbor gifts plot of land

Hindu neighbour gifts land to Muslim journalist

Puttur: ನಗರದ ಕಿಲ್ಲೆ ಮೈದಾನದ ಬಳಿ ಅಕ್ರಮವಾಗಿ ಗುಂಪು ಸೇರಿ, ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಧ್ವನಿವರ್ಧಕ ಬಳಿ ಪ್ರತಿಭಟನೆ ಮಾಡಿದ ಆರೋಪದಲ್ಲಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಹಾಗೂ ಇತರರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

02-07-2025 ರ ಸಂಜೆ ಪುತ್ತೂರು ಕಸಬಾ ಗ್ರಾಮದ ಕಿಲ್ಲೆ ಮೈದಾನದ ಬಳಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅದ್ಯಕ್ಷರಾದ ಅಶ್ರಫ್‌ ಬಾವು ಅವರ ನೇತೃತ್ವದಲ್ಲಿ 30 ಜನರು ಜಮಾಯಿಸಿದ್ದು, ಇವರು ಯಾವುದೇ ಪೂರ್ವಾನುಮತಿಯನ್ನು ಪಡೆಯದೇ, ಧ್ವನಿವರ್ಧಕವನ್ನು ಬಳಸಿ ಪ್ರತಿಭಟನೆಯ ನಡೆಸಿರುವುದು ವರದಿಯಾಗಿದೆ.

ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಆರೋಪಿತರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Bengaluru Stampede: ಬೆಂಗಳೂರಿನ ಕಾಲ್ತುಳಿತ ಪ್ರಕರಣ – ಆರ್‌ಸಿಬಿ, ಕೆಎಸ್‌ಸಿಎಯಿಂದ ಲಿಖಿತ ಉತ್ತರ ಕೇಳಿದ ಬಿಸಿಸಿಐ ಒಂಬುಡ್ಸ್‌ಮನ್