Home News ಎಸ್‌ಬಿಐ ಗ್ರಾಹಕರಿಗೊಂದು ಸಿಹಿಸುದ್ದಿ !! | ಯೋನೋ ಆಪ್ ನಲ್ಲಿ 70% ಕ್ಕಿಂತ ಹೆಚ್ಚು ರಿಯಾಯಿತಿ...

ಎಸ್‌ಬಿಐ ಗ್ರಾಹಕರಿಗೊಂದು ಸಿಹಿಸುದ್ದಿ !! | ಯೋನೋ ಆಪ್ ನಲ್ಲಿ 70% ಕ್ಕಿಂತ ಹೆಚ್ಚು ರಿಯಾಯಿತಿ ದರದಲ್ಲಿ ಸಮ್ಮರ್ ಶಾಪಿಂಗ್ ಕೊಡುಗೆ

Hindu neighbor gifts plot of land

Hindu neighbour gifts land to Muslim journalist

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಎಸ್‌ಬಿಐ ಶಾಪಿಂಗ್ ಮೇಲೆ ಅದ್ಭುತ ಕೊಡುಗೆಗಳನ್ನು ಪರಿಚಯಿಸುತ್ತಿದೆ. ನೀವೂ ಕೂಡ ಸಮ್ಮರ್ ಶಾಪಿಂಗ್ ಬಗ್ಗೆ ಯೋಚಿಸುತ್ತಿದ್ದರೆ ಎಸ್‌ಬಿಐ ಯೋನೊ ಆಪ್ ಮೂಲಕ ಆರ್ಡರ್ ಮಾಡಿ ಭರ್ಜರಿ ರಿಯಾಯಿತಿ ಪಡೆಯಿರಿ. ಅದಕ್ಕಾಗಿ ಮೊದಲು ಎಸ್‌ಬಿಐ ಯೋನೊ ಆಪ್ ಶಾಪಿಂಗ್ ಆಫರ್ ಬಗ್ಗೆ ವಿವರವಾಗಿ ತಿಳಿಯಿರಿ.

ಎಸ್‌ಬಿಐ ಯೋನೊ ಆಪ್ ಶಾಪಿಂಗ್ ಆಫರ್ ಬಗ್ಗೆ ಸ್ವತಃ ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಈ ಬೇಸಿಗೆಯಲ್ಲಿ, ಟ್ರೆಂಡ್‌ಸೆಟರ್ ಆಗಿರಿ! ಯೋನೋ ಮೂಲಕ ಟಾಪ್ ಫ್ಯಾಶನ್ ಬ್ರ್ಯಾಂಡ್‌ಗಳನ್ನು ಖರೀದಿಸಿ ಮತ್ತು 70% ವರೆಗೆ ರಿಯಾಯಿತಿಯನ್ನು ಆನಂದಿಸಿ. ಈಗಲೇ ಯೋನೋ ಡೌನ್‌ಲೋಡ್ ಮಾಡಿ ಎಂದು ಟ್ವಿಟರ್ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದೆ.

ಎಸ್‌ಬಿಐ ಯೋನೊ ಆಪ್ ಶಾಪಿಂಗ್ ಆಫರ್ ಕೊಡುಗೆ ಲಾಭವನ್ನು ಈ ರೀತಿ ಪಡೆಯಿರಿ:

*ಎಸ್‌ಬಿಐ ಯೋನೊ ಆಪ್ ಶಾಪಿಂಗ್ ಆಫರ್ ಕೊಡುಗೆಯ ಲಾಭವನ್ನು ಪಡೆಯಲು ಮೊದಲು ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಯೋನೋ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
*ಎಸ್‌ಬಿಐನ ಅಧಿಕೃತ ವೆಬ್‌ಸೈಟ್ ಮಾತ್ರವಲ್ಲದೆ ನೀವು ಗೂಗಲ್ ಪ್ಲೇ ಸ್ಟೋರ್‌ನಿಂದಲೂ ಸಹ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ.
*ಆಪ್ ಅನ್ನು ಡೌನ್‌ಲೋಡ್ ಮಾಡಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ.
*ಎಸ್‌ಬಿಐ ಯೋನೊ ಅಪ್ಲಿಕೇಶನ್‌ನಲ್ಲಿ ನೀವು ಲೈಫ್‌ಸ್ಟೈಲ್, ಟ್ರೆಂಡ್‌ಗಳು, ಟೈಟಾನ್, ಬಿಬಾ, ಅಜಿಯೊ ಇನ್ನೂ ಮೊದಲಾದ ಬ್ರಾಂಡ್‌ಗಳಿಂದ ಶಾಪಿಂಗ್ ಮಾಡುವ ಆಯ್ಕೆಯನ್ನು ಪಡೆಯುವಿರಿ.
*ಎಸ್‌ಬಿಐ ಯೋನೊ ಆಪ್ ಮೂಲಕ ನೀವು ಭರ್ಜರಿ ಶಾಪಿಂಗ್ ಮಾಡಬಹುದು. ಏಕೆಂದರೆ
ಈ ಆಪ್ ಮೂಲಕ ಟ್ರೆಂಡ್‌ಗಳಲ್ಲಿ ಶಾಪಿಂಗ್ ಮಾಡುವಾಗ ನಿಮಗೆ ಶೇ. 70ರಷ್ಟು ರಿಯಾಯಿತಿ ಲಭ್ಯವಾಗಲಿದೆ.

ಶಾಪಿಂಗ್ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ಪಡೆಯುವ ಮಾರ್ಗವನ್ನೂ ಸಹ ಟ್ವೀಟ್‌ನಲ್ಲಿ ವಿವರಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೋನೋ ಎಸ್‌ಬಿಐ ಉನ್ನತ ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ ಅತ್ಯಾಕರ್ಷಕ ಡೀಲ್‌ಗಳನ್ನು ನೀಡುತ್ತದೆ. ಹೆಚ್ಚುವರಿ ಪ್ರಯೋಜನಗಳು ಮತ್ತು ಬಹುಮಾನಗಳಿಗಾಗಿ ನಿಮ್ಮ ಎಸ್‌ಬಿಐ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸಿ ಎಂದು ಮಾಹಿತಿ ನೀಡಿದೆ.