Home News Good news: ಕೃಷಿ ಭೂಮಿಯಲ್ಲಿನ ಮರ ಕಡಿಯಲು ನಿಯಮ ಸರಳೀಕರಣ!

Good news: ಕೃಷಿ ಭೂಮಿಯಲ್ಲಿನ ಮರ ಕಡಿಯಲು ನಿಯಮ ಸರಳೀಕರಣ!

Hindu neighbor gifts plot of land

Hindu neighbour gifts land to Muslim journalist

Good news: ಜೂನ್ 19 ರಂದು ಪರಿಸರ ಸಚಿವಾಲಯವು ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಕಳುಹಿಸಿದ್ದು, ಕೃಷಿ ಭೂಮಿಯಲ್ಲಿ ಮರಗಳನ್ನು ಕಡಿಯುವ ಮಾದರಿ ನಿಯಮಗಳ ಉದ್ದೇಶವು, ಕೃಷಿ ಅರಣೀಕರಣದಲ್ಲಿ ವ್ಯವಹಾರ ಮಾಡುವ ಸುಲಭತೆಯನ್ನು ಹೆಚ್ಚಿಸುವುದು ಮತ್ತು ಅನಗತ್ಯ ಅಡೆತಡೆಗಳನ್ನು ಎದುರಿಸದೆ ರೈತರು ತಮ್ಮ ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಈ ಮೊದಲು ಕಾಲ ಕೃಷಿ ಭೂಮಿಯಲ್ಲಿ ಮರಗಳನ್ನು ಕಡಿಯಲು ಸ್ಪಷ್ಟವಾದ, ಸರಳ ನಿಯಮಗಳು ಇಲ್ಲದಿದ್ದರಿಂದ ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯಲು ರೈತರಿಗೆ ಅಡಚಣೆಯಾಗುತ್ತಿತ್ತು. ಈ ಹೊಸ ಮಾರ್ಗಸೂಚಿಯಿಂದ ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯುವುದು ಸಲುಭವಾಗಲಿದೆ. ಮತ್ತು ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯಲು ರೂಪಿಸಲಾದ ನಿಯಮಗಳನ್ನು ಸರಳೀಕರಣಗೊಳಿಸುವಂತೆ ಕೇಂದ್ರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

10 ಕ್ಕಿಂತ ಹೆಚ್ಚು ಮರಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಹೊಂದಿರುವ ಭೂಮಿ ಮಾಲೀಕರು NTMS ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು, ಕಡಿಯಬೇಕಾದ ಮರಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಬೇಕು. ರೈತರು ತಮ್ಮ ಭೂಮಿಯ ವಿವರ, ಮರಗಳ ಸಂಖ್ಯೆ ಪ್ರಭೇದ, ನೆಟ್ಟ ದಿನಾಂಕ ಮತ್ತು ಎತ್ತರದ ವಿವರಗಳನ್ನು ನೀಡಬೇಕು. ಅದನ್ನು ಎಸ್‌ಎಲ್‌ಸಿ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡುತ್ತದೆ. ಮರಗಳನ್ನು ಕಡಿಯಲು ಮತ್ತು ಸಾಗಾಣಿಕೆ ಮಾಡಲು ಅನುಮತಿ ಪತ್ರದ ಅಗತ್ಯವಿದೆ. ಅರಣ್ಯ, ಕೃಷಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ.

ಇದನ್ನೂ ಓದಿ: Kodagu: ಕೊಡಗು ಜಿಲ್ಲೆಯ ಮಳೆ ವಿವರ!