Home News Deepika Das: ಇನ್ಸ್ಟಾ ಸ್ಟೋರಿ ಹಾಕಿ ಯಶ್ ತಾಯಿ ಪುಷ್ಪಗೆ ದೀಪಿಕಾ ದಾಸ್ ಖಡಕ್ ವಾರ್ನಿಂಗ್!!

Deepika Das: ಇನ್ಸ್ಟಾ ಸ್ಟೋರಿ ಹಾಕಿ ಯಶ್ ತಾಯಿ ಪುಷ್ಪಗೆ ದೀಪಿಕಾ ದಾಸ್ ಖಡಕ್ ವಾರ್ನಿಂಗ್!!

Hindu neighbor gifts plot of land

Hindu neighbour gifts land to Muslim journalist

Deepika Das: ತನ್ನ ದೊಡ್ಡಮ್ಮ ಆಗಿರೋ ನಟ ಯಶ್‌ ತಾಯಿ ಪುಷ್ಪ ಅವರು ದೀಪಿಕಾ ದಾಸ್‌ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಕ್ಕೆ ದೀಪಿಕಾ ದಾಸ್‌, ತಿರುಗೇಟು ಕೊಟ್ಟಿದ್ದಾರೆ.

ಕೊತ್ತಲವಾಡಿ ಸಿನಿಮಾ ಪ್ರಚಾರದ ವೇಳೆ ಪುಷ್ಪ ಅರುಣ್‌ ಕುಮಾರ್‌ ಅವರು ದೀಪಿಕಾ ದಾಸ್‌ ಬಗ್ಗೆ ಹೇಳಿದ್ದರು. ಅದಕ್ಕೂ ಮುನ್ನ ಇತ್ತೀಚೆಗೆ ಸಂದರ್ಶನದಲ್ಲಿ ದೀಪಿಕಾ‌ ದಾಸ್‌ಗೆ ನನ್ನ ಕಂಡರೆ ಭಯ ಎಂದು ಕೂಡ ಹೇಳಿದ್ದರು. ಇದಕ್ಕೆ ದೀಪಿಕಾ ದಾಸ್‌ ತಿರುಗೇಟು ಕೊಟ್ಟಿದ್ದಾರೆ.

ಯಶ್ ತಾಯಿ ಪುಷ್ಪ ಹೇಳಿದ್ದೇನು?

ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ “ದೀಪಿಕಾ ದಾಸ್‌ ಅವರಿಗೆ ನಿಮ್ಮ ಪ್ರೊಡಕ್ಷನ್‌ ಹೌಸ್‌ನಲ್ಲಿ ಅವಕಾಶ ಕೊಡ್ತೀರಾ?” ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಪುಷ್ಪ ಅವರು “ದೀಪಿಕಾ ದಾಸ್‌ಗೂ ನಮಗೂ ಆಗಿ ಬರೋದಿಲ್ಲ. ನಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳೋಕೆ ಅವಳು ಯಾವ ದೊಡ್ಡ ಹೀರೋಯಿನ್ ಅಂತ ಹಾಕಿಕೊಳ್ಳಬೇಕು? ಸಂಬಂಧ ಆದರೂ ಅವಳನ್ನು ದೂರದಲ್ಲಿ ಇಟ್ಟಿದ್ದೀವಿ. ಅವರ ಬಗ್ಗೆ ಯಾಕೆ ಕೇಳ್ತೀರಾ? ನನ್ನ ಮಗ ಬೈಯಲ್ವಾ? ಬೇರೆ ಹೀರೋಯಿನ್ಸ್‌ ಇಲ್ವಾ? ಅವರ ಬಗ್ಗೆ ಕೇಳಿ” ಎಂದು ಪುಷ್ಪಾ ಅವರು ಹೇಳಿದ್ದರು.

ದೀಪಿಕಾ ದಾಸ್‌ ಏನಂದ್ರು?

“ಹೊಸ ಕಲಾವಿದರನ್ನು ಬೆಳೆಸೋ ಜನರು ಕಲಾವಿದರಿಗೆ ಬೆಲೆ ಕೊಡೋದನ್ನು ಕಲಿತಿರಬೇಕು. ಇಲ್ಲಿಯವರೆಗೆ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ, ಮುಂದೆಯೂ ಬರೋದಿಲ್ಲ. ಕೆಲವರಿಗೆ ಬೆಲೆ ಕೊಟ್ಟ ಮಾತ್ರಕ್ಕೆ ಯಾರನ್ನು ಕಂಡು ಯಾರಿಗೂ ಭಯ ಇಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿಥ್‌ ಡ್ಯೂ ರೆಸ್ಪೆಕ್ಟ್‌ ಟು ಸ್ಟಾರ್‌ ಆಫ್‌ ಅವರ್‌ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ ಏನೂ ಸಾಧನೆ ಮಾಡದಿದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡೋ ಹಕ್ಕು ಯಾರಿಗೂ ಇಲ್ಲ” ಎಂದು ಪುಷ್ಪ ಮಾತಿಗೆ ದೀಪಿಕಾ ದಾಸ್‌ ತಿರುಗೇಟು ಕೊಟ್ಟಿದ್ದಾರೆ.

Tik Tok: ಭಾರತಕ್ಕೆ ಮತ್ತೆ Tik Tok ರೀ ಎಂಟ್ರಿ? ರೀಲ್ಸ್ ಪ್ರಿಯರಿಗೆ ಸಿಗುತ್ತಾ ಗುಡ್ ನ್ಯೂಸ್?